ನಾಡಿಗಾಗಿ ಶ್ರಮಿಸಿದ ಕವಿ ಶ್ರೇಷ್ಠರು, ಹಿರಿಯ ಕಲಾವಿದರನ್ನು ಸ್ಮರಿಸಬೇಕು: ಮಂಜುನಾಥ್

KannadaprabhaNewsNetwork |  
Published : Dec 05, 2025, 12:45 AM IST
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ಧ ನಾಡು-ನುಡಿ ಗೀತಾ ಗಾಯನ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್‌ ಅವರು ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್, ಎಸ್‌.ಎಸ್‌. ವೆಂಕಟೇಶ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುಕನ್ನಡ ನಾಡನ್ನು ಸಾಹಿತ್ಯದ ಬೀಡಾಗಿಸಿದ ಕವಿಶ್ರೇಷ್ಠರು ಹಾಗೂ ನಾಡು, ನುಡಿಯ ಪರವಾಗಿ ಧ್ವನಿ ಎತ್ತಿದ ಕನ್ನಡದ ಹಿರಿಯ ಕಲಾವಿದ, ಮಹಾನೀಯರನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್ ಹೇಳಿದರು.

ನಾಡು-ನುಡಿ ಗೀತಾ ಗಾಯನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ನಾಡನ್ನು ಸಾಹಿತ್ಯದ ಬೀಡಾಗಿಸಿದ ಕವಿಶ್ರೇಷ್ಠರು ಹಾಗೂ ನಾಡು, ನುಡಿಯ ಪರವಾಗಿ ಧ್ವನಿ ಎತ್ತಿದ ಕನ್ನಡದ ಹಿರಿಯ ಕಲಾವಿದ, ಮಹಾನೀಯರನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್ ಹೇಳಿದರು.ಜಿಲ್ಲಾ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮಹಿಳಾ ಘಟಕದಿಂದ ಆಯೋಜಿಸಿದ್ಧ ನಾಡು-ನುಡಿ ಗೀತಾ ಗಾಯನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಾಡಿನ ಏಕೀಕರಣ, ಗೋಕಾಕ್ ಚಳುವಳಿಯಲ್ಲಿ ಭಾಗಿಯಾದವರ ಸೇವೆ ಕನ್ನಡಕ್ಕೆ ಬಹಳಷ್ಟಿದೆ ಎಂದರು.ಚೆಲುವ ಕನ್ನಡನಾಡು ಸೌಗಂಧದ ಬೀಡು, ರಮಣೀಯ ತಾಣಗಳ ಗೂಡು, ವನ್ಯಜೀವಿಗಳ ಆವಾಸ ಸ್ಥಾನ. ಈ ಪವಿತ್ರ ನೆಲದಲ್ಲಿ ಜನಿಸಿದ ಹಲವಾರು ಕವಿ ಸಂತರು, ವಚನ, ಕೀರ್ತನೆಕಾರರು ಹಾಗೂ ಅಪ್ಪಟ ಕನ್ನಾಡಾಭಿಮಾನಿ ಡಾ. ರಾಜ್‌ ಕುಮಾರ್ ಸೇರಿದಂತೆ ಅನೇಕರು ಸಿನಿ ಕಲಾವಿದರು ನಾಡಿನ ಘನತೆಗೆ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು.ವಿಜಯನಗರ ಸಾಮ್ರಾಜ್ಯ ಆಳಿದ ಶ್ರೀಕೃಷ್ಣ ದೇವರಾಯ ಅರಸರು ನಾಡಿನ ವಿಸ್ತಾರವನ್ನು ಎಲ್ಲೆಡೆ ಹಬ್ಬಿಸಿದವರು. ಇಂದಿಗೂ ಅಕ್ಕಪಕ್ಕದ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಭೂಮಿಯಲ್ಲಿ ಕನ್ನಡದ ಪಳೆಯುಳಿಕೆ ಉಳಿದುಕೊಂಡಿವೆ. ಅಲ್ಲದೇ ಆ ಕಾಲದಲ್ಲಿ ಅರಸರು ನಾಡಿನ ಭೂಪ್ರದೇಶವನ್ನು ನೆರೆ ಭಾಷಿಗರಿಗೆ ದಾನವಾಗಿ ನೀಡಿ ಉದಾರತನ ಮೆರೆದಿದ್ದರು ಎಂದು ಹೇಳಿದರು.ದೇಶದ ವಿವಿಧ ರಾಜ್ಯಗಳಲ್ಲಿ ಕನ್ನಡಿಗರು ತೆರಳಿದರೆ ಸೂಕ್ತ ರೀತಿಯಲ್ಲಿ ಮಾತನಾಡಿಸುವ ಗುಣ ತೀರಾ ಕಡಿಮೆ. ಅದೇ ಕನ್ನಡದ ನೆಲದಲ್ಲಿ ಪರಭಾಷಿಗರಿಗೆ ಅತ್ಯಂತ ಆತ್ಮೀಯತೆಯಿಂದ ಗೌರವಿಸುವ ಸಂಸ್ಕೃತಿ ಕನ್ನಡಿಗರ ಹುಟ್ಟಿನಿಂದಲೇ ಇದೆ. ಹಾಗಾಗಿಯೇ ಕನ್ನಡ ಜಗತ್ತಿನಲ್ಲಿ ಅತ್ಯಂತ ಪ್ರೀತಿ ಪಾತ್ರ ಭಾಷೆಯಾಗಲು ಕಾರಣವಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡ ಭಾಷೆಗೆ ಜಾತಿ, ಮತ, ಪಂಥವೆಂಬ ಬೇಧವಿಲ್ಲ. ಸರ್ವ ಧರ್ಮದವರು ಪ್ರೀತಿಸುವ ಕನ್ನಡ ನಾಡು ನಮ್ಮದು. ಆಕಸ್ಮಿಕ ದುರ್ಘಟನೆಗಳಿಂದ ಬಂಧಿಗಳಾದವರು ಬಿಡುಗಡೆ ನಂತರ ಸಾತ್ವಿಕ ಜೀನವದಲ್ಲಿ ಸಾಗಿ ಕನ್ನಡ ಭಾಷೆ ಎತ್ತಿ ಹಿಡಿಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ , ಸಮಯ, ಸಂದರ್ಭಗಳು ಕೆಲವೊಮ್ಮೆ ಮನುಷ್ಯನ್ನು ದುಷ್ಕೃತ್ಯದ ಕಡೆಗೆ ಎಳೆಯುತ್ತವೆ. ಮನಸ್ಸನ್ನು ಹತೋಟಿಗೆ ತರಲು ಸಾಹಿತ್ಯ, ಸಂಗೀತದಂಥ ಅಭ್ಯಾಸ ಮೈಗೂಡಿಸಿಕೊಂಡು ಮುಂದಿನ ಬದುಕನ್ನು ಸಂತೋಷದಿಂದ ಕಳೆಯಬೇಕು ಎಂದು ಹೇಳಿದರು.ಇದೇ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ, ಕಸಾಪ ಸದಸ್ಯರಾದ ಹಿರೇನಲ್ಲೂರು ಶ್ರೀನಿವಾಸ್, ಸುನೀತಾ ಕಿರಣ್ ಅವರಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾರಾಗೃಹ ಸಹಾಯಕ ಜೈಲರ್ ಎಂ.ಕೆ.ನೆಲಧರಿ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪ ನಾಯ್ಕ್, ಸದಸ್ಯರಾದ ಈರೇಗೌಡ, ಕಾರಾಗೃಹ ಸಿಬ್ಬಂದಿ ಬೊಂಗಾಳೆ, ಆಶಾ ಉಪಸ್ಥಿತರಿದ್ದರು.30 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ಧ ನಾಡು-ನುಡಿ ಗೀತಾ ಗಾಯನ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್‌ ಅವರು ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್, ಎಸ್‌.ಎಸ್‌. ವೆಂಕಟೇಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೆಲ್ಲಿಯಲ್ಲಿ ಬಿಜೆಪಿ ರೆಬಲ್ಸ್‌ ಟೀಂ:ಬಿಎಲ್‌ಎಸ್‌ ಜತೆ ರಮೇಶ ಚರ್ಚೆ
ಮಳೆ, ಚಳಿ ಪರಿಣಾಮ: ಸೊಪ್ಪು, ತರಕಾರಿ ಬೆಲೆ ಏರಿಕೆ