ಕೆಜಿಎಫ್ ಕ್ಷೇತ್ರದ ಬಾಕಿ ಕಾಮಗಾರಿಗೆ ಅನುದಾನ

KannadaprabhaNewsNetwork |  
Published : Oct 10, 2025, 01:00 AM IST
೯ಬಿಟಿಎಂ-೧ಬ್ರಿಡ್ಜ್ ಉದ್ಘಾಟಿಸುತ್ತಿರುವ ಸಚಿವ ಜಾರಕಿಹೋಳಿ ಆಹಾರ ಸಚಿವ ಕೆಹೆಚ್,ಮುನಿಯಪ್ಪ, ಶಾಸಕಿ ಎಂ ರೂಪಕಲಾ ಮತ್ತು ಅಧಿಕಾರಿಗಳು ಗಣ್ಯರು. | Kannada Prabha

ಸಾರಾಂಶ

ಕಳೆದ ೧೦೦ ವರ್ಷಗಳಿಂದ ಈ ಭಾಗದ ಜನರು ಮಳೆ ಬಂದರೆ ಬೇತಮಂಗಲ ಗ್ರಾಮಕ್ಕೆ ಬರಲು ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಇದನ್ನು ತಾವು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಗಮನಕ್ಕೆ ತಂದು ಬ್ರಿಡ್ಜ್ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ೧೦ ಕೋಟಿ ಅನುದಾನ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೇತಮಂಗಲಕರ್ನಾಟಕ ರಾಜ್ಯದಲ್ಲಿ ೧ ಲಕ್ಷ ಕಿಮೀ ರಸ್ತೆಗಳ ವ್ಯಾಪ್ತಿ ಇದ್ದು, ರಾಜ್ಯದಲ್ಲಿ ಅನೇಕ ಬ್ರಿಡ್ಜ್‌ಗಳು ರಸ್ತೆಗಳು ಇವೆ ಅವುಗಳಲ್ಲಿ ಶಿಥಿಲಗೊಂಡಿರುವ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಮತ್ತು ಅಗತ್ಯವಿರುವ ಕಡೆ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.ನಲ್ಲೂರು ಮತ್ತು ನತ್ತ ಗ್ರಾಮಗಳ ನಡುವೆ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮೀಸಿರುವ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.ಕಾಮಗಾರಿಗೆ ವಿಶೇಷ ಅನುದಾನ

ಕೆಜಿಎಫ್‌ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕಿ ರೂಪಕಲಾಶಶಿಧರ್ ವಿವರಿಸಿದ್ದಾರೆ. ಈ ಕಾಮಗಾರಿಗೆ ೧೦ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇ, ಆದರೆ ನಾವು ಬಿಡುಗಡೆ ಮಾಡಿರುವ ಅನುದಾನದಲ್ಲಿ ಯಾವ ರೀತಿ ಬ್ರಿಡ್ಜ್ ನಿರ್ಮಾಣವಾಗಲಿದೆ ಎಂಬ ಆತಂಕ ಕಾಡುತ್ತಿತ್ತು, ಆದರೆ ಇಂದು ಸ್ಥಳಕ್ಕೆ ಬಂದು ನೋಡಿದಾಗ ನನಗೆ ತೃಪ್ತಿ ತಂದಿದೆ, ಈ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ವಿಶೇಷ ಅನುದಾನ ಸಹ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಮಾರಿಕುಪ್ಪಂ ಕುಪ್ಪಂ ರೈಲ್ವೆ ಸಂರ್ಪಕ ಮಾರ್ಗ ಹಾಗೂ ರೈಲ್ವೆ ಕೋಚ್ ಕಾರ್ಖಾನೆ ಕಾಮಗಾರಿಗೆ ಸಂಸದ ಮಲ್ಲೇಶಬಾಬು ಮುಂದಾಗಬೇಕು ಎಂದರು. ನೂರು ವರ್ಷದ ಸಮಸ್ಯೆ ಪರಿಹಾರ

ಶಾಸಕಿ ರೂಪಕಲಾಶಶಿಧರ್ ಮಾತನಾಡಿ, ಕ್ಷೇತ್ರದಲ್ಲಿ ಸುರ್ವಣ ಅಕ್ಷರಗಳಲ್ಲಿ ಬರೆಯುವ ನಿಟ್ಟಿನಲ್ಲಿ ನಲ್ಲೂರು ಹಾಗೂ ನತ್ತ ಗ್ರಾಮಗಳ ನಡುವೆ ಸಣ್ಣ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಕಳೆದ ೧೦೦ ವರ್ಷಗಳಿಂದ ಈ ಭಾಗದ ಜನರು ಮಳೆ ಬಂದರೆ ಬೇತಮಂಗಲ ಗ್ರಾಮಕ್ಕೆ ಬರಲು ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಇದನ್ನು ತಾವು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಗಮನಕ್ಕೆ ತಂದು ಬ್ರಿಡ್ಜ್ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ೧೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.ಬಂಗಾರಪೇಟೆ ಶಾಸಕ ಎಸ್,ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಮಾಜಿ ಕೋಲಾರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಟಿ.ಗೋಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್, ಬೇತಮಂಗಲ ಗ್ರಾಪಂ ಅಧ್ಯಕ್ಷ ವೀನುಕಾರ್ಥಿಕ್, ಕೆಪಿಸಿಸಿ ಸದಸ್ಯ ದುರ್ಗಪ್ರಸಾದ, ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ