ಮಹಾನ್ ವ್ಯಕ್ತಿಗಳನ್ನು ಸೀಮಿತಗೊಳಿಸಲಾಗುತ್ತಿದೆ

KannadaprabhaNewsNetwork |  
Published : Jul 02, 2025, 12:21 AM IST
30ಎಚ್ಎಸ್ಎನ್4 : ಕೇರಳಾಪುರ  ಗ್ರಾಮದ ವೃತ್ತದಲ್ಲಿರುವ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಮಹಾನ್ ವ್ಯಕ್ತಿಗಳನ್ನು ಜಾತಿ, ಧರ್ಮ, ವರ್ಗಕ್ಕೆ, ಭಾಷೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅಂತಹ ಮಹಾನುಭಾವರು ಎಲ್ಲವನ್ನೂ ಮೀರಿ ಬೆಳೆದವರು. ಆದರೆ ಸಂಕುಚಿತ ಮನೋಭಾವನೆಯಿಂದಾಗಿ ಮಹಾನ್ ವ್ಯಕ್ತಿಗಳು ಸೀಮಿತವಾಗುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಸಂತೋಷ್‌ ಗೌಡ ವಿಷಾದಿಸಿದರು. ಅವರು ಕೇರಳಾಪುರ ಗ್ರಾಮದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಆಚರಣೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಬಸವ, ಕನಕ, ಅಂಬೇಡ್ಕರ್‌ ಕೆಂಪೇಗೌಡ ಹೀಗೆ ಮಹಾನ್ ನಾಯಕರನ್ನು ಒಂದು ವರ್ಗದ ಸೀಮಿತ ವ್ಯಕ್ತಿಗಳನ್ನಾಗಿ ವರ್ಗೀಕರಿಸುತ್ತಿರುವುದು ವಿಷಾದನೀಯ ಎಂದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಮಹಾನ್ ವ್ಯಕ್ತಿಗಳನ್ನು ಜಾತಿ, ಧರ್ಮ, ವರ್ಗಕ್ಕೆ, ಭಾಷೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

ಅಂತಹ ಮಹಾನುಭಾವರು ಎಲ್ಲವನ್ನೂ ಮೀರಿ ಬೆಳೆದವರು. ಆದರೆ ಸಂಕುಚಿತ ಮನೋಭಾವನೆಯಿಂದಾಗಿ ಮಹಾನ್ ವ್ಯಕ್ತಿಗಳು ಸೀಮಿತವಾಗುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಸಂತೋಷ್‌ ಗೌಡ ವಿಷಾದಿಸಿದರು. ಅವರು ಕೇರಳಾಪುರ ಗ್ರಾಮದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಆಚರಣೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಬಸವ, ಕನಕ, ಅಂಬೇಡ್ಕರ್‌ ಕೆಂಪೇಗೌಡ ಹೀಗೆ ಮಹಾನ್ ನಾಯಕರನ್ನು ಒಂದು ವರ್ಗದ ಸೀಮಿತ ವ್ಯಕ್ತಿಗಳನ್ನಾಗಿ ವರ್ಗೀಕರಿಸುತ್ತಿರುವುದು ವಿಷಾದನೀಯ ಎಂದರು.

ಇದೇ ವೇಳೆ ಕೇರಳಾಪುರ ಗ್ರಾಪಂ ಸದಸ್ಯರಾದ ಶಿವಣ್ಣ ಮಾತನಾಡಿ, ಮಹಾನ್ ವ್ಯಕ್ತಿ ಕೆಂಪೇಗೌಡರ ದೂರದೃಷ್ಟಿ ಆಡಳಿತವೈಖರಿ ಇಂದಿನ ಜನಪ್ರತಿನಿಧಿಗಳಿಗೆ ಅವಶ್ಯಕ ಎಂದು ತಿಳಿಸಿದರು.

ಇದೇ ವೇಳೆ ಕೇರಳಾಪುರ ಗ್ರಾಮದ ವೃತ್ತದಲ್ಲಿರುವ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಲ್ಲದೇ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷರಾದ ಗಂಗಾಮಣಿ, ಉಪಾಧ್ಯಕ್ಷ ಚಂದ್ರು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಂಕರ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಕರೀಗೌಡ, ಮಂಜುನಾಥ ಮಾಜಿ ಅಧ್ಯಕ್ಷ, ಗ್ರಾಪಂ ಎಲ್ಲಾ ಸದಸ್ಯರು ಮುಂಖಡರು ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌