ಮಹಾಪುರುಷರು ಯಾವುದೇ ಜಾತಿಗೆ ಸೀಮಿತರಲ್ಲ: ಉತ್ತಮ ಪಾಟೀಲ

KannadaprabhaNewsNetwork |  
Published : Oct 18, 2024, 12:08 AM IST
ಬೋರಗಾಂವದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ವಾಲ್ಮೀಕಿ ದೇವಸ್ಥಾನದಲ್ಲಿ ಯುವ ಮುಖಂಡ ಉತ್ತಮ ಪಾಟೀಲ.ಪೂಜೆ ಸಲ್ಲಿಸಿದರು.ಪ . ಪಂ . ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ,ಅಭಯಕುಮಾರ ಮಗದುಮ, ಅಶೋಕ ನೆಜೆ ಇದ್ದಾರೆ | Kannada Prabha

ಸಾರಾಂಶ

ಎಲ್ಲ ಮಹಾಪುರುಷರು ಯಾವುದೇ ಜಾತಿಗೆ ಸೀಮಿತರಲ್ಲ. ಮಹಾಪುರುಷರು ಎಲ್ಲ ಜಾತಿಗಳ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ರಾಮಾಯಣದಂತಹ ಪವಿತ್ರ ಗ್ರಂಥಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಯುಗಪುರುಷ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಎಲ್ಲ ಮಹಾಪುರುಷರು ಯಾವುದೇ ಜಾತಿಗೆ ಸೀಮಿತರಲ್ಲ. ಮಹಾಪುರುಷರು ಎಲ್ಲ ಜಾತಿಗಳ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ರಾಮಾಯಣದಂತಹ ಪವಿತ್ರ ಗ್ರಂಥಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಯುಗಪುರುಷ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ವಾಲ್ಮೀಕಿ ಮಂದಿರದಲ್ಲಿ ಕೋಳಿ ಸಮಾಜದ ವತಿಯಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ಉತ್ತಮ ಸಮಾಜ ನಿರ್ಮಿಸಲು ಎಲ್ಲ ಸಮಾಜದಲ್ಲಿ ಆದರ್ಶ ವ್ಯಕ್ತಿತ್ವವನ್ನು ಸೃಷ್ಟಿಸಲು ಮತ್ತು ಸುಸಂಸ್ಕೃತ ಸಮಾಜ ನಿರ್ಮಿಸಲು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ನೈತಿಕತೆಯನ್ನು ಇಂದಿನ ಯುವಕರು ಪಾಲಿಸಿ ಆದರ್ಶ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಅಣ್ಣಾಸಾಹೇಬ ಹಾವಲೆ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಮಹರ್ಷಿ ವಾಲ್ಮೀಕಿ ಅವರು ಬರೆದು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶರದ ಜಂಗಟೆ, ಪಟ್ಟಣ ಪಂಚಾಯತಿ ಪಂಚಾಯತಿ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಾಸವಾಡೆ, ಪಟ್ಟಣ ಪಂಚಾಯತಿ ಸದಸ್ಯ ಅಭಯಕುಮಾರ ಮಗದುಮ, ತುಳಸಿದಾಸ್ ವಾಸವಾಡೆ, ಪ್ರದೀಪ ಮಾಳಿ, ಅಮರ ಶಿಂಗೆ, ಅಣ್ಣಾಸೋ ಬಾರವಾಡೆ, ಜಿತು ಪಾಟೀಲ, ಅಶೋಕ ನೇಜೆ, ಬಾಳಾಸಾಹೇಬ ವಾಸವಾಡೆ, ಅಪ್ಪಾಸಾಹೇಬ ನೇಜೆ, ಬಾಪು ದತ್ತವಾಡೆ, ಶ್ರೀಕಾಂತ ವಸವಾಡೆ, ಪ್ರಕಾಶ ವಸವಾಡೆ, ಸುನೀಲ ನೇಜೆ, ಅಣ್ಣಪ್ಪ ಅಕಿವಾಟೆ, ಬಾಪು ನೇಜೆ, ಬಾಬಾಸಾಹೇಬ ವಸವಾಡೆ, ಸಂಜು ಕೋಳಿ, ವಿಜಯ ಬೇಡಕಿಹಾಳೆ, ಸುರೇಶ ವಸವಾಡೆ ಸೇರಿದಂತೆ ಸಮಾಜದ ಕಾರ್ಯಕರ್ತರು ಉಪಸ್ಥಿತರಿದ್ದರು.ಮಹರ್ಷಿ ವಾಲ್ಮೀಕಿಯವರು ಉತ್ತಮ ಸಮಾಜ ನಿರ್ಮಿಸಲು ಎಲ್ಲ ಸಮಾಜದಲ್ಲಿ ಆದರ್ಶ ವ್ಯಕ್ತಿತ್ವವನ್ನು ಸೃಷ್ಟಿಸಲು ಮತ್ತು ಸುಸಂಸ್ಕೃತ ಸಮಾಜ ನಿರ್ಮಿಸಲು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ನೈತಿಕತೆಯನ್ನು ಇಂದಿನ ಯುವಕರು ಪಾಲಿಸಿ ಆದರ್ಶ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು.

-ಉತ್ತಮ ಪಾಟೀಲ, ಯುವ ಮುಖಂಡರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ