ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ಗೆ ತವರೂರ ಭವ್ಯ ಸ್ವಾಗತ

KannadaprabhaNewsNetwork |  
Published : Sep 14, 2026, 03:00 AM IST
ಅರ್ಜಿ | Kannada Prabha

ಸಾರಾಂಶ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ (ಕೆ.ಎಂ.ಇ.ಎಫ್.) ಸಹಯೋಗದಲ್ಲಿ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗಾಗಿ ನೀಡುವ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026ರ ವಿವಿಧ ವಿಭಾಗಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.75%ಕ್ಕಿಂತ ಮೇಲ್ಪಟ್ಟ ಅಂಕಗಳೊಂದಿಗೆ ಉತ್ತೀರ್ಣರಾಗಿ ಇದೀಗ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೆ.ಎಂ.ಎ. ಸದಸ್ಯರ ಮಕ್ಕಳು "ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026 "ಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು.

ಮಡಿಕೇರಿ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ (ಕೆ.ಎಂ.ಇ.ಎಫ್.) ಸಹಯೋಗದಲ್ಲಿ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗಾಗಿ ನೀಡುವ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026ರ ವಿವಿಧ ವಿಭಾಗಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.75%ಕ್ಕಿಂತ ಮೇಲ್ಪಟ್ಟ ಅಂಕಗಳೊಂದಿಗೆ ಉತ್ತೀರ್ಣರಾಗಿ ಇದೀಗ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೆ.ಎಂ.ಎ. ಸದಸ್ಯರ ಮಕ್ಕಳು "ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026 "ಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು.

2024-25ನೇ ಸಾಲಿನಲ್ಲಿ ಪದವೀಧರಾಗಿರುವ ಕೆ.ಎಂ.ಎ. ಸದಸ್ಯರ ಅರ್ಹ ಮಕ್ಕಳಿಂದ ''''''''''''''''''''''''''''''''ಕೆ. ಎಂ. ಎ. ಪದವಿ ಪುರಸ್ಕಾರಕ್ಕೂ ಅರ್ಜಿ ಆಹ್ವಾನಿಸಲಾಗಿದೆ. ಕಲೆ, ವಾಣಿಜ್ಯ, ವಿಜ್ಞಾನ ಹಾಗೂ ವೃತ್ತಿಪರ ಕೋರ್ಸುಗಳಾದ ಬಿ.ಇ., ಬಿ.ಟೆಕ್., ಬಿಬಿಎ, ಬಿಸಿಎ, ಬಿಎಚ್ಎಂ, ಬಿ.ಫಾರ್ಮ, ಬಿ.ಎಡ್., ಎಂ.ಬಿ.ಬಿ.ಎಸ್., ಬಿ.ಡಿ.ಎಸ್‌., ಬಿ.ಎ.ಎಂ. ಎಸ್., ಎಲ್‌.ಎಲ್. ಬಿ., ಪತ್ರಿಕೋದ್ಯಮ ಪದವಿ ಸೇರಿದಂತೆ ಮಾನ್ಯತೆ ಪಡೆದ ವಿದ್ಯಾಲಯಗಳಿಂದ ಯಾವುದೇ ಪದವಿ ಪಡೆದ ಅರ್ಹ ಪದವೀಧರರು ಕೆಎಂಎ ಪದವಿ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈಗಾಗಲೇ ಘೋಷಣೆಯಾಗಿರುವ 2025-26ನೇ ಸಾಲಿನ 5ನೇ, 7ನೇ ಮತ್ತು 10ನೇ ತರಗತಿಯ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಶೇ.75% ಕ್ಕಿಂತ ಮೇಲ್ಪಟ್ಟು ಅಂಕಗಳಿಸಿರುವ ಕೆ.ಎಂ.ಎ. ಸದಸ್ಯರ ಮಕ್ಕಳು ಮದ್ರಸಾ ವಿಭಾಗದ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026ಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದು.

ಎಸ್.ಎಸ್. ಎಲ್. ಸಿ., ದ್ವಿತೀಯ ಪಿಯುಸಿ ಮತ್ತು ಮದ್ರಸಾ ವಿಭಾಗದ ಶೈಕ್ಷಣಿಕ ಪುರಸ್ಕಾರಕ್ಕಾಗಿ ಶಾಲಾ ಮುಖ್ಯೋಪಾಧ್ಯಾಯರಿಂದ/ ಕಾಲೇಜಿನ ಪ್ರಾಂಶುಪಾಲರಿಂದ/ ಮದರಸ ಅಧ್ಯಾಪಕರಿಂದ ದೃಢೀಕೃತಗೊಂಡ ಅಂಕಪಟ್ಟಿ, ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಬಗ್ಗೆ ಹಾಲಿ ವ್ಯಾಸಂಗ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ಸೇರಿದಂತೆ ತಮ್ಮ ಮನೆತನದ, ಪೋಷಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗು ಇತ್ತೀಚಿನ 3 ಭಾವಚಿತ್ರದೊಂದಿಗೆ ಮತ್ತು ಪದವಿ ಪುರಸ್ಕಾರಕ್ಕಾಗಿ ಘಟಿಕೋತ್ಸವದಲ್ಲಿ ನೀಡಲಾದ ಪದವಿ ಪ್ರಮಾಣಪತ್ರ, ಆಧಾರ್ ಪ್ರತಿ ಸೇರಿದಂತೆ ತಮ್ಮ ಮನೆತನದ, ಪೋಷಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ ಮತ್ತು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 3 ಭಾವಚಿತ್ರದೊಂದಿಗೆ ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ (ರಿ.), ಪ್ರಧಾನ ಕಚೇರಿ, ಡಿ.ಹೆಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಪಿನ್ ಕೋಡ್: 571218 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 30-09-2026ರಂದು ಕೊನೆಯ ದಿನ.ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆ ಇಲ್ಲದ ಅರ್ಜಿಗಳನ್ನು ಮೊದಲ ಹಂತದಲ್ಲೆ ತಿರಸ್ಕರಿಸಲಾಗುವುದು. ಎಲ್ಲಾ ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳ ಪೋಷಕರ ಪೈಕಿ ಒಬ್ಬರು (ತಂದೆ ಅಥವಾ ತಾಯಿ) ಕೆ.ಎಂ.ಎ. ಸದಸ್ಯತ್ವ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು ಎಂಬುದು ಕಡ್ಡಾಯವಾಗಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886060342 (ಪ್ರಧಾನ ಕಾರ್ಯದರ್ಶಿ) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರು ಸಚಿವ ಸಂಪುಟ ಸಭೆಗೆ ಬಿಜೆಪಿ ದ.ಕ.ದ 44 ಬೇಡಿಕೆಗಳ ಪಟ್ಟಿ ಸಲ್ಲಿಕೆ
ಜನತೆಗೆ ಪ್ರಜಾ ಸೇವೆಯಡಿ ನ್ಯಾಯ ದೊರೆಯಲು ಅವಕಾಶ: ಅಶೋಕ್ ರೈ