ಕನ್ನಡಪ್ರಭ ವಾರ್ತೆ, ಕಡೂರು

ನೂತನ ತಾಲೂಕು ಕಚೇರಿ ಕಟ್ಟಡ ₹16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇಲ್ಲಿದ್ದ ಕೆಲ ತಾಂತ್ರಿಕ ತೊಂದರೆಗಳು ಪರಿಹಾರವಾಗಿವೆ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ತಿಳಿಸಿದರು.

ಹಳೆಯದಾದ ತಾಲೂಕು ಕಚೇರಿ ಕಟ್ಟಡಗಳು ಶಿಥಿಲವಾಗಿರುವ ಕಾರಣ ಹೊಸ ಕಚೇರಿ ನಿರ್ಮಾಣಕ್ಕಾಗಿ ಸಲ್ಲಿಸಿದ್ದ ಪ್ರಸ್ತಾವನೆ ಹಿನ್ನೆಲೆಯಲ್ಲಿ ಶನಿವಾರ ಕಡೂರು ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಅವರು ಪರಿಶೀಲನೆ ನಡೆಸಿದರು. ಹೊಸ ತಾಲೂಕು ಕಚೇರಿ ಸಮುಚ್ಚಯ ನಿರ್ಮಾಣಕ್ಕಾಗಿ ₹16 ಕೋಟಿ ಮಂಜೂರಾಗಿದೆ. ಯಾವುದೇ ಮರಗಳನ್ನು ಕತ್ತರಿಸಲು ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿಗೆ ಹೊಂದಿಕೊಂಡಂತಿರುವ ಪ್ರವಾಸಿ ಮಂದಿರದ ಆವರಣದ, ಉದ್ದೇಶಿತ ಕಟ್ಟಡಗಳು ನಿರ್ಮಾಣವಾಗುವ ಜಾಗ, ಕಾಂಪೌಂಡ್ ನಿರ್ಮಾಣವಾಗುವ ಸ್ಥಳ ಎಲ್ಲವನ್ನೂ ನಕ್ಷೆ ಆಧರಿಸಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಕುಮಾರ ಕಠಾರಿಯಾ ಅವರು ಹರುವನಹಳ್ಳಿಗೆ ಭೇಟಿ ನೀಡಿ ಎಸ್.ಐ.ಆರ್.ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ,ತಹಸೀಲ್ದಾರ್ ಪೂರ್ಣಿಮಾ, ಗೃಹಮಂಡಳಿ ಎಇಇ ಗೀತಾ ಸೇರಿದಂತೆ ಮತ್ತಿತರರು ಇದ್ದರು.


3ಕೆಕೆಡಿಯು 2.

ಕಡೂರು ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿ ಹಾಗೂ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಕಡೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದರು.