ತಾಲೂಕಿನ ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ ಗ್ರಾಮದಲ್ಲಿ ಗೌರಿ ಹಬ್ಬದ ನಿಮಿತ್ತ ಪಟಾಕಿ ಸಿಡಿಸಿದ ವಿಚಾರವಾಗಿ ಉಂಟಾದ ಮಾತಿನ ನಡೆದು ಎರಡು ಗುಂಪುಗಳ ನಡುವೆ ಘರ್ಷಣೆಯಾದ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗೌರಿ ಹಬ್ಬದ ನಿಮಿತ್ತ ಪಟಾಕಿ ಹೊಡೆದ ವಿಚಾರದಲ್ಲಿ ಗಲಾಟೆ
17 ಜನರು ಪೊಲೀಸ್ ವಶಕ್ಕೆ, ದೂರು-ಪ್ರತಿದೂರು ದಾಖಲು
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ಹಾಲಸಮುದ್ರ ಗ್ರಾಮದಲ್ಲಿ ಗೌರಿ ಹಬ್ಬದ ನಿಮಿತ್ತ ಪಟಾಕಿ ಸಿಡಿಸಿದ ವಿಚಾರವಾಗಿ ಉಂಟಾದ ಮಾತಿನ ನಡೆದು ಎರಡು ಗುಂಪುಗಳ ನಡುವೆ ಘರ್ಷಣೆಯಾದ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.
ಹೊಡೆದಾಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ತಲೆಗೆ ತೀವ್ರ ಪೆಟ್ಟಾಗಿದೆ. ರಕ್ತಸ್ರಾವದ ಕಾರಣಕ್ಕೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಲಾಟೆ ನಿಯಂತ್ರಣಕ್ಕೆ ತೆರಳಿದ ಪೊಲೀಸ್ ಪೇದೆಗಳಿಗೂ ಗಾಯಗಳಾಗಿವೆ.
ಗ್ರಾಮದಲ್ಲಿ ಸಂಜೆಯವರೆಗೂ ಸಂಭ್ರಮದಿಂದಲೇ ಮಹಿಳೆಯರು ಗೌರಿ ಹಬ್ಬ ಅಚರಣೆ ಮಾಡಿದ್ದಾರೆ. ರಾತ್ರಿ ಕೆಲ ಮಹಿಳೆಯರು ಆರತಿ ತಟ್ಟೆ ಹಿಡಿದು ರಸ್ತೆಯಲ್ಲಿ ಹೊರಟಿದ್ದಾಗ ಒಂದು ಗುಂಪಿಗೆ ಸೇರಿದ ಯುವಕರು ಪಟಾಕಿ ಹಚ್ಚಿದ್ದಾರೆ. ಆಗ ಎರಡು ಗುಂಪುಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಾಟೆ, ಮಾರಾಮಾರಿ ಘರ್ಷಣೆಗೆ ತಿರುಗಿದೆ.
ಈ ವೇಳೆ ಗುಂಪೊಂದು ಉದ್ರಿಕ್ತಗೊಂದು ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಕೆಲವರು ಕಾರದ ಪುಡಿ ಎರಚಿದ್ದಾರೆ. ಗುಂಪುಗೂಡಿ ಮನೆಗಳಿಗೆ ಮೇಲೆ ದಾಳಿ ನಡೆಸಿ, ಬಾತ್ರೂಮ್ ಬಾಗಿಲು, ಕಿಟಕಿಗಳ ಗಾಜುಗಳನ್ನು ಒಡೆದು ಹಾನಿ ಮಾಡಿದ್ದಾರೆ ಎನ್ನಲಾಗಿದೆ.
ಗಲಾಟೆಯನ್ನು ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಮಾಡುತ್ತಿದ್ದವರ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕಾರಟಗಿ ಪೊಲೀಸ್ ಠಾಣೆಯಲ್ಲಿ ಒಂದು ಗುಂಪಿನವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ೩ ಡಿಆರ್ ವ್ಯಾನ್, ಒಬ್ಬ ಪಿಐ, ಗಂಗಾವತಿ ಮತ್ತು ಕನಕಗಿರಿ ಪಿಎಸ್ಐಗಳು ಬಿಡಾರ ಹೂಡಿದ್ದಾರೆ.ಎಸ್ಪಿ ಭೇಟಿ:
ಹಾಲಸಮುದ್ರದಲ್ಲಿ ತಡರಾತ್ರಿ ನಡೆದ ಘಟನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಭೇಟಿ ನೀಡಿ ಮಾಹಿತಿ ಪಡೆದರು.
ಘಟನೆ ಸ್ಥಳವಾದ ವಾಲ್ಮೀಕಿ ದೇವಸ್ಥಾನ, ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡುವ ಸ್ಥಳವನ್ನು ಅವರು ಪರಿಶೀಲಿಸಿದರು. ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಮತ್ತು ಪಿಐ ಸುಧೀರ್ ಬೆಂಕಿ ಸ್ಥಳದಲ್ಲಿ ಇದ್ದು ಘಟನೆಯ ವಿವರವನ್ನು ನೀಡಿದರು.
೬೫ ಜನರ ವಿರುದ್ಧ ಜಾನಿ ನಿಂದನೆ ಪ್ರಕರಣ:
ಘಟನೆಗೆ ಸಂಬಂಧಿಸಿದಂತೆ ಚೆನ್ನಬಸಪ್ಪ ಅಂಜನಪ್ಪ ಸಿದ್ದಾಪುರ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲ್ಲ್ಲಿ ಕಾರಟಗಿ ಠಾಣೆಯಲ್ಲಿ ಒಟ್ಟು ೬೫ ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆಯವರೆಗೂ ಸುಮಾರು ೧೭ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.ಚೆನ್ನಮ್ಮ ಹೆಸರು ಬಳಕೆ ಸಲ್ಲ:
ಘಟನೆ ಹಿನ್ನೆಲೆಯಲ್ಲಿ ಆರೋಪಿ ಯುವಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷ ಬೂದಿಗಿರಿಯಪ್ಪ ಮತ್ತು ಕಾರ್ಯದರ್ಶಿ ಸೋಮನಾಥ ಹೆಬ್ಬಡದ ಈ ಕೃತ್ಯ ಖಂಡಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ರಾಣಿಯ ಮೂರ್ತಿ ಮೇಲೆ ದಾಳಿ ಎನ್ನುವುದು ಸುಳ್ಳು ಸುದ್ದಿ. ದೌರ್ಜನ್ಯ ಮತ್ತು ಕೊಲೆ ಯತ್ನವನ್ನು ಮರೆಮಾಚಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅಂಥವರ ವಿರುದ್ಧ ಕ್ರಮಕ್ಕೆ ಸಮಾಜ ಒತ್ತಾಯಿಸಿತು. ಹಾಲಸಮುದ್ರ ಗ್ರಾಮದಲ್ಲಿ ಗೌರಿಹುಣ್ಣಿಮೆ ದಿನ ನಾಯಕ ಸಮಾಜದವರು ಪ್ರತಿ ವರ್ಷದಂತೆ ಈಶ್ವರ ದೇವಸ್ಥಾನದಲ್ಲಿ ಗೌರಿ ಪ್ರತಿಷ್ಠಾಪಿಸುತ್ತಾರೆ. ಆದರೆ, ಇದನ್ನು ವಿರೋಧಿಸಿ ಕೆಲವರು ಗೌರಿ ಮೂರ್ತಿಯನ್ನು ತೆರವುಗೊಳಿಸಿ ಪಕ್ಕದ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದರು. ಇದನ್ನು ಸಹಿಸದೆ ಕೆಲ ಗುಂಪು ಕಾರಪುಡಿ, ಕಟ್ಟಿಗೆ ಬಡಿಗೆಗಳಿಂದ ಗುಂಪುಕಟ್ಟಿಕೊಂಡು ವಾಲ್ಮೀಕಿ ಸಮಾಜದವರ ಮೇಲೆ ದಾಳಿ ನಡೆಸಿದ್ದಾರೆ ಎಂದರು.
ಪ್ರತಿ ದೂರು:
ಮತ್ತೊಂದೆಡೆ ಗ್ರಾಮದ ಪಾರ್ವತಮ್ಮ ಅಮರೇಶಪ್ಪ 65 ಜನರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ದೂರು ಪಡೆದ ಕಾರಟಗಿ ಪೊಲೀಸರು 65 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನು ಯಾರನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.