ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಖಾಲಿ ಇರುವ ನಿವೇಶನಗಳಲ್ಲಿ ಕಸತುಂಬಿರುವ ಬಗ್ಗೆ ಆಯಾ ಮಾಲೀಕರೆ ಎಚ್ಚರವಹಿಸಬೇಕು. ಸ್ವಚ್ಛತೆ ಕಾಪಾಡಲು ಮುಂದಾಗಬೇಕು. ಇಲ್ಲದಿದ್ದರೆ ನಗರಸಭೆ ವತಿಯಿಂದ ಎರಡು-ಮೂರು ಭಾರಿ ನೋಟಿಸ್ ನೀಡುತ್ತೇವೆ, ಆಗಲೂ ನಿರ್ಲಕ್ಷ್ಯವಹಿಸಿದರೆ ನಿವೇಶನ ಮುಟ್ಟುಗೊಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಮನೆಮನೆಗೆ ಬೇಟಿ ನೀಡಿ ವಾರ್ಡ್ ನ ನಿವಾಸಿಗಳ ಬೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ ,ಮಾಶಾಸನ, ಪಡಿತರ ಚೀಟಿ ಮತ್ತು ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ,ವಿದ್ಯತ್, ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ವಾರ್ಡ್ ಗಳ ಪರ್ಯಟನೆ ನಡೆಸಿದ್ದೇನೆ. ಖಾಲಿ ಸೈಟುಗಳಲ್ಲಿ ಗಿಡಗಂಟಿಗಳು ಎತ್ತರೆತ್ತರಕ್ಕೆ ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಸಮಸ್ಯೆ ಪರಿಹರಿಸಲು ಕ್ರಮ
ರಾಜ ಕಾಲುವೆ ಮೇಲೆ ಮನೆ ನಿರ್ಮಿಸಿ ಕೊಂಡಿರುವ ಬಡವರಿಗೆ ಸ್ಲಂ ಬೋರ್ಡ್ ನಿಂದ ಪಕ್ಕಾ ಮನೆಗಳನ್ನು ಕಟ್ಟಿಸಿ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಪಾದಯಾತ್ರೆ ವೇಳೆ ಎಂದಿನಂತೆ ಖಾತೆಗಳ ಸಮಸ್ಯೆ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ, ಚರಂಡಿ, ರಸ್ತೆಗುಂಡಿಗಳು ಅನ್ನೋ ದೂರುಗಳೆ ಹೆಚ್ಚಾಗಿ ಕೇಳಿಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ವೇಳೆ ನಗರಸಭೆಯ ಪೌರಾಯುಕ್ತ ಮಂಜುನಾಥ್,ನಗರ ಪೋಲಿಸ್ ಠಾಣೆಯ ಪಿಎಸೈ ಹೆಚ್. ನಂಜುಂಡಯ್ಯ,ಎರಡನೆ ವಾರ್ಡ್ ಸದಸ್ಯೆ ರತ್ನಮ್ಮ ಪರ ಅವರ ಮಗ ಅರುಣ್, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮುಖಂಡರಾದ ಶಕೀಲಾ ಬಾನು,ಸುಧಾವೆಂಕಟೇಶ್, ಜಿ.ಪಂ. ಮಾಜಿ ಸದಸ್ಯೆ ನಾರಾಯಣಮ್ಮ,ನಿರ್ಮಲ, ನಗರಸಭೆ, ಕಂದಾಯ,ಆಹಾರ, ಬೆಸ್ಕಾಂ, ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.