ಬಡ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ ಗ್ಯಾರಂಟಿ ಯೋಜನೆ: ಸಚಿವ ಆರ್.ಬಿ. ತಿಮ್ಮಾಪೂರ

KannadaprabhaNewsNetwork |  
Published : Oct 20, 2025, 01:04 AM IST
ರನ್ನ ಬೆಳಗಲಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ನೊಂದ ಜನಕ್ಕೆ ನೆರವು ನೀಡಿ, ಬಡ ಕುಟುಂಬಗಳ ಅಭಿವೃದ್ಧಿಗೆ ಶಕ್ತಿ ನೀಡಿದ ಗ್ಯಾರಂಟಿ ಯೋಜನೆ ನಾಡಿನ ಅಸಂಖ್ಯಾತ ಬಡ ಕುಟುಂಬಗಳಿಗೆ ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನೊಂದ ಜನಕ್ಕೆ ನೆರವು ನೀಡಿ, ಬಡ ಕುಟುಂಬಗಳ ಅಭಿವೃದ್ಧಿಗೆ ಶಕ್ತಿ ನೀಡಿದ ಗ್ಯಾರಂಟಿ ಯೋಜನೆ ನಾಡಿನ ಅಸಂಖ್ಯಾತ ಬಡ ಕುಟುಂಬಗಳಿಗೆ ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ರನ್ನ ಬೆಳಗಲಿಯ ಶ್ರೀ ಬಂದಲಕ್ಷ್ಮೀ ದೇವಸ್ಥಾನ ಆವರಣದಲ್ಲಿರುವ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಸಭಾಭವನದಲ್ಲಿ ಶನಿವಾರ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಆಡಳಿತ ಬಾಗಲಕೋಟೆ, ತಾಲೂಕು ಆಡಳಿತ ಮುಧೋಳ ಮತ್ತು ಪಟ್ಟಣ ಪಂಚಾಯಿತಿ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿ, ಅನ್ನಭಾಗ್ಯದಿಂದ ಬಡವರ ಹಸಿವು ನೀಗಿದೆ. ಮುಂದಿನ ದಿನಗಳಲ್ಲಿ ಅಕ್ಕಿಯ ಜೊತೆಗೆ ದಿನಬಳಕೆಯ ವಸ್ತುಗಳನ್ನು ಕೊಡುವ ಸಂಕಲ್ಪವಿದೆ. ಗೃಹ ಜ್ಯೋತಿಯಿಂದ ವಿದ್ಯಾರ್ಥಿಗಳ ಓದಿಗೆ ಬೆಳಕು ನೀಡಿ, ಯುವ ನಿಧಿಯಿಂದ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜಾಗಲು ಪ್ರೋತ್ಸಾಹ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಅಸಂಖ್ಯಾತ ಮಹಿಳೆಯರ ದಿನನಿತ್ಯದ ಔದ್ಯೋಗಿಕ ಚಟುವಟಿಕೆಗೆ ಬಲ ನೀಡಿದೆ. ಗೃಹಲಕ್ಷ್ಮೀ ಯಿಂದ ಎಲ್ಲಾ ತಾಯಂದಿರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಕುಟುಂಬದ ನಿರ್ವಹಣೆ ಮಾಡುತ್ತ ಸಾವಲಂಬಿ ಜೀವನಕ್ಕೆ ಬದ್ಧರಾಗಿದ್ದಾರೆ.

ಈ ಐದು ಗ್ಯಾರಂಟಿ ಯೋಜನೆಗಳಿಂದ ಮೂಲಭೂತ ಅವಶ್ಯಕತೆಗಳನ್ನು ಎಲ್ಲಾ ಜನತೆ ಪೂರೈಸಿಕೊಳ್ಳುವಂತಾಗಿದೆ ಎಂದು ಹೇಳಿದರು. ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಮಹೇಶ ಬಿಳೂರ ಮಾತನಾಡಿ, ನಿಮ್ಮ ಮನೆಯ ಬಾಗಿಲಿಗೆ ನಮ್ಮ ಸರ್ಕಾರದ ಕಲ್ಯಾಣ ಕಾರ್ಯಗಳೇ ಗ್ಯಾರಂಟಿ, ಯೋಜನೆ ಭಾಗ್ಯ ನೀಡಿದೆ. ಪ್ರತಿ ವರ್ಷ ಈ 5 ಗ್ಯಾರಂಟಿಗಳಿಗಾಗಿ ಗಣ ಸರ್ಕಾರ ₹56 ಸಾವಿರ ಕೋಟಿ ಮೊತ್ತ ಒದಗಿಸುತ್ತಿದೆ. ಇದರ ಶಕ್ತಿ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಹೇಳಿದರು.

ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಮಹಾಂತೇಶ ಮಾಚಕನೂರ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಉದಯ ಸರವಾಡ, ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರು, ಯಮನಪ್ಪ ದೊಡಮನಿ, ನೀಲಕಂಠ ಸೈದಾಪುರ, ಮುತ್ತಪ್ಪ ಸಣ್ಣಟ್ಟಿ, ಮುಬಾರಕ ಅತ್ತಾರ, ಮುತ್ತಪ್ಪ ನಾಯಕ, ಮಲ್ಲಪ್ಪ ಮಲಾವಡಿ, ಸದಾಶಿವ ಹಿಡಕಲ್ಲ, ಸಿದ್ದು ಮಾಳಿ,ಯಲ್ಲಪ್ಪ ದೋಬಸಿ,ಶೋಭಾ ಜಿಗಜೀನ್ನಿ,ರಮೇಶ ಹೀರೊಳ್ಳಿ, ಹೊಳೆಬಸು ತೇಲಿ,ಶಿವಪ್ಪ ಡೊಳ್ಳಿ,ರಾಜ್ಮಾ ಬೇಪಾರಿ, ಸವಿತಾ ಚವಲಿ, ಮಹಾಲಿಂಗಪ್ಪ ಕೊಣ್ಣೂರ, ಶಿವಪ್ಪ ಮಂಟೂರ, ಚನ್ನಪ್ಪ ಜಾಲಿಕಟ್ಟಿ, ಹಣಮಂತ ಹೊರಟ್ಟಿ, ಅಶೋಕ ಪಾಟೀಲ, ಅಧಿಕಾರಿಗಳಾದ ವಿ.ಎನ್. ಬಂಗಾರಪ್ಪನವರ ಸಿಡಿಪಿ, ವಿ.ಎನ್. ಮರಕಟ್ಟಿ ಎಇಇ ಹೆಸ್ಕಾಂ, ಬಿ.ಡಿ. ದೇಶಪಾಂಡೆ ತಾಲೂಕು ಆಹಾರ ನಿರೀಕ್ಷಕರು, ಗುರುಪಾದಯ್ಯ ಹಿರೇಮಠ ಡಿಎಸ್ ಡಿಒ, ಕೆಎಸ್ಆರ್‌ಟಿಸಿ ಘಟಕ ವ್ಯವಸ್ಥಾಪಕ ವಿದ್ಯಾ ನಾಯಕ, ರಾಘವೇಂದ್ರ ನೀಲಣ್ಣವರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿ: ಮಾಜಿ ಶಾಸಕ ಸುಧಾಕರ್ ಲಾಲ್
ದುಶ್ಚಟ ಬಿಟ್ಟರೆ ವಿವಾಹಕ್ಕೆ ಕನ್ಯೆಯರು ಸಿಕ್ಕಾರು: ಶಾಂತವೀರ ಶ್ರೀ