₹13.16 ಲಕ್ಷ ಮೌಲ್ಯದ ಗಾಂಜಾ ನಾಶ

KannadaprabhaNewsNetwork |  
Published : Feb 10, 2024, 01:52 AM ISTUpdated : Feb 10, 2024, 04:15 PM IST
ಪೊಟೊ: 9ಎಸ್‌ಎಂಜಿಕೆಪಿ07ಶಿವಮೊಗ್ಗದ ಹೊರವಲಯದ ಮಾಚೇನಹಳ್ಳಿಯ  ಕೈಗಾರಿಕಾ ಪ್ರದೇಶದಲ್ಲಿರುವ ಶುಶ್ರತ ಬಯೋ ಮೆಡಿಕಲ್‌ ಮೇಸ್ಟ್ ಮ್ಯಾನೇಜ್‌ಮೆಂಟ್‌ ಸೊಸೈಟಿಯಲ್ಲಿ ನಾಶಪಡಿಸಿದ 13.16 ಲಕ್ಷ ಮೌಲ್ಯದ 34 ಕೆ.ಜಿ. ತೂಕದ ಗಾಂಜಾ. | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ₹13.16 ಲಕ್ಷ ಮೌಲ್ಯದ 34 ಕೆ.ಜಿ. ತೂಕದ ಗಾಂಜಾವನ್ನು ಶುಕ್ರವಾರ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ಶುಶ್ರತ ಬಯೋ ಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿಯಲ್ಲಿ ನಾಶ ಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ₹13.16 ಲಕ್ಷ ಮೌಲ್ಯದ 34 ಕೆ.ಜಿ. ತೂಕದ ಗಾಂಜಾವನ್ನು ಶುಕ್ರವಾರ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ಶುಶ್ರತ ಬಯೋ ಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿಯಲ್ಲಿ ನಾಶ ಪಡಿಸಲಾಯಿತು.

ಒಟ್ಟು 42 ಪ್ರಕರಣಗಳಲ್ಲಿ ಅಮಾನತು ಮಾಡಿದ್ದ ₹13,16,400 ಮೌಲ್ಯದ ಒಟ್ಟು 34 ಕೆಜಿ 825 ಗ್ರಾಂ ತೂಕದ ಗಾಂಜಾವನ್ನು ಶಿವಮೊಗ್ಗ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್ ಸಮ್ಮುಖ ನಾಶಪಡಿಸಲಾಯಿತು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ, ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸೊಸೈಟಿಯ ಡಾ.ಸಿ.ಎಸ್. ಗಿರೀಶ್, ಇಲಾಖೆಯ ಡಾ.ಹರೀಶ್ ದೆಲಂತ ಬೆಟ್ಟು, ಬಾಬು ಆಂಜನಪ್ಪ, ಎಂ.ಸುರೇಶ್, ಬಿ.ಆರ್‌. ವಿನಾಯಕ್ ಇತರರು ಮತ್ತಿತರರಿದ್ದರು.

ಜಿಲ್ಲಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದುಬಂದಲ್ಲಿ, ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಅಭಯ ನೀಡಿದ್ದಾರೆ.

ಶಿವಮೊಗ್ಗದ ಹೊರವಲಯದ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ಶುಶ್ರತ ಬಯೋ ಮೆಡಿಕಲ್‌ ಮೇಸ್ಟ್ ಮ್ಯಾನೇಜ್‌ಮೆಂಟ್‌ ಸೊಸೈಟಿಯಲ್ಲಿ ₹13.16 ಲಕ್ಷ ಮೌಲ್ಯದ 34 ಕೆ.ಜಿ. ತೂಕದ ಗಾಂಜಾವನ್ನು ಜಿಲ್ಲಾ ಎಸ್‌ಪಿ ಸಮ್ಮುಖ ನಾಶಪಡಿಸಲಾಯಿತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ