ತಳಕಲ್-ಲಿಂಗನಬಂಡಿ ರೈಲ್ವೆ ಯೋಜನೆಗೆ ಹಸಿರು ನಿಶಾನೆ

KannadaprabhaNewsNetwork |  
Published : Mar 13, 2024, 02:01 AM IST
೧೨ವೈಎಲ್‌ಬಿ೬:ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ತಳಕಲ್ ಮತ್ತು ಲಿಂಗನಬಂಡಿ ರೈಲ್ವೆ ಸೇವೆ ಲೋರ್ಕಾಪಣೆ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು | Kannada Prabha

ಸಾರಾಂಶ

ಮಂದಗತಿಯಲ್ಲಿ ಸಾಗುತ್ತಿದ್ದ ದೇಶದ ಎಲ್ಲಾ ರೈಲ್ವೆ ಯೋಜನೆಗಳನ್ನು ಅತ್ಯಂತ ಗುಣಮಟ್ಟ ಪಾರದರ್ಶಕದಿಂದ ಕಾಮಗಾರಿಯನ್ನು ಪೂರ್ಣಗೊಳಿಸಿ ಜನತೆಗೆ ಲೋರ್ಕಾಪಣೆಗೊಳಿಸಿದ ಶ್ರೇಯಸ್ಸು ನಮ್ಮೆಲ್ಲರ ಹೆಮ್ಮೆಯ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಂದಗತಿಯಲ್ಲಿ ಸಾಗುತ್ತಿದ್ದ ದೇಶದ ಎಲ್ಲಾ ರೈಲ್ವೆ ಯೋಜನೆಗಳನ್ನು ಅತ್ಯಂತ ಗುಣಮಟ್ಟ ಪಾರದರ್ಶಕದಿಂದ ಕಾಮಗಾರಿಯನ್ನು ಪೂರ್ಣಗೊಳಿಸಿ ಜನತೆಗೆ ಲೋರ್ಕಾಪಣೆಗೊಳಿಸಿದ ಶ್ರೇಯಸ್ಸು ನಮ್ಮೆಲ್ಲರ ಹೆಮ್ಮೆಯ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಮಂಗಳವಾರ ತಳಕಲ್ ಮತ್ತು ಲಿಂಗನಬಂಡಿ ಗದಗ-ವಾಡಿ ರೈಲ್ವೆ ನಿಲ್ದಾಣ ಹಾಗೂ ಪ್ರಧಾನಿ ನರೇಂದ್ರ ಮೋದಿ ₹೮೫,೦೦೦ ರೂ ಕೋಟಿಗೂ ಹೆಚ್ಚಿನ ಮೌಲ್ಯದ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ೧೦ ವಂದೇ ಭಾರತ ಎಕ್ಸ್ ಪ್ರಸ್ ರೈಲುಗಳು ಮತ್ತು ಇತರ ರೈಲುಗಳು ಸೇವೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ವರ್ಚವಲ್ ಮೂಲಕ ಚಾಲನೆ ನೀಡುವ ಭಾಗವಾಗಿ ಲಿಂಗನಬಂಡಿ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗದಗ-ವಾಡಿ ರೈಲ್ವೆ ಯೋಜನೆಗೆ ಈಗಿನ ಶಾಸಕ ಹಾಗೂ ಅಂದಿನ ಸಂಸದರಾಗಿದ್ದ ಬಸವರಾಜ ರಾಯರಡ್ಡಿಯವರು ಭೂಮಿಪೂಜೆ ನೇರವೇರಿಸಿದ್ದರು. ಆದರೆ ಅನುಷ್ಠಾನಗೊಳಿಸಲಿಲ್ಲ, ಆದರೆ ನನ್ನ ಕಾಲಾವಧಿಯಲ್ಲಿ ಪೂರ್ಣಗೊಳಿಸಿದ ಸಂತೃಪ್ತಿ ನನಗಿದೆ. ಆದರೆ ರಾಯರಡ್ಡಿಯವರು ತಾವೇ ಮಾಡಿದ್ದು ಎಂದು ಹೇಳುತ್ತಿರುವುದು ಗೌರವ ತರುವಂಥದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ದೇಶದ ಸಂರಕ್ಷಣೆಗಾಗಿ 3ನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆನ್ನುವುದು ಜನತೆಯ ಆಶಯವಾಗಿದೆ. ಸಂಸದ ಸಂಗಣ್ಣ ಕರಡಿ ತಮ್ಮ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುವ ಮೂಲಕ ಜನಪರ ಕಾರ್ಯ ಮಾಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಗುಳಗಣ್ಣನವರ ಮಾತನಾಡಿದರು. ಲಿಂಗನಬಂಡಿ ಮೌನೇಶ್ವರಮಠ ಉಳಿವೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹುಬ್ಬಳ್ಳಿ ರೈಲ್ವೆ ವಿಭಾಗದ ಹಿರಿಯ ಡಿಇಎಚ್ ವಿಜಯ ಕುಮಾರ, ಹುಬ್ಬಳ್ಳಿ ರೈಲ್ವೆ ವಿಭಾಗದ ರಾಮಲಿಂಗ ನಾಯ್ಕ, ದೇವಯ್ಯ , ಸಿರಿಲ್, ಎಇಇ ಪ್ರಭುಗೌಡ, ಅಭಯಗೌಡ, ಕೆ. ವೆಂಕಟಸುಬ್ಬರಾವ್, ಡಿ.ಎಚ್. ಚನ್ನಬಸಪ್ಪ, ಪಿ.ಡಿ. ಹಳ್ಳಿಕೇರಿ, ಬಸವರಾಜ ಮಾಲಗತ್ತಿ, ಮುಖಂಡರಾದ ಬಸವನಗೌಡ ತೊಂಡಿಹಾಳ, ಸಿ.ಎಚ್. ಪಾಟೀಲ್, ವೀರಣ್ಣ ಹುಬ್ಬಳ್ಳಿ, ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷೆ ದೇವಮ್ಮ ಭೂತಲ್, ತಹಸೀಲ್ದಾರ ಬಸವರಾಜ, ಪುರಸಭೆ ಮಾಜಿ ಅಧ್ಯಕ್ಷ ಜಿ.ಕೆ. ಹಿರೇಮಠ, ಮಾರುತಿ ಗಾವರಾಳ, ಶಿವಶಂಕರರಾವ್ ದೇಸಾಯಿ, ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್, ಫಕೀರಪ್ಪ ತಳವಾರ, ದೇವೇಂದ್ರಗೌಡ ಮಾಲಿ ಪಾಟೀಲ್, ಶಿವಪ್ಪ ವಾದಿ, ಅಯ್ಯನಗೌಡ ಕೆಂಚಮ್ಮನವರ್, ಮಹಾದೇವಪ್ಪ ಹುಡೇದ, ಮೌನೇಶ ನಂದಿಹಾಳ, ಶೇಖರಗೌಡ ರಾಮತ್ನಾಳ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಬಾಲ್ಯದಲ್ಲೇ ಮಾನವೀಯತೆ ಕಲಿಸಿ: ವಿಜಯಾನಂದ ಕಾಶಪ್ಪನವರ
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಶಾಸಕಿ ಎಂ.ಪಿ.ಲತಾ