ಪಟಾಕಿ ಸಿಡಿಸಿ ಜಿಎಸ್‌ಟಿ ಇಳಿಕೆಗೆ ಸ್ವಾಗತ

KannadaprabhaNewsNetwork |  
Published : Sep 23, 2025, 01:04 AM IST
ಪೊಟೊ ಶಿರ್ಷ 22ಎಚ್ ಕೆ ಅರ್ 01 | Kannada Prabha

ಸಾರಾಂಶ

ಜಿಎಸ್‌ಟಿ ತೆರಿಗೆ ಬಹಳ ದೊಡ್ಡ ಪ್ರಮಾಣದ ಇಳಿಕೆಯಿಂದ ಬಡವರು, ಮಧ್ಯಮ ವರ್ಗದವರಿಗೆ ವಿಶೇಷವಾಗಿ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಹಿರೇಕೆರೂರು:ಜಿಎಸ್‌ಟಿ ತೆರಿಗೆ ಬಹಳ ದೊಡ್ಡ ಪ್ರಮಾಣದ ಇಳಿಕೆಯಿಂದ ಬಡವರು, ಮಧ್ಯಮ ವರ್ಗದವರಿಗೆ ವಿಶೇಷವಾಗಿ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿ ಮಂಡಲದ ವತ್ತಿಯಿಂದ ಕೇಂದ್ರ ಸರ್ಕಾರದಿಂದ ಜಿಎಸ್‌ಟಿ (ತೆರಿಗೆ ಇಳಿಕೆ) ಜಾರಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವದಲ್ಲಿ ಮಾತನಾಡಿದರು.ನಮ್ಮ ಕಾರ್ಯಕರ್ತರು ಪ್ರತಿ ಒಬ್ಬರಿಗೂ ತಿಳಿಸಬೇಕು, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜಿಎಸ್‌ಟಿ ತೆರಿಗೆ ಇಳಿಸಿದ್ದರಿಂದ ಅನೇಕ ವಿವಿಧ ಬೆಲೆಗಳು ಇಳಿಕೆಯಾಗಲಿವೆ. ಸಿದ್ದರಾಮಯ್ಯನವರ ಎರಡು ವರ್ಷ ಏಳು ತಿಂಗಳು ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜಾತಿಗಣತಿ ಇಂದಿನಿಂದ ಪ್ರಾರಂಭವಾಗಿದೆ. ಕಾಂಗ್ರೆಸ್ ಸರ್ಕಾರದ ಹುನ್ನಾರ, ಸಿದ್ದರಾಮಯ್ಯನವರ ಹುನ್ನಾರ ಸಂಪೂರ್ಣವಾಗಿ ಹಿಂದೂ ಧರ್ಮವನ್ನು ಒಡೆಯುವಂತೆ ಕೆಲಸ ಮಾಡುತ್ತಿದೆ. ಜನರ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಲಿಕ್ಕೆ ಈಗ ಜಾತಿ ಗಣತಿ ಅಂತಾರೆ. ಜನರನ್ನು ದಾರಿ ತಪ್ಪಿಸಲಿಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂಥಿಮಠ, ರವಿಶಂಕರ ಬಾಳಿಕಾಯಿ, ಪ್ರಕಾಶ ಜಿ.ಪಿ. ಶಿವಕುಮಾರ ತಿಪ್ಪಶೆಟ್ಟಿ, ನಿಂಗಾಚಾರಿ ಮಾಯಾಚಾರಿ, ಜಗದೀಶ ದೊಡ್ಡಗೌಡ್ರ, ಗುರುಶಾಂತ ಎತ್ತಿನಹಳ್ಳಿ, ರಮೇಶ ತೋರಣಗಟ್ಟಿ, ಬಸಮ್ಮ ಅಬಲೂರ, ಗೀತಾ ದಂಡಗೀಹಳ್ಳಿ, ಲತಾ ಬಣಕಾರ, ರುದ್ರೇಶ ಬೇತೂರ, ಉಮೇಶ ಬಣಕಾರ, ಬಸವರಾಜ ಭರಮಗೌಡ್ರ, ಹೊನ್ನಪ್ಪ ಸಾಲಿ, ಜೀತೇಂದ್ರ ಅಂಗಡಿ, ಬಸವರಾಜ ಅರಕೇರಿ, ಮಂಜು ಹೊಸಗೌಡ್ರ, ರಾಘು ಚಿಂದಿ, ಕುಮಾರ ಮರಿಗೌಡ್ರ,ರಾಮುನಗೌಡ ನಿಂಗನಗೌಡ್ರ, ಪುನೀತ ಬಣಕಾರ, ರಾಜು ದುಪದಳ್ಳಿ, ದುರಗೇಶ ತಿರಕಪ್ಪನವರ, ಮಹ್ಮದಣ್ಣ ವಡಿನಕಟ್ಟಿ, ನಾಗರಾಜ ಮಾಳೂರು ಹಾಗೂ ಮಂಡಲದ ವಿವಿಧ ಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಪಕ್ಷದ ಹಿರಿಯ ಮುಖಂಡರುಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!