ಹೊನ್ನಮಾರನಹಳ್ಳಿಯಲ್ಲಿ ಆಯುಷ್ಮಾನ್ ಸ್ವಾಸ್ಥ್ಯ ಕಟ್ಟಡಕ್ಕೆ ಭೂಮಿಪೂಜೆ

KannadaprabhaNewsNetwork |  
Published : Jan 19, 2026, 02:30 AM IST
18ಎಚ್ಎಸ್ಎನ್19 : ಹೊನ್ನಮಾರನಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ ವೆಚ್ಚದ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯ ಆರೋಗ್ಯ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ಡಾಕ್ಟರ್ ಪ್ರವೀಣ್, ರಂಗಸ್ವಾಮಿ, ವಿಠ್ಠಲ್ ಕುಮಾರ್, ನಟರಾಜ್, ತೋಟಿ ನಾಗರಾಜ್, ದೊರೆಸ್ವಾಮಿ, ಜಯರಾಮ್, ನಾರಾಯಣ, ಚಂದ್ರಶೇಖರ್, ಇದ್ದರು. | Kannada Prabha

ಸಾರಾಂಶ

ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ಮೂಲಕ ತಾಲೂಕಿಗೆ 40 ಆಸ್ಪತ್ರೆ ಕಟ್ಟಡಗಳು ಮಂಜೂರಾಗಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದ ಲ್ಲಿ 65 ಲಕ್ಷ ರುಪಾಯಿ ವೆಚ್ಚದ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯ ಆರೋಗ್ಯ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 15ನೇ ಹಣಕಾಸು ಯೋಜನೆಯಡಿ ಕಟ್ಟಡಗಳು ಮಂಜೂರಾಗಿವೆ, ಈ ಕಟ್ಟಡಗಳಿಂದ ಆರೋಗ್ಯ ಇಲಾಖೆಯಿಂದ ಗ್ರಾಮೀಣ ಭಾಗದ ಜನರಿಗೆ ನಡೆಯುವ ಚಿಕಿತ್ಸೆಗಳಿಗೆ ಅನುಕೂಲವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ಮೂಲಕ ತಾಲೂಕಿಗೆ 40 ಆಸ್ಪತ್ರೆ ಕಟ್ಟಡಗಳು ಮಂಜೂರಾಗಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದ ಲ್ಲಿ 65 ಲಕ್ಷ ರುಪಾಯಿ ವೆಚ್ಚದ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯ ಆರೋಗ್ಯ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 15ನೇ ಹಣಕಾಸು ಯೋಜನೆಯಡಿ ಕಟ್ಟಡಗಳು ಮಂಜೂರಾಗಿವೆ, ಈ ಕಟ್ಟಡಗಳಿಂದ ಆರೋಗ್ಯ ಇಲಾಖೆಯಿಂದ ಗ್ರಾಮೀಣ ಭಾಗದ ಜನರಿಗೆ ನಡೆಯುವ ಚಿಕಿತ್ಸೆಗಳಿಗೆ ಅನುಕೂಲವಾಗುತ್ತದೆ ಎಂದರು.

ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಜ್ಞ ವೈದ್ಯರನ್ನು ಸರ್ಕಾರ ನೇಮಿಸಬೇಕು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್‌ ನರ್ಸ್‌ಗಳಿಗೆ ಸಂಬಳ ನೀಡಬೇಕು ಎಂದು ಒತ್ತಾಯಿಸಿದರು. 40 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸರ್ಕಾರಿ ಮಂಜೂರು ಭೂಮಿಯನ್ನು ಕೊಡಿಸುವುದಾಗಿ ತಿಳಿಸಿದರು. ಅವ್ವೆರಹಳ್ಳಿ ಗ್ರಾಮಕ್ಕೆ 20 ಲಕ್ಷ ವೆಚ್ಚದ ಅಂಬೇಡ್ಕರ್ ಭವನ ಮಂಜೂರಾಗಿದೆ. ಹೊನ್ನಮರನಹಳ್ಳಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಹಣ, ಗ್ರಾಮಕ್ಕೆ 500 ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆ ಮಾಡಿಸುವ ಭರವಸೆ ನೀಡಿದರು. ಗ್ರಾಮಕ್ಕೆ ಹೊಂದಿಕೊಂಡಂತೆ ಇದ್ದ 2 ಎಕರೆ 30 ಗುಂಟೆ, ಸುಮಾರು ವರ್ಷಗಳಿಂದ ಗುಂಡಿ ಬಿದಿದ್ದ ಸರ್ಕಾರಿ ಜಾಗವನ್ನು ಸಮತಟ್ಟದ ಫೀಲ್ಡ್ ಮಾಡಿ ವಾಲಿಬಾಲ್ ಕ್ರೀಡಾಂಗಣ, ಸಭೆ ಸಮಾರಂಭಗಳನ್ನು ಮಾಡಲು ಫೀಲ್ಡ್ ನಿರ್ಮಾಣ ಮಾಡಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ್ ಕುಮಾರ್ ಅವರ ಕೆಲಸವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಪ್ರವೀಣ್, ಗ್ರಾಮ ಪಂಚಾಯತಿ ಅಧ್ಯಕ್ಷ ನಟರಾಜ್ ಯಾದವ್, ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲ್ ಕುಮಾರ್, ಮಂಜುನಾಥ್ ಸ್ವಾಮಿ, ಹೊನ್ನೇಗೌಡ, ಶಿವಕುಮಾರ್, ಮುಖಂಡರುಗಳಾದ ತೋಟಿ ನಾಗರಾಜ್, ಬಿ. ಆರ್‌. ದೊರೆಸ್ವಾಮಿ, ಎಚ್‍. ಬಿ. ರಂಗಸ್ವಾಮಿ, ಬೋರೇಗೌಡ, ಶಿವೇಗೌಡ, ಜಯರಾಮ್, ರಾಜೇಗೌಡ, ಸುರೇಶ್, ಚಂದ್ರಣ್ಣ, ಜಯರಾಮ್, ಎಚ್. ಬಿ.ಶೇಕರ್, ಚಂದ್ರಶೇಖರ್‌, ಸುಯಿಲ್, ಅವೆರಳ್ಳಿ ನಾಗಣ್ಣ, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಲ್ಲೂರು ಗ್ರಾಮದಲ್ಲಿ ಅದ್ಧೂರಿ ಲಕ್ಷ್ಮೀದೇವಿ ಉತ್ಸವ
ಬಸವಣ್ಣ ವಿಚಾರಧಾರೆಗಳು ಸಮಾಜಕ್ಕೆ ಮುಖ್ಯ: ಸತೀಶ್‌ ಜಾರಕಿಹೊಳಿ