ಜಿಎಸ್‌ಟಿ ಸುಧಾರಣೆಯಿಂದ ಎಲ್ಲ ವರ್ಗದ ಜನರಿಗೆ ಅನುಕೂಲ

KannadaprabhaNewsNetwork |  
Published : Oct 15, 2025, 02:06 AM IST
ಜಿಎಸ್‌ಟಿ ಸುಧಾರಣೆಯಿಂದ ಎಲ್ಲವರ್ಗದ ಜನರಿಗೂಅನುಕೂಲ : ಮೋಹನ್ ವಿಶ್ವಾಸ್ | Kannada Prabha

ಸಾರಾಂಶ

ಜಿಎಸ್‌ಟಿ ಕಡಿತದಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಎಸ್‌ಟಿ ಕಡಿತದಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವಾಸ್ ಹೇಳಿದರು.

ನಗರದ ವರ್ತಕರ ಭವನದಲ್ಲಿ ಬಿಜೆಪಿಯಿಂದ ನಡೆದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಮಾತನಾಡಿ, ಸೆ. 22 ರಂದು ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೃಢ ನಿರ್ಧಾರದ ಪರಿಣಾಮವಾಗಿ ದೇಶದ ಬಡಜನರು, ಮಧ್ಯಮ ವರ್ಗ, ಕೈಗಾರಿಕಾ ವಲಯ, ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಿದೆ ಎಂದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಹಾರ ಪದಾರ್ಥಗಳ ಮೇಲೆ ಶೇ 27 ರಷ್ಟು ತೆರಿಗೆ ಇತ್ತು. ತಲೆಗೆ ಹಾಕುವ ಕೊಬ್ಬರಿ ಎಣ್ಣೆ ಮೇಲೆ 27 ರಷ್ಟು ತೆರಿಗೆ ಇತ್ತು. ಅದನ್ನು ನರೇಂದ್ರ ಮೋದಿ ಅವರು ಶೇ. 5ಕ್ಕೆ ಇಳಿಸಿದ್ದಾರೆ. ಬಡವರ, ಮಧ್ಯಮ ವರ್ಗದವರ ದಿನನಿತ್ಯದ ವಸ್ತುಗಳ ಮೇಲೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಹೇರಿದ ತೆರಿಗೆ ಬಾರವನ್ನು ನರೇಂದ್ರ ಮೋದಿ ಅವರು ಕಡಿಮೆ ಮಾಡಿದ್ದಾರೆ ಎಂದರು.

ಒಂದು ಅಂದಾಜಿನ ಪ್ರಕಾರ ಜಿಎಸ್‌ಟಿ ಸುಧಾರಣೆಯಿಂದ ದೇಶದಲ್ಲಿ ₹2 ಲಕ್ಷ ಕೋಟಿ ಅಧಿಕ ಹಣ ಉಳಿತಾಯ ಆಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಜನರ ಕೈಯಲ್ಲಿ ತಿಂಗಳಲ್ಲಿ 2, 3, 4 ಸಾವಿರ ಹಣ ಉಳಿತಾಯ ಆಗುವ ದೃಢ ನಿರ್ಧಾರವನ್ನು ಮೋದಿಯವರು ಮಾಡಿದ್ದಾರೆ. ಯಾವ ಜಾಗತಿಕ ಮಟ್ಟದಲ್ಲಿ ಭಾರತದ ಮಾರುಕಟ್ಟೆಯನ್ನು ಒಂದು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲೂ ಸಹ ಬದಲಾವಣೆ ತಂದಿದ್ದಾರೆ. ರೈತರು ಬಳಸುವ ಟ್ರಾಕ್ಟರ್, ಬಿಡಿಭಾಗಗಳು, ಡ್ರಿಪ್ ಇರಿಗೇಶನ್, ಆರ್ಗಾನಿಕ್ ಸೀಡ್ಸ್‌ ಮೇಲೆ ಇದ್ದ ತೆರಿಕೆ ಕಡಿಮೆ ಮಾಡಿದ್ದಾರೆ, ಔಷಧಿಗಳ ಬೆಲೆಯನ್ನು ಸೊನ್ನೆಗೆ ಇಳಿಸಲಾಗಿದೆ. ಜಿಎಸ್‌ಟಿ ಸುಧಾರಣೆಯಿಂದ ಎಲ್ಲವರ್ಗದ ಜನರಿಗೆ ಅನುಕೂಲ ಆಗಿದ್ದು, ದೇಶದ ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗಿದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಗರಸಭಾ ಅಧ್ಯಕ್ಷ ಸುರೇಶ್, ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಶಂಕರ್, ಜಿಲ್ಲಾ ವಾಣಿಜ್ಯಮತ್ತು ಕೈಗಾರಿಕೋದ್ಯಮಿ ಸಂಘ ಅಧ್ಯಕ್ಷ ಪ್ರಭಾಕರ್, ಲಾರಿ ಅಯೋಯೇಷನ್ ಅಧ್ಯಕ್ಷ ಸುರೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮಾಜಿ ಚೂಡಾಧ್ಯಕ್ಷರಾದ ಕುಲಗಾಣಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಮಂಡಲ ಅಧ್ಯಕ್ಷರಾದ ಕಾಡಹಳ್ಳಿ ಕುಮಾರ್, ನಾಗೇಶ್, ಚೆನ್ನನಂಜಯ್ಯಹುಂಡಿ ಮಹದೇವಪ್ರಸಾದ್ ಇತರರು ಭಾಗವಹಿಸಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ