ಕನ್ನಡಪ್ರಭ ವಾರ್ತೆ ಕೋಲಾರಮಿತಿಮೀರಿದ ಕ್ರಷರ್ ವಾಹನಗಳ ಸಂಚಾರದಿಂದ ರಸ್ತೆ ಅಕ್ಕಪಕ್ಕದ ಕೃಷಿ ಭೂಮಿಗಳಲ್ಲಿ ಧೂಳು ಆವರಿಸಿ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ, ಇದರಿಂದಾಗಿ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗುತ್ತಿದೆ, ಕ್ರಷರ್ ಟಿಪ್ಪರ್ ವಾಹನಗಳಿಗೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾಲೂಕಿನ ಬೂಸನಹಳ್ಳಿ, ತಲಗುಂದ, ಟಿ.ಪುರಹಳ್ಳಿ ಗ್ರಾಮಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ ಕ್ರಷರ್ ಟಿಪ್ಪರ್ ಲಾರಿಗಳು ಸಂಚಾರ ಮಾಡುತ್ತಿವೆ. ಕ್ರಷರ್ ಲಾರಿಗಳು ಮಿತಿಮೀರಿದ ಸಂಚಾರದಿಂದ ಧೂಳು ತುಂಬಿ ಬೆಳೆ ಹಾನಿಯಾಗಿದೆ. 300ಕ್ಕೂ ಹೆಚ್ಚು ಟಿಪ್ಪರ್ ಸಂಚಾರ
ಜಾನುವಾರುಗಳಿಗೂ ರೋಗ
ಜಲ್ಲಿ ಧೂಳಿನಿಂದಲೂ ಕೃಷಿ ಭೂಮಿ ಆವರಿಸಿ ಜಾನುವಾರು ಮೇವು ಮೇಯಲೂ ಆಗುತ್ತಿಲ್ಲ, ಇದರಿಂದ ಜಾನುವಾರುಗಳಿಗೆ ರೋಗ ಬರುತ್ತಿರುದೆ. ಇಷ್ಟೆಲ್ಲಾ ಅಪಾಯವಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ರೈತ ಕೃಷ್ಣಗೌಡ ಎಂಬುವರು ಆರೋಪಿಸಿದರು.ಎರಡು ಎಕರೆಯಲ್ಲಿ ಸೇವಂತಿ ಹೂವು ಬೆಳೆಯನ್ನು ನಾಲ್ಕು ಲಕ್ಷ ಖರ್ಚು ಮಾಡಿ ಬೆಳೆದಿದ್ದೇನೆ, ಆದರೆ ಕ್ರಷರ್ ವಾಹನಗಳ ಸಂಚಾರದಿಂದ ಶೇವಂತಿ ಬಿಳಿಹೂವು ಸಂಪೂರ್ಣವಾಗಿ ಹಾಳಾಗಿದೆ, ಮಾರುಕಟ್ಟೆ ಹಾಕಿದರೂ ಕೂಡ ಯಾರು ಹೂವು ಖರೀದಿ ಮಾಡುತ್ತಿಲ್ಲ, ಹೂವು ಬೆಳೆ ಅಲ್ಲದೆ ಟೊಮೆಟೊ ಸೇರಿದಂತೆ ತರಕಾರಿ ಬೆಳೆಗಳು ಹಾನಿಯಾಗಿದೆ ಎಂದರು.ಇದು ರಸ್ತೆ ಪಕ್ಕದಲ್ಲಿರುವ ಕೃಷಿಭೂಮಿ ರೈತರ ಪ್ರತಿನಿತ್ಯ ಸಮಸ್ಯೆಯಾಗಿದೆ. ಅಲ್ಲದೇ ಮಿತಿಮೀರಿದ ಕ್ರಷರ್ ಲಾರಿಗಳು ಓಡಾಟದಿಂದ ರಸ್ತೆಗಳು ಹಾಳಾಗಿದ್ದು ದೊಡ್ಡ ದೊಡ್ಡ ಗುಂಡಿ ನಿರ್ಮಾಣವಾಗಿವೆ. ಮಕ್ಕಳು ಸಾರ್ವಜನಿಕರು ಸಂಚಾರಕ್ಕೆ ಕೊಡ ತೊಂದರೆ ಉಂಟಾಗಿದೆ, ಹಲವು ಬಾರಿ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಕ್ರಷರ್ ಪರವಾನಗಿ ರದ್ದಾಗಲಿ
ಕೊಡಲೇ ಜಿಲ್ಲಾಡಳಿತ ಕ್ರಷರ್ ಪರವಾನಗಿ ರದ್ದು ಮಾಡಬೇಕು, ಅಥವಾ ಕ್ರಷರ್ ವಾಹನಗಳ ಸಂಚಾರಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಕ್ರಷರ್ ಮಾಲೀಕರ ಜೊತೆ ಮಾತುಕತೆ ನಡೆಸಬೇಕು ಎಂದು ರೈತ ಕೃಷ್ಣ ಗೌಡ ಆಗ್ರಹಿಸಿದ್ದಾರೆ.