ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಯಾಗಿದ್ದು ಬಡವರ ಆಶಾಕಿರಣವಾಗಿರುವ ಅನ್ನಭಾಗ್ಯ ಯೋಜನೆಯು ಆಸರೆಯಾಗಿದೆ. ಹಸಿವು ಮುಕ್ತ ಭಾರತ ಮತ್ತು ‘ಸುಸ್ಥಿರ ಅಭಿವೃದ್ಧಿ ಗುರಿ-2030’ ತಲುಪಲು ಸಹಕಾರಿಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಲ್ಲಿ ಬಹಳ ಪ್ರಸಿದ್ದಿಯಾಗಿರುವ ಗೃಹಲಕ್ಷಿ ಯೋಜನೆಯ ಹಣವು 2025 ರ ಜೂನ್ ಮಾಹೆಯವರೆಗೆ ಬಿಡುಗಡೆಯಾಗಿದೆ. 2044 ಐಟಿ, ಜಿಎಸ್‌ಟಿ ಫಲಾನುಭವಿಗಳು ಇದ್ದು, 298 ಮರಣ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲಾಗಿದೆ. ಎನ್‌ಪಿಸಿಐ ಸಮಸ್ಯೆಯಿರುವ 90 ಫಲಾನುಭವಿಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಿವಮೊಗ್ಗ ಸಿಡಿಪಿಓ ಗಂಗೂಬಾಯಿ ತಿಳಿಸಿದರು.ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವರೆಗೆ ವಿದ್ಯುತ್ ಬಳಕೆಯನ್ನು ಮಾಡುತ್ತಿರುವ ಗ್ರಾಹಕರುಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜೂನ್ 2025 ರವರೆಗೆ 1.95 ಕೋಟಿ ರು. ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಜೂನ್ ಮಾಹೆಯ ವರೆಗೆ 59.71 ಲಕ್ಷ ರು. ಹಣ ಜಮೆಯಾಗಿದೆ. ಯುವನಿಧಿ ಯೋಜನೆಯಡಿ ಈ ವರ್ಷ ಪದವಿ ಹಾಗೂ ಡಿಪ್ಲೋಮಾ ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸುವ ಕೆಲಸವನ್ನು ಮಾಡಬೇಕು ಎಂದರು.
ಶಕ್ತಿ ಯೋಜನೆಯಡಿ ಶಿವಮೊಗ್ಗ ತಾಲೂಕಿನಲ್ಲಿ 2.7 ಕೋಟಿ ರು. ಮಹಿಳೆಯರು ಪ್ರಯಾಣಿಸಿದ್ದು, ಸಾರಿಗೆ ಇಲಾಖೆಗೆ ಶೇ.37 ರಷ್ಟು ಅಂದರೆ 7.32 ಕೋಟಿ ರು. ಆದಾಯ ಗಳಿಕೆಯಾಗಿದೆ ಎಂದರು.ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ತಾರಾ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯರುಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.