ಚಿಕ್ಕಬಳ್ಳಾಪುರ: ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ರವರು ರಂಜಾನ್ ಹಬ್ಬದ ಅಂಗವಾಗಿ ಮಂಗಳವಾರ ನಗರದ ಮದೀನಾ ಶಾದಿ ಮಹಲ್ ನಲ್ಲಿ ನಗರದ ಸುಮಾರು 1000 ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.
ಮುಸ್ಲಿಂ ಸಮುದಾಯದ ಮುಖಂಡ ಇಸ್ಮಾಯಿಲ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ಬಹಳ ಸಹಾಯವಾಗಲಿದೆ. ಅವರು ಸಂತೋಷದಿಂದ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ ಎಂದು ಹೇಳಿ, ಮುಸ್ಲಿಂ ಸಮುದಾಯದ ಪರವಾಗಿ ಸಂದೀಪ್ ರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಅಮ್ಜದ್, ನಯಾಜ಼್, ಹಿದಾಯತ್, ಮೌಲ, ಸಾಧಿಕ್, ಅಸ್ಲಂ, ಇಮ್ತೀಯಾಜ಼್, ಮುಬಾರಕ್, ಮತ್ತಿತರರು ಇದ್ದರು. ಸಿಕೆಬಿ-5 ನಗರದ ಮದೀನಾ ಶಾದಿ ಮಹಲ್ ನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಅನ್ನು ಸಂದೀಪ್ ರೆಡ್ಡಿ ವಿತರಣೆ ಮಾಡಿದರು