- ದೊಣೆಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಡಾ.ರವಿಕುಮಾರ್ - - - ಕನ್ನಡಪ್ರಭ ವಾರ್ತೆ ಜಗಳೂರು
ಇಂದಿನ ದಿನಗಳಲ್ಲಿ ಡೆಂಘೀಜ್ವರದಿಂದ ಅತಿ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಡೆಂಘೀಜ್ವರ ನಿರ್ಮೂಲನೆಗಾಗಿ ಎಲ್ಲರೂ ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸಬೇಕು ಎಂದು ದಾವಣಗೆರೆ ಪ್ರೀತಿ ಆರೈಕೆ ಟ್ರಸ್ಟ್ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಹೇಳಿದರು.ತಾಲೂಕಿನ ದೊಣೆಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆರೈಕೆ ಟ್ರಸ್ಟ್ ಹಾಗೂ ಆರೈಕೆ ಆಸ್ಪತ್ರೆ ದಾವಣಗೆರೆ ಪ್ರೀತಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಮನೆಯೊಂದೇ ಸ್ವಚ್ಛವಾಗಿದ್ದರೆ ಡೆಂಘೀ ನಿಯಂತ್ರಣ ಅಸಾಧ್ಯ. ಹಾಗಾಗಿ, ಮನೆ, ಕಟ್ಟಡ, ನಿವೇಶನ, ಚರಂಡಿ ಎಲ್ಲವೂ ಸ್ವಚ್ಛವಾಗಿಡಬೇಕು. ಆಗ ಮಾತ್ರ ವಿವಿಧ ರೋಗಗಳಿಂದ ಮುಕ್ತರಾಗಬಹುದು. ''''''''ಆರೋಗ್ಯ ದಾಸೋಹದ ಮೂಲಕ ಆರೋಗ್ಯ ಜಾಗೃತಿ'''''''' ಘೋಷಣೆ ಮೂಲಕ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕೃಪೆ, ಆಶೀರ್ವಾದದಿಂದ ಸಂಸ್ಥೆ ನಡೆಯುತ್ತಿದ್ದು, ಯೋಜನೆಯಡಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿ ಜನತೆ ಆರ್ಥಿಕ, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಯೋಜನೆ ಯೋಜನಾಧಿಕಾರಿ ಗಣೇಶ್ ನಾಯ್ಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಕೆ., ಗ್ರಾಪಂ ಸದಸ್ಯರಾದ ವೀರೇಶ್, ಗುರುಮೂರ್ತಿ, ಬಸವರಾಜ್ ಇತರರು ಉಪಸ್ಥಿತರಿದ್ದರು.- - - -24ಜೆ.ಜಿಎ.ಎಲ್.1:
ಜಗಳೂರು ತಾಲೂಕಿನ ದೊಣೆಹಳ್ಳಿಯಲ್ಲಿ ಡಾ. ಟಿ.ಜಿ.ರವಿಕುಮಾರ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದರು.