ಕನ್ನಡಪ್ರಭ ವಾರ್ತೆ ಸಕಲೇಶಪುರ
ಶುಕ್ರವಾರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪರೀಕ್ಷ (ಲ್ಯಾಬ್) ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇದುವರಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗಾಗಿ ಜಿಲ್ಲಾಕೇಂದ್ರ ಅಥಾವ ಖಾಸಗಿ ಆಸ್ಪತ್ರೆಗಳಿಗೆ ಜನರು ತೆರಳಬೇಕಿತ್ತು. ಇದರಿಂದಾಗಿ ಹಣ ಹಾಗೂ ಸಮಯ ಎರಡೂ ವ್ಯರ್ಥವಾಗುತಿತ್ತು. ಇದನ್ನು ಮನಗಂಡು 50 ಲಕ್ಷ ರು. ವೆಚ್ಚದಲ್ಲಿ ವಿಭಾಗೀಯ ಮಟ್ಟದ ಪರೀಕ್ಷ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ ಬಹುತೇಕ ಎಲ್ಲ ಆರೋಗ್ಯ ಸಂಬಂಧಿ ಪರೀಕ್ಷೆಗಳನ್ನು ಈ ಆಸ್ಪತ್ರೆಯಲ್ಲೆ ಶೀಘ್ರದಲ್ಲೆ ಪಡೆಯಬಹುದಾಗಿದೆ ಎಂದರು. ಕ್ರಾಫರ್ಡ್ ಆಸ್ಪತ್ರೆಯನ್ನು ಹಂತಹಂತವಾಗಿ ಮೇಲ್ದರ್ಜೆಗೆರಿಸಲಾಗುತ್ತಿದ್ದು ಸದ್ಯ ಆಸ್ಪತ್ರೆಯಲ್ಲಿ ರೋಗಿಗಳಿಗಿರುವ ಎಲ್ಲ ಅವಶ್ಯಕತೆಗಳನ್ನು ಪೊರೈಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ತರಾಟೆ: ಸ್ವಚ್ಛತಾ ಸಿಬ್ಬಂದ ಶೋ ಹಾಗೂ ಮಾಸ್ಕ್ ಇಲ್ಲದೆ ಸ್ವಚ್ಛತೆಯಲ್ಲಿ ತೊಡಗಿದ್ದನ್ನು ಗಮನಿಸಿದ ಶಾಸಕ ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧೀಕಾರಿ ಡಾ. ಅರುಣ್ಅ ವರನ್ನು ತರಾಟೆಗೆ ತೆಗೆದುಕೊಂಡು ವಿದ್ಯಾವಂತರೆ ಹೀಗೆ ಮಾಡಿದರೆ ಹೇಗೆ ಅಸಹ್ಯ ಹುಟ್ಟಿಸುವ ವಸ್ತುಗಳನ್ನು ಸ್ವಚ್ಚತೆ ಮಾಡುವ ಸಂದರ್ಭದಲ್ಲಿ ಸ್ವಚ್ಚತಾ ಸಿಬ್ಬಂದಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿದಿದ್ದರೆ ಹೇಗೆ ಎಂದರು. ತಕ್ಷಣವೇ ಸಿಬ್ಬಂದಿಗೆ ಕೈಕವಚ, ಮುಖಗವಚ ಹಾಗೂ ಶೋಗಳನ್ನು ನೀಡಲಾಯಿತು.