ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನೊಂದ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಕಾಂಗ್ರೆಸ್ ಮುಖಂಡ ಕೂಡಲಕುಪ್ಪೆ ಕೆ.ಜೆ.ರವಿಶಂಕರ್ ತಿಳಿಸಿದರು.ತಾಲೂಕಿನ ಕೂಡಲಕುಪ್ಪೆ ಗ್ರಾಮದ ರಾಮ ಮಂದಿರ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯಲ್ಲಿ ಮಾತನಾಡಿ, ನೊಂದ ಸಮುದಾಯದವರು ಸುಳ್ಳು, ಮೋಸ, ವಂಚನೆಗೆ ಒಳಗಾಗದೆ ವಾಸ್ತವ ಸ್ಥಿತಿ ಅರಿತು ಅಂಬೇಡ್ಕರ್ ಸಿದ್ಧಾಂತವನ್ನು ಸ್ವೀಕರಿಸಿ ಪ್ರಜ್ಞಾವಂತರಾಗಬೇಕು ಎಂದರು.
ಇದೇ ವೇಳೆ ಶಾಸಕರ ಮಾರ್ಗದರ್ಶನದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಕೆಎಸ್‌ಆರ್ ಟಿಸಿ ನೌಕರರ ಸಂಘದ ಅಧ್ಯಕ್ಷ ತಾಳಶಾಸನ ಮೋಹನ್ ಮಾತನಾಡಿ, ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ, ನ್ಯಾಯ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ಖಾತ್ರಿಪಡಿಸಿ ಭಾರತೀಯ ಸಂವಿಧಾನವನ್ನು ರಚಿಸಿದ ಮಹಾನ್ ಚೇತನ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅರ್ಪಣಾ ಮನೋಭಾವದಿಂದ ಸ್ವೀಕರಿಸಿ ಮುನ್ನಡೆಯುವಂತೆ ತಿಳಿಸಿದರು.
ವಿಶ್ರಾಂತ ಶಿಕ್ಷಕ ಚಿಕ್ಕಲಿಂಗಯ್ಯ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿದರು. ಬಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್, ವಿಶ್ವಜ್ಞಾನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷೆ ಜಯಶೀಲಾ ಜ್ಯೋತಿ ಬಾಪುಲೆ ಪುರುಷ ಸ್ವ ಸಹಾಯ ಸಂಘದ ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ಜಯಕುಮಾರ್, ಕೆ.ಎನ್.ಶಿವಪ್ರಸಾದ್, ತಿಮ್ಮರಾಜು, ನಂದೀಶ, ಜವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬೆಳ್ಳುಂಡಗೆರೆ ಡೇರಿ ಅಧ್ಯಕ್ಷರಾಗಿ ಬೋರಪ್ಪ ಆಯ್ಕೆ
ಮಂಡ್ಯ: ತಾಲೂಕಿನ ಬೆಳ್ಳುಂಡಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಸ್.ಬೋರಪ್ಪ ಹಾಗೂ ಉಪಾಧ್ಯಕ್ಷರಾಗಿ ಸಣ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 11 ಸಂಖ್ಯಾ ಬಲವಿರುವ ಡೇರಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಬೋರಪ್ಪ ಮತ್ತು ಸಣ್ಣಪ್ಪ ಹೊರತು ಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಆಶಾ ಕಾರ್ಯ ನಿರ್ವಹಿಸಿದರು.
ನೂತನವಾಗಿ ಅಧ್ಯಕ್ಷ ಬಿ.ಎಸ್.ಬೋರಪ್ಪ ಮಾತನಾಡಿ, ಹಾಲು ಉತ್ಪಾದಕರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಡೇರಿ ಬೆಳವಣಿಗೆಗೆ ಶ್ರಮ ವಹಿಸಲಾಗುವುದು ಎಂದರು.ಈ ವೇಳೆ ನಿರ್ದೇಶಕರಾದ ಬಿ.ಜಿ. ಬೋರೇಗೌಡ, ಸಿಂಗೇಗೌಡ, ಸಿಂಗಯ್ಯ,ವಿಶ್ವನಾಥ,ತಾಯಮ್ಮ, ಶಾರದ, ಭಾಗ್ಯಮ್ಮ, ಪುಟ್ಟಸ್ವಾಮಿ, ಉಮೇಶ್, ಗ್ರಾಮದ ಮುಖಂಡರು ಇತರರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಕೋರಿದರು.