ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 53.5 ಲಕ್ಷ ಕೋಟಿ ರು.ಗಳ 9ನೇ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಇನ್ನೊಂದು ಧೃಡ ಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಉಡುಪಿ: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 53.5 ಲಕ್ಷ ಕೋಟಿ ರು.ಗಳ 9ನೇ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಇನ್ನೊಂದು ಧೃಡ ಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.ಅವರು ಸೋಮವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಬಜೆಟ್ 2026ರ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜಗತ್ತೇ ಆರ್ಥಿಕ ಅನಿಶ್ಚಿತತೆಯಲ್ಲಿರುವಾಗ ದೇಶದ ಜನತೆಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬಿರುವ ಸ್ವಾಗತಾರ್ಹ ಬಜೆಟ್ ಇದಾಗಿದೆ. ದೀರ್ಘಕಾಲೀನ ಆರ್ಥಿಕ ಗುರಿಯನ್ನು ಮುಟ್ಟಲು ಅಗತ್ಯವಿರುವ ಅಲ್ಪಕಾಲೀನ ಯೋಜನೆಗಳ ಸಮದೃಷ್ಟಿಯ ಸಂತುಲಿತ ಬಜೆಟ್ ಎಂದು ಬಣ್ಣಿಸಿದ ಅವರು, ಈ ಬಜೆಟ್ ತುಷ್ಟೀಕರಣದ ಮಾನಸಿಕತೆಯಿಂದ ಹೊರ ಬಂದು, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ತತ್ವಕ್ಕೆ ಅಗತ್ಯವಿರುವ ಸಂಪನ್ಮೂಲ, ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸಲು ಯೋಜಿಸಿರುವ ಬಜೆಟ್ ಎಂದರು.ಅತೀ ವೇಗದ 7 ರೈಲ್ವೆ ಕಾರಿಡಾರ್‌ಗಳ ಮೂಲಕ ವೇಗದ ಆರ್ಥಿಕ ಪ್ರಗತಿಯ ಗುರಿ, ರಕ್ಷಣಾ ಕ್ಷೇತ್ರಕ್ಕೆ ದಾಖಲೆಯ 7.84 ಲಕ್ಷ ಕೋಟಿ ರು. ಅನುದಾನದ ಮೂಲಕ ದೇಶದ ಭದ್ರತೆಯ ದೂರಾಲೋಚನೆ, ಪ್ರಾದೇಶಿಕ ಮೆಡಿಕಲ್ ಹಬ್ ಗಳ ಮೂಲಕ ಮೆಡಿಕಲ್, ಪ್ರವಾಸೋದ್ಯಮ, ನಿಮ್ಹಾನ್ಸ್ ಆಸ್ಪತ್ರೆಗಳು, ಮೈನಿಂಗ್ ಕಾರಿಡಾರ್, ಬಯೋ ಫಾರ್ಮ, ಎ.ಐ. ಮಿಶನ್ ಮೂಲಕ ಎ.ಐ. ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇನ್ನಿತರ ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಆದ್ಯತೆ ಮೂಲಕ ಸರ್ವಸ್ಪರ್ಷಿಯಾಗಿದೆ ಎಂದವರು ವಿಶ್ಲೇಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.