ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗುಡುಗಳಲೆ ಜಯದೇವ ಜಾನುವರು ಜಾತ್ರಾ ಸಮಿತಿ ಮತ್ತು ಶನಿವಾರಸಂತೆಯ ಚೇತನ್ ಡಯಾಗೋನ್ನೀಸ್ಟಿಕ್ ಲ್ಯಾಬೊರೇಟರಿ ಹಾಗೂ ಚನ್ನರಾಯಪಟ್ಟಣದ ಜನಪ್ರಿಯ ರಕ್ತ ಶೇಖರಣಾ ಕೇಂದ್ರ ಮತ್ತು ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಇದರ ಜೊತೆಯಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಲಾವರು ಮಂದಿ ರಕ್ತದಾನ ಮಾಡಿದರೆ ಹಲವಾರು ಮಂದಿ ಕಣ್ಣಿನ ತಪಾಸಣೆ, ರಕ್ತದೊತ್ತಡ, ಶುಗರ್ ಪರೀಕ್ಷೆ ಮಾಡಿಸಿಕೊಂಡರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಗತ್ಯ ಇದ್ದವರಿಗೆ ಉಚಿತ ಔಷಧಿ ವಿತರಿಸಲಾಯಿತು.
ಶಿಬಿರದಲ್ಲಿ ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಮತ್ತು ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಬಿ.ಸಕ್ಷಿ, ಡಾ.ಉಮರ್ ಫರೂರ್ ನೇತೃತ್ವದಲ್ಲಿ ಸಿಬ್ಬಂದಿ ಶೈಫಾ ಫೈಬೀನಾ, ಸಿಬ್ರನ್ ಬಾನು ಕಣ್ಣಿನ ಪರೀಕ್ಷೆ ನಡೆಸಿದರು. ಶಿಬಿರದಲ್ಲಿ ಲ್ಯಾಬ್ ಟೆಕ್ನಿಶಿಯನ್ ವಿಭಾಗದ ಸಿಬ್ಬಂದಿ ಭರತ್, ಚೈತ್ರ, ಹೇಮಾ, ಭುವನಾ, ಪ್ರಜ್ವಲ್, ಮಾನಸ, ಚೇತನ್ ರೋಗಿಗಳ ತಪಾಸಣೆ ನಡೆಸಿದರು.ಶಿಬಿರದ ಪ್ರಾಯೋಜಕ ಶನಿವಾರಸಂತೆ ಚೇತನ್ ಡಯಾಗ್ನೋಸ್ಟಿಕ್ ಲ್ಯಾಬೊರೇಟಿಯ ಚೇತನ್, ಜಾತ್ರಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಆಗಮಿಸಿದ ಸಂವಿಧಾನ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸಂವಿಧಾನ ರಥವನ್ನು ಪೂಜಾ ಕೈಂಕರ್ಯಗಳೊಂದಿಗೆ ಬರಮಾಡಿಕೊಂಡರು.
ವಿವಿಧ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಸಂಗೀತ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.