ದುರಾಸೆಯಿಂದ ಮನುಷ್ಯನ ಮಾನಸಿಕ ನೆಮ್ಮದಿ ಹಾಳು: ಹಿರೇಮಠದ ಶ್ರೀ

KannadaprabhaNewsNetwork |  
Published : Aug 03, 2025, 01:30 AM IST
ಪಟ್ಟಣದ ಸಂತೆಮೈದಾನದಲ್ಲಿರುವ ಮಿಲ್ಲತ್ ಶಾದಿ ಮಹಲ್ ನಲ್ಲಿ ನಾಗರೀಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ವತಿಯಿಂದ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವ ತಾಲೂಕು ಘಟಕದ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಗಣ್ಯರು | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನಲ್ಲಿ ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ಪ್ರಾರಂಭಗೊಂಡು ಇಂದಿಗೆ ಮೂರು ವರ್ಷಗಳು ಕಳೆದಿದ್ದು ಈ ಅಸೋಸಿಯೇಷನ್ ವತಿಯಿಂದ ಮಾನವನ ಹಕ್ಕುಗಳಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪ್ರಸ್ತುತ ದಿನಗಳಲ್ಲಿ ನಾಗರಿಕರ ಹಕ್ಕುಗಳು ಪದೇ-ಪದೇ ಉಲ್ಲಂಘನೆಯಾಗುತ್ತಿದ್ದು ನಾಗರಿಕರ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಚನ್ನಗಿರಿ ತಾಲೂಕಿನಲ್ಲಿ ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ಪ್ರಾರಂಭಗೊಂಡು ಇಂದಿಗೆ ಮೂರು ವರ್ಷಗಳು ಕಳೆದಿದ್ದು ಈ ಅಸೋಸಿಯೇಷನ್ ವತಿಯಿಂದ ಮಾನವನ ಹಕ್ಕುಗಳಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಂತೆಮೈದಾನದಲ್ಲಿರುವ ಮಿಲ್ಲತ್ ಶಾದಿ ಮಹಲ್‌ನಲ್ಲಿ ಶನಿವಾರ ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ವತಿಯಿಂದ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವ ತಾಲೂಕು ಘಟಕದ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನು ಪ್ರಗತಿ ಹೊಂದಬೇಕು ಎಂಬ ಹಂಬಲದಿಂದ ದಿನದ 24 ಗಂಟೆ ಒಂದು ಕ್ಷಣವೂ ಸಂತೋಷದಿಂದ ಇರಲು ಸಾಧ್ಯವಾಗುತ್ತಿಲ್ಲ ದುಡಿಮೆ, ಜೀವನ, ಆಸ್ತಿ, ಆಭರಣಗಳನ್ನು ಗಳಿಸಲು ತಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ದುರಾಸೆ, ದುರಹಂಕಾರ, ದುರಭ್ಯಾಸದಿಂದ ಮನುಷ್ಯ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ತಿಳಿಸುತ್ತಾ ಮನುಷ್ಯನು ಎಲ್ಲಿಯ ವರೆಗೆ ಮಹಾತ್ಮರ ಚಿಂತನೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಸಮಾಜ ಅಧೋಗತಿಗೆ ಸಾಗುತ್ತದೆ ಎಂದರು.

ಸಂಘ-ಸಂಸ್ಥೆಗಳನ್ನು ಮಾಡುವುದು ದೊಡ್ಡದಲ್ಲ ಒಳ್ಳೆಯ ಉದ್ದೇಶಗಳನ್ನು ಇಟ್ಟುಕೊಂಡು ಮಾಡಿದ ಸಂಘ-ಸಂಸ್ಥೆಗಳನ್ನು ಉಳಿಸಿಕೊಂಡು ಬೆಳೆಸುವುದು ದೊಡ್ಡದು ಎಂದರು.

ನಾಗರಿಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಅಲ್ಲಾಭಕ್ಷಿ ಮಾತನಾಡಿ, ನಾಗರಿಕರು ಸಮಾಜದಲ್ಲಿ ಸಾಮರಸ್ಯದಿಂದ ಭಾಳಲು ಬೇಕಾದ ಸಂವಿಧಾನ ದತ್ತವಾಗಿ ಬಂದಿರುವ ಕಾನೂನುಗಳನ್ನು ತಿಳಿದುಕೊಳ್ಳಬೇಕಾಗಿದ್ದು ಈ ಅಸೋಸಿಯೇಷನ್ ವತಿಯಿಂದ ಮಾನವರ ಹಕ್ಕುಗಳನ್ನು ರಕ್ಷಣೆ ಮಾಡುವ ಜತೆಗೆ ಸಮಾಜಮುಖಿಯಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬಗ್ಗೆ ವಿವರವಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಅಸೋಸಿಯೇಷನ್ ನೂತನ ಅಧ್ಯಕ್ಷ ಉಮರ್ ಮುಕ್ತಿಯರ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ನಾಗರಾಜ್, ಮೌಲಾನಾ ಸಲೀಂ ಅಂಜರ್ ಕಾಸ್ಮಿ, ಹಿರಿಯ ವಕೀಲ ಅರುಣ್ ಕುಮಾರ್, ಸಲ್ಮಾ ಅಸ್ಪಿಯರಿದಾ, ಅಬ್ದುಲ್ ಜಿಲಾನಿ ಮೂಲಿಮನಿ, ಷಹಬ್ಬಾಸ್ ಖಾನ್,ಸಲ್ಮಾಬಾನು, ಮುಸ್ಲಿಂ ಸಮಾಜದ ಮುಖಂಡರಾದ ಖುದ್ದೂಸ್, ಫಾಜೀಲ್, ಪುರಸಭೆಯ ಸದಸ್ಯ ಗೌಸ್ ಪೀರ್, ಬಸವಾಪುರ ರಂಗನಾಥ್, ನೇತ್ರಾವತಿ ಇತರರು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...