ಹೊಸಕೋಟೆ: ಪರಿಸರ ರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಮೂಲಕ ಸದೃಢ ಸಮಾಜ ನಿರ್ಮಾಣದ ದೃಢ ಸಂಕಲ್ಪದೊಂದಿಗೆ ಗಣರಾಜ್ಯೋತ್ಸವ ಪ್ರಯುಕ್ತ ರನ್ ಅಂಡ್ ಸೈಕ್ಲೋಥಾನ್ ಆಯೋಜಿಸಲಾಗಿದೆ ಎಂದು ಟಿಜಿಎಸ್‌ಬಿ ಶಾಲಾಧ್ಯಕ್ಷೆ ಉಷಾ ಅಯ್ಯರ್ ತಿಳಿಸಿದರು.
ಬಳಗೆರೆ ಕ್ರಾಸ್ ಇಂದ ಕೋಟೂರುವರೆಗೆ ಹತ್ತು ಕಿಲೋ ಮೀಟರ್ ರನ್ ಹಾಗೂ ಸೈಕ್ಲೋಥಾನ್ ಕಾರ್ಯಕ್ರಮವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ, ತನಿಷ್ಕ್ ವೈಟ್ ಫೀಲ್ಡ್ ಹಾಗೂ ನೆಕ್ಸಸ್ ವೈಟ್ ಫೀಲ್ಡ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಬಹುಮಾನವಾಗಿ ಟ್ರೋಫಿ ವಿತರಣೆ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬಾಲ ನಟ ಪ್ರಕಾಶ್ ಗುಪ್ತ, ರನ್ನಿಂಗ್ ಕೋಚ್ ಅನಿರ್ಬನ್ ಘೋಷ್, ಮಣಿಪಾಲ್ ಆಸ್ಪತ್ರೆಯ ಸಂಯೋಜಕ ಪ್ರತಿಕ್ ಗುಪ್ತ ಸೇರಿದಂತೆ ಹಲ ಗಣ್ಯರು ಹಾಜರಿದ್ದರು.ಫೋಟೋ : 27 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಹೋಬಳಿ ಕೋಟೂರು ಗ್ರಾಮದಲ್ಲಿರುವ ದಿ ಗ್ರೀನ್ ಸ್ಕೂಲ್ ಬೆಂಗಳೂರು ಶಾಲೆಯಲ್ಲಿ ಆಯೋಜಿಸಿದ್ದ ರನ್ ಅಂಡ್ ಸೈಕ್ಲೊಥಾನ್ ಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷೆ ಉಷಾ ಅಯ್ಯರ್ ವಿಜೇತರಿಗೆ ಬಹುಮಾನ ವಿತರಿಸಿದರು.