ಜಿಎಸ್‌ಟಿ ವಿನಾಯ್ತಿ, ಜನರಲ್ಲಿ ಕೊಳ್ಳುವಿಕೆ ಅಧಿಕ

KannadaprabhaNewsNetwork |  
Published : Sep 23, 2025, 01:03 AM IST
22ಎಎನ್‌ಟಿ1ಇಪಿ: ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ಜನರನಲ್ಲಿ ಕೊಳ್ಳುವಿಕೆಯ ಶಕ್ತಿ ಹೆಚ್ಚಾಗಿದೆ. ನಾನು ಸಂಸದ ಆದ ಮಲೆ ಜಿಲ್ಲೆಗೆ 20 ಸಾವಿರ ಕೋಟಿ ರು. ಅನುದಾನ ತಂದಿದ್ದೇನೆ. ಹಿಂದೆ ಸಂಸದರಾದವರು ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿಸಿದರೇ ವಿನಾ ವಾಪಾಸು ತರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಆನವಟ್ಟಿ: ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ಜನರನಲ್ಲಿ ಕೊಳ್ಳುವಿಕೆಯ ಶಕ್ತಿ ಹೆಚ್ಚಾಗಿದೆ. ನಾನು ಸಂಸದ ಆದ ಮಲೆ ಜಿಲ್ಲೆಗೆ 20 ಸಾವಿರ ಕೋಟಿ ರು. ಅನುದಾನ ತಂದಿದ್ದೇನೆ. ಹಿಂದೆ ಸಂಸದರಾದವರು ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿಸಿದರೇ ವಿನಾ ವಾಪಾಸು ತರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ವಿನಾಯತಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಡಕೆ ತಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕಗ ಅಂಶಗಳಿವೆ ಎಂಬ ಸುಳ್ಳು ಸುದ್ದಿಯನ್ನು ವಿದೇಶಿಯರು ಹರಡಿ, ನಮ್ಮ ದೇಶದಿಂದ ರಪ್ತಾಗುತ್ತಿದ್ದ ಅಡಿಕೆ ತಟ್ಟೆಗಳನ್ನು ವಾಪಾಸು ಕಳುಹಿಸುವ ಮೂಲಕ ರೈತರ ಆದಾಯಕ್ಕೆ ನಷ್ಟು ಮಾಡುವ ಉದ್ದೇಶವನ್ನು ವಿದೇಶಗಳು ಹೊದಿವೆ ಎಂದು ಹೇಳಿದರು.

ಕೃಷಿ ವಲಯದಿಂದ ಶೇ.73 ಉದ್ಯೋಗ ಸೃಷ್ಟಿಯಾಗಿದೆ. ಸರ್ಕಾರಿ ನೌಕರಿ ಶೇ.3 ಮಾತ್ರ ಇದೆ. ಹಾಗಾಗಿ ಈ ಹಿಂದೆ ಅಡಕೆಯಿಂದ ಕ್ಯಾನ್ಸ್‌ರ್‌ ಬರುತ್ತದೆ ಎಂಬ ತಪ್ಪು ವರದಿಗಳು ಕೃಷಿಕರಿಗೆ ಹಿನ್ನಡೆ ಉಂಟುಮಾಡಿತ್ತು. ಹಾಗಾಗಿ ಅಡಕೆ ಹಾಗೂ ಅದರ ಉತ್ಪನ್ನಗಳಲ್ಲಿ ಯಾವುದೆ ಕ್ಯಾನ್ಸರ್‌ ಅಂಶಗಳಿಲ್ಲ ಎಂಬ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ, ಅಡಕೆ ಬೆಳೆಗಾರರನ್ನು ರಕ್ಷಣೆ ಮಾಡುವ ಮೂಲಕ ಆರ್ಥಕ ಶಕ್ತಿ ತುಂಬುವ ಕೆಲಸಗಳು ಆಗಬೇಕಾಗಿದೆ ಎಂದರು.

ಶಿವಮೊಗ್ಗದಿಂದ ಮಂಗಳೂರಿಗೆ ರೈಲ್ವೆ ಮಾರ್ಗ ಮಾಡಲು ಎರಡು ಮಾರ್ಗವನ್ನು ಗುರುತಿಸಿದ್ದೇವೆ. ಯಾವುದು ಅನುಕೂಲಕರವೋ ಅದನ್ನು ಮಾಡಲಾಗುವುದು. ಶಿವಮೊಗ್ಗ ಏರ್‌ಪೋರ್ಟ್‌ ಬಳಿ ವಿಶ್ವವಿದ್ಯಾಲಯ ತೆರೆಯುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಬಿಜೆಪಿ ಎಣ್ಣೆಕೊಪ್ಪ ಶಕ್ತಿ ಕೇಂದ್ರದ ಕಾರ್ಯದರ್ಶಿ ಹೊನ್ನಪ್ಪ, ಸಾಗರ ತಾಳಗುಪ್ಪದಿಂದ ಸೊರಬ ಆನವಟ್ಟಿ ಮಾರ್ಗವಾಗಿ ಹಾವೇರಿಗೆ ರೈಲ್ವೆ ಮಾರ್ಗ ಕಲ್ಪಿಸಿ ಎಂದು ಮನವಿ ಮಾಡಿದರು.

ಉದ್ಯಮಿ ರಾಜು ಎಂ. ತಲ್ಲೂರು, ಮುಖಂಡರಾದ ಪ್ರಕಾಶ್‌ ಅಗಸನಹಳ್ಳಿ, ಎ.ಎಲ್‌ ಅರವಿಂದ್‌, ಆರ್‌.ಎಸ್‌ ಗೋಪಾಲ ಕೃಷ್ಣಾ, ಸಂಜಯ್‌ ಡೋಂಗ್ರೆ ಇದ್ದರು. 22ಎಎನ್‌ಟಿ1ಇಪಿ: ಆನವಟ್ಟಿಯ ವಾಸವಿ ಕಲ್ಯಾಣ ಮಂಟಪದಲ್ಲಿ ವರ್ತಕರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ