ಕಡೂರುಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳು ಜನ ಸಾಮಾನ್ಯರ ಬದುಕಿಗೆ ಆಸರೆ ಜೊತೆ ಹೊಸ ಜೀವನ ಕಲ್ಪಿಸಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಹೇಳಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕಡೂರು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳು ಜನ ಸಾಮಾನ್ಯರ ಬದುಕಿಗೆ ಆಸರೆ ಜೊತೆ ಹೊಸ ಜೀವನ ಕಲ್ಪಿಸಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 36 ತಿಂಗಳು ಕಳೆಯುತ್ತಿದೆ. ಜನರಿಗೆ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಜಾರಿಗೊಳಿಸಿ ಬಡವರು ಮತ್ತು ಜನ ಸಾಮಾನ್ಯರ ಬದುಕು ಹಸನಾಗುವಂತೆ ಮಾಡಿದೆ ಎಂದರು.
ಅದರಂತೆ ಕಡೂರು ತಾಲೂಕಿನಲ್ಲಿ ಗೃಹಲಕ್ಷ್ಮೀಯಲ್ಲಿ 2023ರ ಆ.7 ರಿಂದ 70,347 ಫಲಾನುಭವಿಗಳಿಗೆ ತಲಾ ₹2 ಸಾವಿರ ದಂತೆ ಈವರೆಗೆ ₹396,98,76,000 ಮಹಿಳೆಯರಿಗೆ ವಿತರಿಸಿದೆ. ಆ ಮೂಲಕ ಬಡವರ ಆರ್ಥಿಕ ಚೇತರಿಕೆಗೆ ನೆರವಾಗಿದೆ. ಅನ್ಯ ಕಾರಣಗಳಿಂದ ಕೈ ಬಿಟ್ಟಿರುವ 312 ಫಲಾನುಭವಿಗಳ ಮಾಹಿತಿ ಕೇಂದ್ರ ಕಚೇರಿಗೆ ಸಲ್ಲಿಸಿದ್ದು ಪರಿಶೀಲನೆ ಬಳಿಕ ಯೋಜನೆಗೆ ಅರ್ಹರಾಗಲಿದ್ದಾರೆ. 160 ಜನರ ವಿವರ ಪಡಿತರ ಚೀಟಿಯಲ್ಲಿ ತಿದ್ದುಪಡಿ ಆಗಿವೆ ಎಂದರು.
ಗೃಹ ಜ್ಯೋತಿಯಲ್ಲಿ ಬೀರೂರು ಉಪ ವಿಭಾಗದಲ್ಲಿ 2023ರ ಆಗಸ್ಟ್ ನಿಂದ 2026ರ ಏಪ್ರಿಲ್ ವರೆಗೆ 28448 ಫಲಾನುಭವಿಗಳಿಗೆ ₹3012 ಕೋಟಿ ವಿದ್ಯುತ್ ಶುಲ್ಕ ಉಳಿತಾಯವಾಗಿದೆ. ಕಡೂರು ಉಪ ವಿಭಾಗದಲ್ಲಿ ಏಪ್ರಿಲ್ ವರೆಗೆ 50607 ಫಲಾನುಭವಿಗಳಿಗೆ ಒಟ್ಟು ₹194.35 ಕೋಟಿ ಪ್ರಯೋಜನ ಪಡೆದಿದ್ದಾರೆ ಎಂದರು.
ಮೇ 12. 2023 ರಿಂದ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣದಲ್ಲಿ ಈವರೆಗೆ 21253853 ಮಹಿಳೆಯರು ಪ್ರಯಾಣ ಮಾಡಿ ಕಡೂರು ಬಸ್ ಡಿಪೋಗೆ ₹840308968 ಆದಾಯ ಬಂದಿದೆ ಎಂದರು.
ಅಲ್ಲದೆ ಅನ್ನಭಾಗ್ಯ ಯೋಜನೆಯಲ್ಲಿ ಕಡೂರಲ್ಲಿ ಎಎವೈ 5147, ಪಿಎಚ್ಎಚ್ 64218 , ಎಪಿಎಲ್ 10,149 ಸೇರಿ ಒಟ್ಟು 79514 ಕುಟುಂಬಗಳ 26,5560 ಫಲಾನುಭವಿಗಳಿದ್ದು, ತಾಲೂಕಿನಲ್ಲಿರುವ 157 ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಆಗುತ್ತಿದೆ. ಏಪ್ರಿಲ್ 26 ರ ತನಕ 10 ಕೆಜಿ ಅಕ್ಕಿ ,ಅಂತ್ಯೋದಯದಲ್ಲಿ 35 ಕೆಜಿ, ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಯುವನಿಧಿಯಲ್ಲಿ 1471 ನೊಂದಣಿ ಆಗಿದೆ. ₹3.66 ಲಕ್ಷ ವಿತರಿಸಲಾಗಿದೆ ಎಂದರು.
ತಾಪಂ. ಕಾರ್ಯ.ನಿರ್ವಹಣಾಧಿಕಾರಿ ಸಿ,ಆರ್. ಪ್ರವೀಣ್ ಮಾತನಾಡಿ, ರಾಜ್ಯ ಸರಕಾರವು ಬಡವರು ಮತ್ತು ಜನ ಸಾಮಾನ್ಯರಿಗಾಗಿ ರೂಪಿಸಿರುವ ಯೋಜನೆಗಳು ಸಕಾಲದಲ್ಲಿ ತಲುಪುತ್ತಿವೆ ಎಂದರು.
ಸಭೆ ಆರಂಭಕ್ಕೂ ಮುನ್ನ ಸಮಿತಿ ಸದಸ್ಯರಾಗಿದ್ದ ಮಚ್ಚೇರಿಯ ಚನ್ಣಣ್ಣನವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಗ್ಯಾರಂಟಿ ಸಮಿತಿಯ ಸದಸ್ಯರಾದ ಸಪ್ತಕೋಟಿ ಧನಂಜಯ್, ಪುಷ್ಪಾರಮೇಶ್,ಗಿರೀಶ್ ನಾಯ್ಕ,ರಮೇಶ್ ದಳವಾಯಿ, ಸಿ.ಎಸ್. ಸಂತೋಷ್, ಸೋಮೇಶ್, ತೌಸಿಬ್, ಕುಪ್ಪಾಳು ಶೋಭಾ,ಸುಜಾತ ಚಂದ್ರಶೇಖರ್,ಮೂರ್ತಿ,,ಮನು.ಮೆಸ್ಕಾಂ ಎಇಇ ತಿರುಪತಿ ನಾಯ್ಕ, ,ದಾಸೋಹ ಸಮಿತಿ ಅಧಿಕಾರಿ ದೇವರಾಜು, ಕೆಎಸ್.ಆರ್.ಟಿ.ಸಿ.ಯ ರಾಜಾನಾಯ್ಕ ಸೇರಿದಂತೆ ಮತ್ತಿತರರು ಇದ್ದರು. 15ಕೆಕೆಡಿಯು2. ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿಆಸಂದಿ ಕಲ್ಲೇ ಶ್ ರವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.