- 2 ದಶಕಗಳ ಹಳೆಯ ಬೇಡಿಕೆ ಸಾಕಾರಕ್ಕೆ ಕ್ಷಣಗಣನೆ: ಬಿ.ಎಚ್.ವೀರಭದ್ರಪ್ಪ ಮಾಹಿತಿ - - -
ಎರಡು ದಶಕಕ್ಕಿಂತಲೂ ಹಳೆಯ ಬೇಡಿಕೆಯಾದ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ರಾಜಾ ಸತ್ಯಹರಿಶ್ಚಂದ್ರ ಜಯಂತ್ಯುತ್ಸವ ಸಮಾರಂಭವು ಫೆ.15ರಂದು ಇಲ್ಲಿನ ಗಾಂಧಿ ನಗರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮಾರಂಭ ಅಧ್ಯಕ್ಷತೆ ವಹಿಸಿ, ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದರು.ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಕೆ.ಎಸ್. ಬಸವಂತಪ್ಪ, ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್, ತಾಂಡಾ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಹಾಸಭಾ ಗೌರವಾಧ್ಯಕ್ಷ ರವಿನಾರಾಯಣ, ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ, ಸಮಾಜದ ಮುಖಂಡರಾದ ಬಿ.ಎಂ. ರಾಮಸ್ವಾಮಿ, ಎಲ್.ಎಂ. ಹನುಮಂತಪ್ಪ, ದೋಣಿ ನಿಂಗಪ್ಪ, ಎಂ.ಹಾಲೇಶ, ಎಲ್.ಡಿ.ಗೋಣೆಪ್ಪ, ಎನ್.ನೀಲಗಿರಿಯಪ್ಪ, ಕೆ.ಚಂದ್ರಣ್ಣ, ಎಸ್.ಮಲ್ಲಿಕಾರ್ಜುನ, ಎಲ್.ಎಂ.ಎಚ್.ಸಾಗರ್, ಎಸ್.ಶಿವಲಿಂಗಪ್ಪ, ಜೆ.ಡಿ.ಪ್ರಕಾಶ ಇತರರು ಭಾಗವಹಿಸುವರು ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡರಾದ ಎಲ್.ಎಂ. ಹನುಮಂತಪ್ಪ, ಎಸ್.ಮಲ್ಲಿಕಾರ್ಜುನ, ಹೆಗ್ಗರೆ ರಂಗಪ್ಪ, ಸಿ.ಬಸವರಾಜ, ಎಲ್.ಎಂ.ಎಚ್. ಸಾಗರ, ಮಂಜುನಾಥ ಮೇಗಳಗೆರೆ, ನಾಗರಾಜ, ಹನುಮಂತಪ್ಪ, ಬಿ.ಆರ್.ಶಿವಮೂರ್ತಿ, ಈಶ್ವರ ಶಾಮನೂರು, ಶಂಕರ, ಬಿ.ಆರ್.ಮಂಜುನಾಥ, ದಿನೇಶ ಇತರರು ಇದ್ದರು.
(ಬಾಕ್ಸ್) * ಅಣಕು ಸಮಾಧಿಗಳ ನಿರ್ಮಿಸಿ ಹೋರಾಡಿದ್ದೆವು ಈ ಹಿಂದೆ ನಗರಸಭೆ ಇದ್ದಾಗ ಗಾಂಧಿ ನಗರದ ಸಾರ್ವಜನಿಕ ರುದ್ರಭೂಮಿ ಕೇಳುವವರೇ ಇರಲಿಲ್ಲ. ಆಗ ಎಲ್ಲ 41 ನಗರಸಭೆ ಸದಸ್ಯರ ಅಣಕು ಸಮಾಧಿಗಳನ್ನು ನಗರಸಭೆ (ಈಗಿನ ಪಾಲಿಕೆ) ಮುಂಭಾಗದಲ್ಲಿ ನಿರ್ಮಾಣ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಲಾಗಿತ್ತು. ಇದರಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವೈಯಕ್ತಿಕವಾಗಿ ₹2 ಕೋಟಿ ನೀಡಿ, ಸ್ಪಂದಿಸಿದ್ದರು. ದೂಡಾ ಸದಸ್ಯನಾಗಿ ತಾವು ಇದ್ದಾಗ ತಮಗೆ ಬಂದ ₹5 ಕೋಟಿ ಅನುದಾನವನ್ನು ಬಳಸಿ, ಇಡೀ ರುದ್ರಭೂಮಿ ಸುತ್ತ ಕಾಂಪೌಂಡ್ ನಿರ್ಮಾಣ, ರುದ್ರಭೂಮಿಗೆ ಕಾಯಕಲ್ಪ ನೀಡಿದ್ದೆವು ಎಂದು ಮಾಹಿತಿ ನೀಡಿದರು.
-13ಕೆಡಿವಿಜಿ12.ಜೆಪಿಜಿ: