ಕನ್ನಡಪ್ರಭ ವಾರ್ತೆ ಗುರುಮಠಕಲ್
ಗುರಮಠಕಲ್ ಕ್ಷೇತ್ರದ ಗೋಪಾಳಪುರ ಗ್ರಾಮದಲ್ಲಿ ಕೆಕೆಆರ್‌ಡಿ ವತಿಯಿಂದ ಶಾಲಾ ತರಗತಿ ನಿರ್ಮಾಣ, ಚಿನ್ನಾಕಾರ ಗ್ರಾಮದಲ್ಲಿ ಕೆಕೆಆರ್‌ಡಿಬಿ ವತಿಯಿಂದ 2 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು, ಬೆಟ್ಡದಳ್ಳಿ ಗ್ರಾಮದಲ್ಲಿ 15 ಲಕ್ಷ ರು. ವೆಚ್ಛದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಧರ್ಮಪುರ ತಾಂಡಾದಲ್ಲಿ 40 ಲಕ್ಷ ರು.ಗಳ ವೆಚ್ಚದಲ್ಲಿ ಸರ್ಕಾರಿ ಶಾಲೆಗೆ 2 ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗೋಪಾಳಪುರ ಗ್ರಾಮ : ಜನರ ಕುಂದು ಕೊರತೆ ಆಲಿಸಿದ ಶಾಸಕರು, ಪ್ರತಿ ವರ್ಷ ನಮಗೆ ಸರ್ಕಾರದಿಂದ ಬರುವ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮಕ್ಕೆ 10 ಲಕ್ಷ ರೂ.ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ನವಾಬುರ್ಜ್-ಗೋಪಾಳಪುರ ರಸ್ತೆ ಸುಧಾರಣೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ಬರಬೇಕಾದರೆ ಮೊದಲು ಟ್ರಸ್ಟ್ ಇರಬೇಕು. ಅಂದಾಗ ಮಾತ್ರ ಹಣ ಬಿಡುಗಡೆ ಮಾಡಿಸಬಹುದು ಎಂದರು.
ಚಿನ್ನಾಕಾರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಸುಸಜ್ಜಿತವಾಗಿದ್ದು, ಇಡೀ ಕ್ಷೇತ್ತದಲ್ಲಿ ಇಂಥ ಕಟ್ಟಡವಿಲ್ಲ. ನಮ್ಮ ತಂದೆ ಶಾಸಕರಿದ್ದಾಗ ನಿರ್ಮಾಣವಾದ ಈ ಕಟ್ಟಡ ಉದ್ಘಾಟನೆಗೆ ಅನಿವಾರ್ಯವಾಗಿ ಅವರು ಬರಲು ಸಾದ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಕೆಆರ್ಡಿಬಿಯಿಂದ ಬರುವ ಅನುದಾನವನ್ನು ಪರಮೇಶಪಲ್ಲಿವರೆಗೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬಹುದು ಆದರೆ, ಮುಂದಿನ ದಿನಗಳಲ್ಲಿ ಯಾರು ನಿರ್ವಹಣೆ ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಮುಂದಾದರೆ ಒಳ್ಳೆಯದು ಎಂದು ಸಲಹೆ ಮಾಡಿದರು.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಶರಣಬಸವ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಉಪ ತಹಸೀಲ್ದಾರ ಬಸವರಾಜ ಸಜ್ಜನ್, ಬಿಇಒ ಈರಪ್ಪ ಕನ್ನಳ್ಳಿ, ಸಿಡಿಪಿಒ ಶರಣಬಸವ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ಅನುರಾಧ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಮಹೇಂದ್ರರಡ್ಡಿ ಕಂದಕೂರ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಆನಂದ ವಡವಟ, ನರಸಿಂಹಲು ಚಿಂತಗುಂಟಾ, ಆನಂದ ಶಿಳ್ಳೆ, ನಾರಾಯಣ ಕೊಂಕಲ್, ಭೀಮರಾಯ ಕೊಂಕಲ್, ಶರಣಗೌಡ ಗುಂಜನೂರ, ಮೋದಿನ್‌ಸಾಬ ಗುಂಜನೂರ, ಬಸವರಾಜ ಹಳ್ಳಿ, ಬುಗ್ಗಾರಡ್ಡಿ ಧರ್ಮಾಪೂರ, ಚಿನ್ನಾಕರ ಗ್ರಾಮದ ಶರಣಗೌಡ ಚಂದಾನೂರ, ಶರಣಗೌಡ ಚಿನ್ನಾಕಾರ, ಸಿದ್ದಪ್ಪಗೌಡ ಹಳಿಮನಿ, ವಿಜಯರಡ್ಡಿ, ಪ್ರವೀಣ, ಗೋಪಾಳಪುರ ಗ್ರಾಮದ ಅನಂತರಡ್ಡಿ, ಆನಂದ, ಹಣಮರಡ್ಡಿ, ಮಹಾದೇವಪ್ಪ, ಸೂಗಪ್ಪ ಸಾಹು ಗಣಪೂರ, ಮಲ್ಲಣ್ಣ ಗಣಪೂರ, ಜಗದೀಶ್ ಬುರ್ಜ್ ತಾಂಡ,ಬೆಟ್ಟದಳ್ಳಿ ತಾಂಡಾದ ಶಂಕರ ರಾಠೋಡ, ಗೋಪಾಲ ರಾಠೋಡ, ಪತ್ತು ರಾಠೋಡ, ರಾಜು ಬೆಟ್ಟದಳ್ಳಿ ತಾಂಡ, ಧಮಾಪೂರ ತಾಂಡಾದ ಸುರೇಶ ಚಿನ್ನಾರಾಠೋಡ, ಡಿ.ಕೆ.ರವಿ ಇತರರು ಇದ್ದರು.
ರಾಜ್ಯದಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿನ ಲೋಪ ಸರಿಪಡಿಸುವಂತೆ ಕಳೆದ ಭಾರಿ ಅಧಿವೇಶನದಲ್ಲಿ ಮಾತನಾಡಿದ್ದೆ. ಕೆಲವು ರಾಜಕೀಯ ಘಟನೆಗಳ ಹಿನ್ನೆಲೆ ತಾಂತ್ರಿಕ ತೊಂದರೆಯಾಗಿತ್ತು, ಯಾವ ಗ್ರಾಮದಲ್ಲಿ, ತಾಂಡಾದಲ್ಲಿ, ವಾರ್ಡ್‌ನಲ್ಲಿ ಹೆಚ್ಚು ಜನರಿದ್ದು ಒಂದು ನ್ಯಾಯ ಬೆಲೆ ಅಂಗಡಿ ಇದ್ದಲ್ಲಿ ಮತ್ತೊಂದು ಹೊಸ ನ್ಯಾಯ ಬೆಲೆ ಅಂಗಡಿ ತೆರೆಯಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.