ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಬಂದ್‌

KannadaprabhaNewsNetwork |  
Published : Mar 13, 2024, 02:01 AM IST
ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಬಡವರಿಗೆ ಗ್ಯಾರಂಟಿ ಕೊಡುವ ಬಗ್ಗೆ ನಮಗೆ ಅಸಮಾಧಾನವಿಲ್ಲ.ಆದರೆ ಗ್ಯಾರಂಟಿಗಳನ್ನು ಕೊಡುವ ಭರದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ.ಈ ಗ್ಯಾರಂಟಿಗಳು ಲೋಕಸಭಾ ಚುನಾವಣಿ ಮುಗಿದ 15 ದಿನದೊಳಗೆ ಕಾಂಗ್ರೆಸ್ ಸರ್ಕಾರ ಒಂದೊಂದೇ ಕಾರಣ ನೀಡುತ್ತಾ ಬಂದ್ ಮಾಡುವುದು ನಿಶ್ಚಿತವಾಗಿದೆ

ಗದಗ: ಲೋಕಸಭಾ ಚುನಾವಣೆ ಮುಗಿದ ಸಂಜೆ ಒಳಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಅವರು ತಾಲೂಕಿನ ಲಕ್ಕುಂಡಿ ಗ್ರಾಮದ 3,8.ಮತ್ತು 9 ನೇ ವಾರ್ಡಿನಲ್ಲಿ ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ₹49.24 ಲಕ್ಷ ಅನುದಾನದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಬಡವರಿಗೆ ಗ್ಯಾರಂಟಿ ಕೊಡುವ ಬಗ್ಗೆ ನಮಗೆ ಅಸಮಾಧಾನವಿಲ್ಲ.ಆದರೆ ಗ್ಯಾರಂಟಿಗಳನ್ನು ಕೊಡುವ ಭರದಲ್ಲಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ.ಈ ಗ್ಯಾರಂಟಿಗಳು ಲೋಕಸಭಾ ಚುನಾವಣಿ ಮುಗಿದ 15 ದಿನದೊಳಗೆ ಕಾಂಗ್ರೆಸ್ ಸರ್ಕಾರ ಒಂದೊಂದೇ ಕಾರಣ ನೀಡುತ್ತಾ ಬಂದ್ ಮಾಡುವುದು ನಿಶ್ಚಿತವಾಗಿದೆ. ಸರ್ಕಾರ ಹಣಕಾಸಿನ ತೊಂದರೆ ಅನುಭವಿಸುತ್ತಿದೆ ಎಂದರು.ಇನ್ನೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಗ್ಯಾರಂಟಿಯಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಜನರು ತಿರಸ್ಕರಿಸಲಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ದೇಶದ ರಕ್ಷಣಿ ಕುಂಠಿತವಾಗಿ ಸೈನಿಕರು ಬಲಿಯಾಗುತ್ತಿದ್ದರು. ಆದರೆ ಮೋದಿಯವರು ಸೈನಿಕರಿಗೆ ಬಲ ತುಂಬಿದ್ದು ಗಡಿ ರಕ್ಷಣೆ ಸುರಕ್ಷಿತವಾಗಿದೆ. ಪ್ರತಿದಿನ ಜಮ್ಮು ಕಾಶ್ವೀರ ಹೊತ್ತು ಉರಿಯುತ್ತಿತ್ತು. 375/35 ಎ ಕಾನೂನು ರದ್ದು ಮಾಡಿದ ಮೇಲೆ ಶಾಂತವಾಗಿ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ರಾಹುಲ್ ಗಾಂಧಿ ನಿರ್ಭಿತಿಯಿಂದ ಓಡಾಡುವಂತಾಗಿದೆ. ಎಲ್ಲರೂ ಪಕ್ಷ ಭೇದ ಮರೆತು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಬಹುಮತದೊಂದಿಗೆ ಗೆಲ್ಲಿಸಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಬಹು ದಿನದ ಬೇಡಿಕೆಯಂತೆ ಸುಲಭ ಶೌಚಾಲಯ ನಿರ್ಮಾಣ ಕಾಮಗಾರಿಗೆ ಈ ಭಾಗದ ಸಂಸದ ಪಿ.ಸಿ. ಗದ್ದಿಗೌಡರ ಅನುದಾನ ಒದಗಿಸಿದ್ದು ಸಂತಸ ತಂದಿದೆ. ಇದರ ಜತೆಗೆ ಎರಡು ಸಮುದಾಯ ಭವನಕ್ಕೆ ಸಿ.ಸಿ. ಪಾಟೀಲ ಅನುದಾನ ಒದಗಿಸಿದ್ದು ಸ್ವಾಗತಾರ್ಯವಾಗಿದೆ. ಆದ್ದರಿಂದ ಅಭಿವೃದ್ಧಿ ಮಾಡಿದ ಜನಪ್ರತಿನಿಧಿಗಳಿಗೆ ಬೆನ್ನು ತಟ್ಟುವ ಕೆಲಸವಾಗಬೇಕಿದ್ದು ಮೋದಿ ಮೂರನೇ ಭಾರಿ ಪ್ರಧಾನಿಯಾಗುವ ಕಾರ್ಯ ಮಾಡಬೇಕಾಗಿದೆ ಇದರಿಂದ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್.ಪೂಜಾರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಲಕ್ಕುಂಡಿ ಮಂಡಲ ಬಿಜೆಪಿ ಅಧ್ಯಕ್ಷ ನಿಂಗಪ್ಪ ಮಣ್ಣೂರು, ಹಿರಿಯ ಮುಖಂಡ ವಸಂತ ಮೇಟಿ, ಗ್ರಾಪಂ ಸದಸ್ಯ ರುದ್ರಪ್ಪ ಮುಸ್ಕಿನಭಾವಿ, ಕುಬೇರಪ್ಪ ಬೆಂತೂರ, ವೀರಣ್ಣ ಚಕ್ರಸಾಲಿ, ಮಹಾಂತೇಶ ಕಮತರ, ಬಸವರಾಜ ಹಟ್ಟಿ, ವಿರುಪಾಕ್ಷಿ ಬೆಟಗೇರಿ, ಲಲಿತಾ ಗದಗಿನ, ಲಕ್ಷ್ಮವ್ವ ಭಜಂತ್ರಿ, ಈರಮ್ಮ ಚಬ್ಬರಭಾವಿ, ಮಂಜುಳಾ ಮೆಣಸಿನಕಾಯಿ, ಫಕೀರವ್ವ ಬೇಲೇರಿ, ರಜೀಯಾಬೇಗಂ ತಹಸೀಲ್ದಾರ, ಪ್ರೇಮಾ ಮಟ್ಟಿ ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಬಿಜೆಪಿ ಹಿರಿಯ ಮುಖಂಡ ದತ್ತಾತ್ರೇಯ ಜೋಶಿ ನಿರೂಪಿಸಿ ವಂದಿಸಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ