ತಾಳಿಕೋಟೆಯಲ್ಲಿ ಅಜ್ಜನ ಜಾತ್ರೆಯ ಸಂಭ್ರಮ

KannadaprabhaNewsNetwork | Published : Jul 2, 2025 11:47 PM
ತಾಳಿಕೋಟೆ 1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಶ್ರೀ ಖಾಸ್ಗತಜ್ಜನ ಜಾತ್ರೆ ಹಿನ್ನಲೆ ತಾಳಿಕೋಟೆ ಪಟ್ಟಣ ಎಲ್ಲಡೆ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಪಟ್ಟಣದ ವಿವಿಧ ಪ್ರಮುಖ ಮಾರ್ಗಗಳು ವಿದ್ಯುತ್ ದ್ವೀಪಗಳನ್ನು ಅಳವಡಿಸಿ ದೀಪಾವಳಿ ಹಬ್ಬದಂತೆ ಅಲಂಕಾರ ಮಾಡಿದ್ದಾರೆ. ಶ್ರೀಮಠದ ಅಲಂಕಾರಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಲು ಹೊರವಲಯ ಹಾಗೂ ಗೋಪುರ, ಶ್ರೀಮಠದ ಒಳಭಾಗದಲ್ಲಿಯ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳವರ ಬೆಳ್ಳಿ ಉತ್ಸವ ಮೂರ್ತಿಗಳಿಗೆ ರಾಜವೈಭವದ ಮಂಟಪಗಳಂತೆ ಅಲಂಕೃತಗೊಂಡಿವೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶ್ರೀ ಖಾಸ್ಗತಜ್ಜನ ಜಾತ್ರೆ ಹಿನ್ನಲೆ ತಾಳಿಕೋಟೆ ಪಟ್ಟಣ ಎಲ್ಲಡೆ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಪಟ್ಟಣದ ವಿವಿಧ ಪ್ರಮುಖ ಮಾರ್ಗಗಳು ವಿದ್ಯುತ್ ದ್ವೀಪಗಳನ್ನು ಅಳವಡಿಸಿ ದೀಪಾವಳಿ ಹಬ್ಬದಂತೆ ಅಲಂಕಾರ ಮಾಡಿದ್ದಾರೆ. ಶ್ರೀಮಠದ ಅಲಂಕಾರಕ್ಕೆ ಇನ್ನಷ್ಟು ಮೆರಗು ಹೆಚ್ಚಿಸಲು ಹೊರವಲಯ ಹಾಗೂ ಗೋಪುರ, ಶ್ರೀಮಠದ ಒಳಭಾಗದಲ್ಲಿಯ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳವರ ಬೆಳ್ಳಿ ಉತ್ಸವ ಮೂರ್ತಿಗಳಿಗೆ ರಾಜವೈಭವದ ಮಂಟಪಗಳಂತೆ ಅಲಂಕೃತಗೊಂಡಿವೆ. ನೂತನವಾಗಿ ಪ್ರತಿಷ್ಠಾಪಿಸಿರುವ ವಿರಕ್ತಶ್ರೀಗಳ ಮೂರ್ತಿಗೆ ರುದ್ರಾಕ್ಷಿ ಮಂಟಪ ಮಾಡಿದ್ದು ಜಾತ್ರೆಯ ವೈಭವಕ್ಕೆ ಇನ್ನಷ್ಟು ಮೆರಗು ಬಂದಂತಾಗಿದೆ.ಜೂ.೩೦ರಿಂದ ಪ್ರಾರಂಭಗೊಂಡಿರುವ ಜಾತ್ರೋತ್ಸವದ ಅಂಗವಾಗಿ ಸಪ್ತ ಭಜನೆಯಲ್ಲಿ ಸುಮಾರು ೧೬೦ ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳುವದರೊಂದಿಗೆ ಭಕ್ತಿ ಸಮರ್ಪಣೆಗೆ ಮುಂದಾಗಿದೆ. ಒಂದು ಗ್ರಾಮದವರಿಗೆ ೧ ಗಂಟೆ ಮೀಸಲಿಡಲಾಗಿದ್ದು, ಸದರಿ ಸಪ್ತ ಭಜನಾ ಕಾರ್ಯವು ಆಶಾಡ ಏಕಾದಶಿ ದಿನವಾದ ದಿ.೭ರಂದು ಗೋಪಾಲ ಕಾವಲಿ ಒಡೆಯುವ ದಿನ ಮುಕ್ತಾಯಗೊಳ್ಳಲಿದೆ.ಪಾನಿಪುರಿ ಪ್ರಸಾದ:

ಸುಮಾರು ೯ ದಿನಗಳ ಈ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಿಂದ ಜು.೬ ರಂದು ಮಧ್ಯಾಹ್ನ ಪ್ರಸಾದಕ್ಕೆ ಮೊದಲು ಪಾನಿಪುರಿ ಪ್ರಸಾದ ನೀಡಲಾಗುತ್ತಿದೆ. ವಿಶೇಷವಾಗಿ ದಿ.೭ರಂದು ಗೋದಿ ಹುಗ್ಗಿ, ಅನ್ನ ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇನ್ನು, ವಿಜಯಪುರ ರೊಟ್ಟಿ ವಿವಿಧ ತರಹದ ಪಲ್ಲೆ, ಸಾಂಬಾರ, ಅನ್ನ, ಸಜ್ಜಕ ಒಳಗೊಂಡಂತೆ ವಿವಿಧ ಬಗೆಯ ಪ್ರಸಾದ ವ್ಯವಸ್ಥೆ ನಡೆಯಲಿದೆ.ಎಲ್ಲ ಜಾತ್ರೆ ಉತ್ಸವಗಳಲ್ಲಿಯೇ ವಿಶೇಷತೆಯನ್ನು ಪಡೆದುಕೊಂಡಿರುವ ಶ್ರೀ ಖಾಸ್ಗತಜ್ಜನ ಜಾತ್ರೆ ಭಾವೈಕ್ಯತೆಗೆ ಸಾಕ್ಷೀಕರಿಸುವದರೊಂದಿಗೆ ಈ ಬಾರಿ ಭಕ್ತರ ಮನ ತಣಿಸುವಂತೆ ಸುಂದರ ಸಂಭ್ರಮ, ಭಕ್ತಿಯ ಸಡಗರ ಹೆಚ್ಚಾಗಿದೆ.----

ಕೋಟ್‌

ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ. ಶ್ರೀ ಖಾಸ್ಗತಜ್ಜನ ಜಾತ್ರೆ ಭಕ್ತರಿಂದಲೇ ಮೆರುಗು ಪಡೆದುಕೊಂಡಿದ್ದು, ಸಂಭ್ರಮದ ಜಾತ್ರೆಯ ಸೊಬಗನ್ನು ಹೆಚ್ಚಿಸಲು ಭಕ್ತರೇ ನಿಂತು ಎಲ್ಲ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಭಕ್ತರ ಮಠ ಅಜ್ಜನ ಜಾತ್ರೆಗೆ ಎಲ್ಲರೂ ಬಂದು ಶ್ರೀ ಖಾಸ್ಗತಜ್ಜನ ಕೃಪೆಗೆ ಪಾತ್ರರಾಗಬೇಕು.

ಬಾಲಶಿವಯೋಗಿ ಸಿದ್ದಲಿಂಗಶ್ರೀ, ಖಾಸ್ಗತೇಶ್ವರ ಮಠ

PREV