ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿಗೆ ಭೂಮಿ ಪೂಜೆ

KannadaprabhaNewsNetwork |  
Published : Nov 22, 2026, 02:30 AM IST
ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿ ನಿರ್ಮಾಣಕ್ಕೆ ಭೂಮಿ ಪೂಜೆ | Kannada Prabha

ಸಾರಾಂಶ

ಇಲ್ಲಿನ ಕಕ್ಕೆಹೊಳೆ ಬಳಿಯ ಶ್ರೀ ಅಯ್ಯಪ್ಪಸ್ವಾಮಿ ಮತ್ತು ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿ ನಿರ್ಮಾಣಕ್ಕೆ ದೇವಾಲಯದ ಶಿಲ್ಪಿಗಳಾದ ಕಾಣಿಪಾಯ್ಯೂರ್ ಷಣ್ಮುಖಮ್ ರವರು ಶನಿವಾರದಂದು ಭೂಮಿ ಪೂಜೆ ನೆರವೇರಿಸಿದರು.

ಸೋಮವಾರಪೇಟೆ: ಇಲ್ಲಿನ ಕಕ್ಕೆಹೊಳೆ ಬಳಿಯ ಶ್ರೀ ಅಯ್ಯಪ್ಪಸ್ವಾಮಿ ಮತ್ತು ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಪೊಟ್ಟನ್ ದೇವರ ನೂತನ ಗುಡಿ ನಿರ್ಮಾಣಕ್ಕೆ ದೇವಾಲಯದ ಶಿಲ್ಪಿಗಳಾದ ಕಾಣಿಪಾಯ್ಯೂರ್ ಷಣ್ಮುಖಮ್ ರವರು ಶನಿವಾರದಂದು ಭೂಮಿ ಪೂಜೆ ನೆರವೇರಿಸಿದರು. ಈ ಹಿಂದೆ ಪೊಟ್ಟನ್ ದೇವರ ಗುಡಿ ನಿರ್ಮಾಣದ ಸಂದರ್ಭ ಸೂಕ್ತ ಸ್ಥಳಾವಕಾಶ ಇಲ್ಲದೇ ಗುಡಿ ನಿರ್ಮಾಣ ಮಾಡಲಾಗಿತ್ತು. ನಂತರ ದೇವಾಲಯದ ತಂತ್ರಿಗಳಾದ ಕಾಳೇಘಾಟ್ ಮನೆತನದ ಶ್ರೀ ನಾರಾಯಣ ನಂಬೂದರಿಯವರ ಸಲಹೆ ಹಾಗೂ ಶಿಲ್ಪಿಗಳಾದ ಕಾಣಿಪಯ್ಯೂರ್ ಷಣ್ಮುಖಮ್ ಅವರ ಮಾರ್ಗದರ್ಶನದಲ್ಲಿ ನೂತನವಾಗಿ ವ್ಯವಸ್ಥಿತ ರೀತಿಯಲ್ಲಿ ಪೊಟ್ಟನ್ ದೇವರ ಗುಡಿ ನಿರ್ಮಾಣ ಮಾಡಬೇಕೆಂದು ಪ್ರಶ್ನಾಚಿಂತನದ ಮೂಲಕ ಕಂಡುಬಂದ ಹಿನ್ನೆಲೆಯಲ್ಲಿ ಶನಿವಾರದಂದು ದೇವಾಲಯ ಸಮಿತಿ ವತಿಯಿಂದ ನೂತನ ಗುಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ತಿಳಿಸಿದ್ದಾರೆ. ಈ ಸಂದರ್ಭ ದೇವಾಲಯ ಸಮಿತಿ ಕಾರ್ಯದರ್ಶಿ ಪ್ರಸನ್ನ ನಾಯರ್, ಮಾಜಿ ಅಧ್ಯಕ್ಷ ಎನ್.ಜಿ.ಜನಾರ್ಧನ್, ಉಪಾಧ್ಯಕ್ಷರುಗಳಾದ ರಾಜೇಂದ್ರನ್, ರಾಧಾಕೃಷ್ಣ, ಪದಾಧಿಕಾರಿಗಳಾದ ವೇಲಾಯುಧನ್, ಗಣೇಶ್, ಪದ್ಮನಾಭ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೇ ಇಲಾಖೆಗೆ ಲೋಕಾಯುಕ್ತ ದಿಢೀರ್ ದಾಳಿ: ಪರಿಶೀಲನೆ
ಬಾಲಕಿಯ ರುಂಡ ಕಡಿದವನಿಗೆ ಮರಣದಂಡನೆ