ಕನ್ನಡ ಪ್ರಭ ವಾರ್ತೆ ಮುಧೋಳ
ಮಂಗಳವಾರ ಬೆಳಗ್ಗೆ ನಗರದ 71ನೇ ಮತಗಟ್ಟೆಗೆ ಪುತ್ರ ಅರುಣ ಜೊತೆ ತೆರಳಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಾವುದೇ ಫಲ ನೀಡುವುದಿಲ್ಲ. ಮತದಾರರು ಇಂತಹ ಯೋಜನೆಗಳಿಗೆ ಯಾವತ್ತೂ ತಲೆ ಬಾಗುವುದಿಲ್ಲ. ದೇಶದ ರಕ್ಷಣೆ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಉದ್ದೇಶದಿಂದ ಹೆಚ್ಚಿನ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದಾರೆ. ಪರಿಣಾಮ ದೇಶದಲ್ಲಿ 400ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಸಾಧಿಸಲಿದ್ದು, ಮತ್ತೆ ಮೋದಿ ಅವರೇ ಪ್ರಧಾನಿ ಆಗುತ್ತಾರೆಂದು ಹೇಳಿದರು.
ರಾಜ್ಯದಲ್ಲಿ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಅದರಲ್ಲೂ ನಾನು ಕೂಡ ಒಬ್ಬ.ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.ಕೆ.ಆರ್.ಮಾಚಪ್ಪನವರ, ಸಂಗಣ್ಣ ಕಾತರಕಿ, ಅರುಣ ಗೋವಿಂದ ಕಾರಜೋಳ, ಡಾ.ರವಿ ನಂದಗಾಂವ, ಹನುಮಂತ ವಜ್ಜರಮಟ್ಟಿ, ವೆಂಕಣ್ಣ ಮುಳ್ಳೂರ, ಮಾರುತಿ ಆನಿ, ಪುಂಡಲೀಕ ಭೋವಿ ಸೇರಿದಂತೆ ಇತರರು ಇದ್ದರು.