ಜನರ ಒಳತಿಗೆ ಶ್ರಮಿಸುತ್ತಿದೆ ಸಾಲೂರು ಮಠ

KannadaprabhaNewsNetwork |  
Published : Aug 03, 2025, 01:30 AM IST
ಲೀಡ್‌ | Kannada Prabha

ಸಾರಾಂಶ

ಸಾಲೂರು ಮಠವು ಧಾರ್ಮಿಕ, ಶೈಕ್ಷಣಿಕ, ಆರೋಗ್ಯಯುತವಾಗಿ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು ಸಾಲೂರು ಮಠವು ಧಾರ್ಮಿಕ, ಶೈಕ್ಷಣಿಕ, ಆರೋಗ್ಯಯುತವಾಗಿ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪವಿತ್ರ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂ. ಶ್ರೀ ಪಟ್ಟದ ಗುರುಸ್ವಾಮಿಗಳವರ ಪುಣ್ಯ ಸಂಸ್ಮರಣೋತ್ಸವ ಮತ್ತು ಗುರುಸ್ಮೃತಿ ಸಂಸ್ಮರಣ ಗ್ರಂಥ ಲೋಕಾರ್ಪಣೆ ಗುರುಸನ್ನಿಧಿ ಯೋಗ ಧ್ಯಾನ ಮಂದಿರ ಉದ್ಘಾಟನೆ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡದ ಶಿಲಾನ್ಯಾಸದಲ್ಲಿ ಮಾತನಾಡಿದರು.

77 ಮಲೆಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟವು ಪವಾಡ ಪುಣ್ಯ ಪುರುಷರು ನಡೆದಾಡಿದ ಪುಣ್ಯಸ್ಥಳ ಇಂತಹ ಕತ್ತಲ ರಾಜ್ಯವಾಗಿದ್ದ ಈ ಭಾಗವನ್ನು ಉಜ್ವಲ ಬೆಳಕಿನ ಕಡೆಗೆ ಕೊಂಡುಹೋದವರು ಶ್ರೀ ಮಲೆ ಮಹದೇಶ್ವರರು ಇಂತಹ ಪುಣ್ಯ ಸ್ಥಳಕ್ಕೂ ಸಾಲೂರು ಮಠಕ್ಕು, ಭಕ್ತ ವೃಂದಕ್ಕೂ ಅತ್ಯಂತ ಅವಿನಭಾವ ಸಂಬಂಧ ಇದೆ. ಇಲ್ಲಿ ಕಾಡಂಚಿನ ಬೇಡಗಂಪಣ ಸಮುದಾಯದ ಜನರಿಗೆ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ ಶ್ರೇಯಸ್ಸು ಸಾಲೂರು ಮಠಕ್ಕೆ ಸಿಗುತ್ತದೆ ಎಂದರು.ಮಠದ ಸಂಪರ್ಕ ಇರುವಂತಹ ಎಲ್ಲ ಗ್ರಾಮಗಳಿಗೂ ಮಠದ ಲಿಂ. ಗುರುಸ್ವಾಮಿ ಗಳು ಭೇಟಿ ನೀಡಿ ಅಲ್ಲಿನ ಜನರಿಂದ ದವಸ ಧಾನ್ಯ ಸಂಗ್ರಹಣೆ ಮಾಡುತ್ತಿದ್ದರು. ಹಾಗಾಗಿ ಅಲ್ಲಿಂದ ಜನರಿಗೂ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಅತ್ಯಂತ ಒಳ್ಳೆಯ ಸಂಕಲ್ಪ ಸಿದ್ದಿವುಳ್ಳವರಾಗಿದ್ದರು. ನೇರ ನಡೆ ನುಡಿಗೆ ಹೆಸರು ವಾಸಿಯಾಗಿದ್ದರು. ಅಂತಹ ಮಹಾನ್ ಚೇತನ ಎಲ್ಲು ಹೋಗಿಲ್ಲ ನಮ್ಮಲ್ಲೇ ಇದ್ದಾರೆ ಎಂದರು.ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀ ಮಾತನಾಡಿ, ಭಾರತದಲ್ಲಿ ಮಠಗಳಿಗೆ ಪವಿತ್ರ ಸ್ಥಾನವಿದೆ. ಕರ್ನಾಟಕದಲ್ಲಿ ಮಠಗಳ ಸೇವೆಯಿಂದ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಶೈಕ್ಷಣಿಕ, ಧಾರ್ಮಿಕ, ಆರೋಗ್ಯ, ಸೇವಾ ಕಾರ್ಯಗಳು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ. ಇದಕ್ಕೆ ಮಠಾಧೀಶರ ಕೊಡುಗೆಯೂ ಸಹ ಇದೆ. ರಾಜ್ಯ ಸರ್ಕಾರದ ಜೊತೆ ಮಠಗಳು ಸಹ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಮುಖ ಆದ್ಯತೆ ನೀಡಿದೆ ಎಂದರು.

ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಶ್ರೀ ಮಾತನಾಡಿ, ಪ್ರಪಂಚದ ಅನ್ಯ ದೇಶಗಳು ತಂತ್ರಜ್ಞಾನ, ವೈಜ್ಞಾನಿಕ ರಾಜಕೀಯ ಕ್ಷೇತ್ರಗಳಲ್ಲಿ ಬಲಿಷ್ಟವಾಗಿದ್ದರೆ ನಮ್ಮ ಭಾರತ ಮಾತ್ರ ಅನೇಕ ಮಹತ್ಮಾರ ಜ್ಞಾನ ಸಂಪತ್ತಿನ ಮುಖೇನಾ ಶಕ್ತಿಯುಳ್ಳ ರಾಷ್ಟ್ರವಾಯಿತು. ಅಂತಹ ಮಹಾತ್ಮರನ್ನು ನೀಡಿ, ಜ್ಞಾನ ಪರಂಪರೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಮಠವೆಂದರೆ ಮಹದೇಶ್ವರಬೆಟ್ಟದ ಸಾಲೂರು ಬೃಹನ್ ಮಠ ಇಲ್ಲಿ ಲಿಂಗೈಕ್ಯರಾದ ಪಟ್ಟದ ಹಿರಿಯ ಶ್ರೀಗಳು ತಮ್ಮ ಬಾಲ್ಯದಲ್ಲಿಯೇ ಮಠಕ್ಕೆ ಪ್ರವೇಶಿಸಿ, ಮಠದ ಸಂಪ್ರದಾಯ-ಪರಂಪರೆಗಳನ್ನು ಅರಿತು, ಮಠವನ್ನು ಭಕ್ತರ ಪರಂಪರೆಗೂ, ಜ್ಞಾನ-ದಾಸೋಹಕ್ಕೂ ಕೇಂದ್ರೀಯವನ್ನಾಗಿ ಪರಿವರ್ತಿಸಿದರು.ಅವರು ಮಠವನ್ನು ಜ್ಞಾನವನ್ನೇ ಬಂಡವಾಳವಾಗಿ, ಸೇವೆ ಮತ್ತು ದಾಸೋಹದ ಕೇಂದ್ರವಾಗಿಯಾಗಿ ರೂಪಿಸಿದ ಮಹಾನ್ ಸಾಧಕರು. ಜ್ಞಾನವು ಯಾವರೀತಿ ಸಮಾಜಕ್ಕೆ ಬೆಳಕು ನೀಡಬಹುದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದವರು ಗುರುಸ್ವಾಮಿಗಳು ಎಂದರು.

ಶಾಸಕ ಎಂ.ಆರ್ ಮಂಜುನಾಥ್ ಶ್ರೀ ಮಲೆ ಮಹದೇಶ್ವರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಸಾಲೂರು ಬೃಹನ್ ಮಠಕ್ಕೂ ಶ್ರೀ ಕ್ಷೇತ್ರಕ್ಕೂ ಹಿರಿಯ ಶ್ರೀಗಳಾಗಿದ್ದ ಗುರುಸ್ವಾಮಿರವರಿಗೆ ಅವಿನಾಭಾವ ಸಂಬಂಧ, ಅವರು ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದ ವೇಳೆ ಎಚ್ ಎ ಎಲ್ ಸಂಸ್ಥೆಯ ಸಹಕಾರದೊಂದಿಗೆ ₹೫ ಕೋಟಿ ವೆಚ್ಚದಲ್ಲಿ ವಿಧ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ಗುರುಸ್ವಾಮಿರವರು ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೇಡಗಂಪಣರು ಹಾಗೂ ಆದಿವಾಸಿ ಬುಡಕಟ್ಟು ಜನಾಂಗದರಿಗೆ ದಾರಿದೀಪವಾಗಿದ್ದರೂ ಇವರ ಜೀವನವೇ ನಮಗೆ ಅದರ್ಶವಾಗಿದೆ. ಅವರ ಹಾದಿಯಲ್ಲಿಯೇ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರು ತಮ್ಮ ಗುರುಗಳನ್ನು ತಂದೆಯವರ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು,ಕುಂದೂರು ಮಠದ ಡಾ.ಶ್ರೀ ಶರತ್ ಚಂದ್ರ ಸ್ವಾಮಿಗಳು,ಹರಿಹರ ವೀರಶೈವ ಲಿಂಗಾಯತ ಮಠದ ಶ್ರೀ ವಚನಾನಂದ ಸ್ವಾಮಿಗಳು,ಶ್ರೀ ಪುರುಷೋತ್ತಮ ಸ್ವಾಮಿಗಳು, ಡಾ.ಶ್ರೀ ಮುಮ್ಮಡಿ ಶಿವರುದ್ರಸ್ವಾಮಿಗಳು,ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎಚ್ ಎಂ ಗಣೇಶ್ ಪ್ರಸಾದ್,ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಆರ್ ಕೃಷ್ಣಮೂರ್ತಿ,ಹಂದಿಯೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಜಿ ವೆಂಕಟಾಚಲಂ, ಮಾಜಿ ಶಾಸಕರಾದ ಆರ್ ನರೇಂದ್ರ, ಪರಿಮಳ ನಾಗಪ್ಪ, ಬಾಲರಾಜು, ಎನ್ ಮಹೇಶ್, ,ಪ್ರಾಧಿಕಾರದ ಕಾರ್ಯದರ್ಶಿ ರಘು, ಯುವ ಮುಖಂಡ ನಿಶಾಂತ್, ಹೆಚ್ ಎ ಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಕೆ ಸುನಿಲ್ , ಎಚ್ ಎ ಎಲ್ ನಿರ್ದೇಶಕರಾದ ರವಿ,ಎಂ.ಜಿ ಬಾಲಸುಬ್ರಹಣ್ಯ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ,ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...