28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿವೆ ಎಂದು ಹಾಸನ ಲೋಕಸಭಾ ಸದಸ್ಯರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರ. ಈ ಕುರಿತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆ ಆಗಿರುವ ಬಗ್ಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿವೆ ಎಂದು ಹಾಸನ ಲೋಕಸಭಾ ಸದಸ್ಯರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರ. ಈ ಕುರಿತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆ ಆಗಿರುವ ಬಗ್ಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು. ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಫೆ೯-೧೧ ದೇಶದಾದ್ಯಂತ ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಹಿನ್ನೆಲೆ ನಗರದ ಖಾಸಗಿ ಹೋಟೆಲೊಂದರಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ ಎಂದಿದ್ದಾರೆ. ೨೮ ಕ್ಷೇತ್ರಗಳ ಬಗ್ಗೆ ಬಿಜೆಪಿ ವರಿಷ್ಠರು ತೀರ್ಮಾನಿಸಿದ ಮೇಲೆಯೇ ಮುಂದಿನ ನಡೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ೨೬೬ ಸೀಟು ಬಂದರೆ ಸಾಕು ಎನ್ನುತ್ತಿದ್ದೆವು. ಈಗ ೪೦೦ಕ್ಕೂ ಹೆಚ್ಚು ಸೀಟು ಬರಬೇಕು ಎಂಬ ಘೋಷಣೆಯಾಗಿದೆ. ೩೬೬ ಸೀಟುಗಳು ಬಿಜೆಪಿಗೆ ಸಿಗಲಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ’ ಎಂದು ತಿಳಿಸಿದರು.‘ಐದೂವರೆ ಶತಮಾನದ ಕನಸಾದ ರಾಮ ಮಂದಿರ ಪ್ರತಿಷ್ಠಾಪನೆ ಮಾಡಿರುವುದು ಹೆಮ್ಮೆಯ ವಿಚಾರ. ಕೇಂದ್ರದ ೧೦ ವರ್ಷಗಳ ಯೋಜನೆಯ ಸಾಧನೆ ಬಗ್ಗೆ ಅಭಿನಂದನಾ ಪೋಸ್ಟ್ ಕಾರ್ಡ್ ಮೂಲಕ ಕೇಂದ್ರದ ಕಾರ್ಯಾಲಯಕ್ಕೆ ಕಳಿಸೋಣ’ ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಹಾಗೂ ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ‘ಅಕ್ಕಿ ಕೊಡುತ್ತಿರುವವರು ನಮ್ಮ ಕಾರ್ಯಕರ್ತರು, ಗ್ರಾಮಗಳ ಪ್ರಮುಖರ ಭೇಟಿ ಮಾಡಬೇಕು. ಕೇಂದ್ರಕ್ಕೆ ಮೋದಿ ಬೇಕು ಎನ್ನುವ ಜನ ಕಾಂಗ್ರೆಸ್‌ನಲ್ಲೂ ಇದ್ದಾರೆ. ಶಿಕ್ಷಕರು, ವಿದ್ಯಾರ್ಥಿ ಪ್ರಮುಖರು ಪೋಸ್ಟ್ ಮ್ಯಾನ್, ಆಶಾ ಕಾರ್ಯಕರ್ತೆಯರ ಭೇಟಿ ಮಾಡಬೇಕು’ ಎಂದರು.
ಗ್ರಾಮ ಚಲೋ ಅಭಿಯಾನದ ಪೋಸ್ಟರ್ ಬಿಡುಗೆಡೆ
‘ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಫೆ.೯,೧೦,೧೧ ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣಾ ದಿನ ಮೂರು ದಿನಗಳ ಕಾಲ ವಿಶೇಷ ದಿನ ಎಂದು ಅವಧಿ ಮೀಸಲಿಡಬೇಕು. ಎಲ್ಲಾ ಮಂಡಲ ಅಧ್ಯಕ್ಷರು, ಸ್ವಯಂ ಪ್ರೇರಣೆಯಿಂದ ಕೆಲಸ ಮಾಡೋಣ’ ಎಂದರು.