ಶುದ್ಧ ಆಮ್ಲಜನಕಕ್ಕೆ ಹೆಚ್ಚು ಗಿಡಗಳನ್ನು ಬೆಳೆಸಿ: ನಾಗರಾಜ್ ಬೈರಿ

KannadaprabhaNewsNetwork |  
Published : May 29, 2025, 12:05 AM IST
28ಕೆಎಂಎನ್ ಡಿ11 | Kannada Prabha

ಸಾರಾಂಶ

ಕ್ಲಬ್ ಸದಸ್ಯರು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನಿಮ್ಮಿಂದ ಆಗಬಹುದಾದ ಸೇವಾ ಕಾರ್ಯಗಳನ್ನು ಮಾಡುವತ್ತ ಗಮನ ಹರಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಆರೋಗ್ಯವಂತ ಜೀವನಕ್ಕಾಗಿ ಉತ್ತಮ ಆಮ್ಲಜನಕ ದೊರಕಬೇಕಾದರೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು, ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಅಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ. ಬೈರಿ ತಿಳಿಸಿದರು.

ಸಮೀಪದ ಹಾಡ್ಲಿ- ಮೇಗಳಾಪುರ ವೃತ್ತದ ಬಳಿ ಮಳವಳ್ಳಿ ಹಾಡ್ಲಿ ಅಲಯನ್ಸ್ ಕ್ಲಬ್ ನ ಪುಟ್ಟಬಸವೇಗೌಡ ನೇತೃತ್ವದ ನೂತನ ತಂಡದ ಪದವಿ ಸ್ವೀಕಾರ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ಲಬ್ ನ ಪ್ರತಿ ಸದಸ್ಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಆಯೋಜಿಸುವ ಮೂಲಕ ನಿರಂತರವಾಗಿ ತೊಡಬೇಕು ಎಂದರು.

2008ರಲ್ಲಿ ಆರಂಭವಾದ ಅಲಯನ್ಸ್ 2023 ರಿಂದ ಮಂಡ್ಯದಲ್ಲಿ 36 ಸಂಸ್ಥೆಗಳು ಕಾರ್ಯಾರಂಭ ಮಾಡಿವೆ. ಜಾಗತಿಕವಾಗಿ 23 ದೇಶಗಳಲ್ಲಿ ಅಲಯನ್ಸ್ ಸಂಸ್ಥೆ ವಿವಿಧ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು. ಕ್ಲಬ್ ಸದಸ್ಯರು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನಿಮ್ಮಿಂದ ಆಗಬಹುದಾದ ಸೇವಾ ಕಾರ್ಯಗಳನ್ನು ಮಾಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಿ ಮಾರಣಾಂತಿಕ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸುವ ಕೆಲಸ ಮಾಡಿ

ಪದಾಧಿಕಾರಿಗಳು ಕ್ಲಬ್ ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಪಾರದರ್ಶಕವಾಗಿರಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸದಸ್ಯರನ್ನಾಗಿ ನೋಂದಾಯಿಸಿ ಸೇವಾ ಚಟುವಟಿಕೆಗೆ ತೊಡಗಿಸುವಂತೆ ಪ್ರೇರೇಪಿಸಬೇಕೆಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಎಚ್.ಕೆ.ಪುಟ್ಟಬಸವೇಗೌಡ ಮಾತನಾಡಿ, ಅಲಯನ್ಸ್ ಒಂದು ದೇಶಿ ಸೇವಾ ಸಂಸ್ಥೆ. 2000 ಕ್ಕೂ ಹೆಚ್ಚು ಸಂಸ್ಥೆಗಳು ವಿಶ್ವದಾದ್ಯಂತ ಕೆಲಸ ಮಾಡುತ್ತಿವೆ. 60 ಸಾವಿರ ಸದಸ್ಯರು ವಿವಿಧ ಬಗೆಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಸಂಸ್ಥೆಗಳ ಅಗತ್ಯತೆ ಇದೆ. ಎಲ್ಲಾ ಸದಸ್ಯರು ಪ್ರತಿ ವರ್ಷ ಪದಾಧಿಕಾರಿಗಳಾಗುವ ಸದಾವಕಾಶ ಇದೆ ಎಂದು ತಿಳಿಸಿದರು.

ಈ ವೇಳೆ ಅಲಯನ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಅಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಕೆ.ಆರ್.ಶಶಿಧರ್ ಈಚಗೆರೆ, ಕೆ.ಎಸ್.ಚಂದ್ರಶೇಖರ್, ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಕೆ.ಪುಟ್ಟಬಸವೇಗೌಡ, ಕಾರ್ಯದರ್ಶಿ ಎಂ.ಚಿಕ್ಕಮಾಯಪ್ಪ, ಖಜಾಂಚಿ ಎಚ್.ಎಸ್.ಚಂದ್ರಶೇಖರ್ ಸೇರಿದಂತೆ ಹಲವಾರು ಸದಸ್ಯರು ಭಾಗವಹಿಸಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ