ಗ್ಯಾರಂಟಿ ಯೋಜನೆಗಳು ಮಹಿಳೆಯರ ನಿತ್ಯದ ಬದುಕಿಗೆ ಸಹಕಾರಿ

KannadaprabhaNewsNetwork |  
Published : Mar 10, 2026, 03:00 AM IST
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 5 ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಿಟ್ಟೂರು ಕರಿಬಸಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರ ದಿನನಿತ್ಯದ ಬದುಕಿಗೆ ತುಂಬ ಸಹಕಾರಿಯಾಗಿವೆ

ಸಿರುಗುಪ್ಪ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರ ದಿನನಿತ್ಯದ ಬದುಕಿಗೆ ತುಂಬ ಸಹಕಾರಿಯಾಗಿವೆ ಎಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎನ್. ಕರಿಬಸಪ್ಪ ಹೇಳಿದರು.

ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಐದು ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 5 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ ಯೋಜನೆ, ಯುವ ನಿಧಿ, ಗೃಹಜೋತಿ, ಗೃಹ ಭಾಗ್ಯ, ಮೂಲಕ ರಾಜ್ಯದ ಪ್ರತಿಯೊಬ್ಬ ಕಡುಬಡವರಿಗೆ,ಆರ್ಥಿಕವಾಗಿ ಹಿಂದುಳಿದ ದೀನದಲಿತ ಮಹಿಳೆಯರಿಗೆ ಅವರ ಬದುಕಿನ ಜೀವನಕ್ಕೆ ಆಸರೆಯಾಗುವಂತೆ ಉಚಿತ ಸೌಲಭ್ಯಗಳನ್ನು ನೀಡಿ ಮಹಿಳೆಯರಿಗೆ, ವೃದ್ಧರಿಗೆ, ಹಿರಿಯರಿಗೆ, ಅನುಕೂಲ ಕಲ್ಪಿಸಿದೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಐದು ಗ್ಯಾರಂಟ ಯೋಜನೆಗಳ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎಸ್ಎಂ ನಾಗರಾಜಸ್ವಾಮಿ ಮಾತನಾಡಿ, ಪ್ರತಿಯೊಬ್ಬ ತಾಯಂದಿರು, 5 ಪಂಚ ಗ್ಯಾರೆಂಟಿಗಳ ಉಚಿತ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರಿಗೆ ಲಿಂಗ ತಾರತಮ್ಯ ಭೇದವಿಲ್ಲದೆ ಎಲ್ಲರೂ ಸಮಾನತೆಯಿಂದ ಗೌರವಿಸಬೇಕು. ಮಹಿಳೆಯರ ನಾನಾ ಹಕ್ಕುಗಳಲ್ಲಿ ಕೈಜೋಡಿಸಬೇಕು. ಕರ್ನಾಟಕ ಸರ್ಕಾರದ ಅತ್ಯುತ್ತಮ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೆ ತಲುಪುವ ಕೆಲಸಕ್ಕೆ ಮಹಿಳೆಯರು ಕೈಜೋಡಿಸಬೇಕು. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ನೆಮ್ಮದಿಯಿಂದ ಜೀವಿಸಬೇಕು ಎಂದು ತಿಳಿಸಿದರು.

ಸಿಡಿಪಿಒ ಪ್ರದೀಪ್ ಮಾತನಾಡಿದರು. ಫಲಾನುಭವಿ ಮಹಿಳೆ ವರಲಕ್ಷ್ಮಿ ಮಾತನಾಡಿ, ನಾನು ಕಡಿಮೆ ಸಂಬಳದೊಂದಿಗೆ ಜೀವನ ಸಾಗಿಸುತ್ತಿದ್ದು ಸರ್ಕಾರದ ಉಚಿತ ಬಸ್ ವ್ಯವಸ್ಥೆ ನನಗೆ ತುಂಬಾ ಅನುಕೂಲಕಾರಿಯಾಗಿದೆ. ನಮ್ಮ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ, ನಮ್ಮ ಮಕ್ಕಳಿಗೆ ಯುವನಿಧಿ ಯೋಜನೆ, ತುಂಬ ಸಹಕಾರಿಯಾಗಿದೆ ಎಂದರು. ಇನ್ನೊಬ್ಬ ಫಲಾನುಭವಿ ಮಹಿಳೆ 31ನೇ ವಾರ್ಡಿನ ಶಾರದ ಮಾತನಾಡಿ, ಗೃಹಲಕ್ಷ್ಮಿ ಹಣದಿಂದ ನಮ್ಮ ಅಜ್ಜಿ ಕಾಯಿಲೆ ಇಂದ ಇರುವುದರಿಂದ ಆಕೆಗೆ ಔಷದ ತರಲು ಈ ಗೃಹಲಕ್ಷ್ಮಿ ಹಣ ತುಂಬಾ ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ನಾಗರಾಳ ಚನ್ನಬಸವ, ತೆಕ್ಕಲಕೋಟೆ ಅಗ್ರಹಾರ ಗೋವಿಂದ, ಹಳೆಕೋಟೆ ವೀರೇಶ್ ನಾಯಕ್, ತೆಕ್ಕಲಕೋಟೆ ಶ್ಯಾಮ್ ಸುಂದರ್, ಕೆಇಬಿ ಜೆಸ್ಕಾಂ ಅಧಿಕಾರಿಗಳು ಕೆಎಸ್ಆರ್ಟಿಸಿ ಅಧಿಕಾರಿಗಳು,ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

120 ಅಡಿ ರಾಜಕಾಲುವೆಗೆ 15, 18 ಅಡಿಗಳ ಚರಂಡಿ: ವಿರೋಧ
ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಾತಾ ಪಿತೃ ವಂದನೆ; ಶಾರದಾ ಪೂಜೆ