ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Nov 06, 2024, 11:51 PM IST
6ಕೆಕೆಆರ್1: ಕುಕನೂರು ಪಟ್ಟಣದಲ್ಲಿ ಅಂಬೇಡ್ಕರ್, ಬಾಲಭವನ ಮತ್ತು ಶಾದಿಮಹಲ್ ಭವನ ಕಾಮಗಾರಿಯನ್ನು ಶಾಸಕ ಬಸವರಾಜ ರಾಯರಡ್ಡಿ ಬುಧವಾರ ವೀಕ್ಷಣೆ ಮಾಡಿದರು.  | Kannada Prabha

ಸಾರಾಂಶ

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್, ಬಾಲಭವನ ಮತ್ತು ಶಾದಿಮಹಲ್ ಕಾಮಗಾರಿಯನ್ನು ಶಾಸಕ ಬಸವರಾಜ ರಾಯರಡ್ಡಿ ಬುಧವಾರ ವೀಕ್ಷಣೆ ಮಾಡಿದರು.

ಅಂಬೇಡ್ಕರ್, ಬಾಲ ಭವನ, ಶಾದಿಮಹಲ್ ಭವನ ವೀಕ್ಷಣೆ

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್, ಬಾಲಭವನ ಮತ್ತು ಶಾದಿಮಹಲ್ ಕಾಮಗಾರಿಯನ್ನು ಶಾಸಕ ಬಸವರಾಜ ರಾಯರಡ್ಡಿ ಬುಧವಾರ ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಅವರು, ಅಂಬೇಡ್ಕರ್ ಭವನ, ಶಾದಿಮಹಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಿರ್ಮಾಣವಾಗಬೇಕು ಎಂದರು.

ಕಟ್ಟಡಗಳಿಗೆ ಅಗತ್ಯಕ್ಕೆ ಬೇಕಾದ ಕೆಲಸದ ಮಾಹಿತಿ ಒದಗಿಸಿ, ಅದಕ್ಕೆ ಬೇಕಾದ ಅನುದಾನವನ್ನು ನಾನು ತಕ್ಷಣ ನೀಡುತ್ತೇನೆ ಎಂದರು.

ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಪಪಂ ಉಪಾಧ್ಯಕ್ಷ ಪ್ರಶಾಂತ್ ಆರುಬೆರಳ್ಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ಧೀನ್ ಗುಡಿಹಿಂದಲ್, ಸದಸ್ಯರಾದ ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಮಂಜುನಾಥ ಕೋಳೂರು, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ, ಸಿಡಿಪಿಒ ಬೆಟದಪ್ಪ ಮಾಳೇಕೊಪ್ಪ, ಜೆಇ ಶಿವಕುಮಾರ, ವೀರಯ್ಯ ದಳಪತಿ, ಯಲ್ಲಪ್ಪ ಕಲ್ಮನಿ, ಪರಶುರಾಮ ಸಕ್ರಣ್ಣವರ್, ರಮೇಶ ಮಾಳೇಕೊಪ್ಪ, ಸಣ್ಣಯಲ್ಲಪ್ಪ ಕಲ್ಮನಿ, ಮಂಜುನಾಥ ಯಡಿಯಾಪೂರ, ರಾಘವೇಂದ್ರ ಕಾತರಕಿ ಸೇರಿದಂತೆ ಅನೇಕರು ಇದ್ದರು.ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನಿಗದಿ ಮಾಡಿ:

ಕುಕನೂರು ತಾಲೂಕಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನಿಗದಿ ಮಾಡಲು ತಿಳಿಸಿದರು. ಈ ಮೊದಲು ಯಲಬುರ್ಗಾದಲ್ಲಿ ಚೆನ್ನಮ್ಮನ ಮೂರ್ತಿ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ಕುಕನೂರದಲ್ಲೂ ಸಹ ಮಾಡೋಣ ಎಂದರು.

ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಸನಗೌಡ್ರ ತೊಂಡಿಹಾಳ, ಕುಕನೂರು ತಾಲೂಕಾ ಅಧ್ಯಕ್ಷ ವೀರಣ್ಣ ಅಣ್ಣಿಗೇರಿ, ಕೊಟ್ರಪ್ಪ ತೋಟದ, ಈಶಪ್ಪ ಆರೇರ, ಮಲ್ಲಣ್ಣ ಕೂಡ್ಲೂರು, ಗದಿಗೆಪ್ಪ ಪವಾಡಿಶೆಟ್ಟಿ, ವಿನಾಯಕ ಬೇನಳ್ಳಿ, ಮಹೇಶ ಬನ್ನಿಕೊಪ್ಪ, ವೀರೇಶ ಸಬರದ, ರವೀಂದ್ರನಾಥ ಕೊಟ್ರಪ್ಪ ತೋಟದ, ರಾಮನಗೌಡ್ರ ಹುಚನೂರ, ಸಂತೋಷ ಬೆಣಕಲ್, ಚಂದ್ರು ಬಗನಾಳ ಇತರರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ