ಗುಡಿಬಂಡೆ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ₹10. 41 ಲಕ್ಷ ಉಳಿತಾಯ ಬಜೆಟ್

KannadaprabhaNewsNetwork | Updated : Mar 29 2025, 11:44 AM IST

ಸಾರಾಂಶ

ಆರಂಭಿಕ ಶುಲ್ಕ 2.49 ಕೋಟಿ, ಅಂದಾಜು ಆದಾಯ 4.08 ಕೋಟಿ ಸೇರಿ ಒಟ್ಟು 6.5 ಕೋಟಿಯಲ್ಲಿ ಅಂದಾಜು ಖರ್ಚು 6.47 ಕೋಟಿಯಾಗಿದ್ದು, 10.41 ಲಕ್ಷ ಉಳಿತಾಯ ಬಜೆಟ್ ಅನ್ನು ಗುಡಿಬಂಡೆ ಪ.ಪಂ. ಮುಖ್ಯಾಧಿಕಾರಿ ಸಬಾ ಶಿರೀನಾ ಮಂಡನೆ ಮಾಡಿದರು. ಬಳಿಕ ಸಭೆಯಿಂದ ಅನುಮೋದನೆ ಪಡೆಯಲಾಯಿತು

  ಗುಡಿಬಂಡೆ : ಇಲ್ಲಿಯ ಪಟ್ಟಣ  ಪಂಚಾಯಿತಿಯ 2025-26ನೇ ಸಾಲಿನ ಆಯವ್ಯಯ ಸಭೆ ಪಪಂ ಅಧ್ಯಕ್ಷ ಎ.ವಿಕಾಸ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಭೆಯಲ್ಲಿ 10.41 ಲಕ್ಷ ಉಳಿತಾಯ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಆರಂಭಿಕ ಶುಲ್ಕ 2.49 ಕೋಟಿ, ಅಂದಾಜು ಆದಾಯ 4.08 ಕೋಟಿ ಸೇರಿ ಒಟ್ಟು 6.5 ಕೋಟಿಯಲ್ಲಿ ಅಂದಾಜು ಖರ್ಚು 6.47 ಕೋಟಿಯಾಗಿದ್ದು, 10.41 ಲಕ್ಷ ಉಳಿತಾಯ ಬಜೆಟ್ ಅನ್ನುಪ.ಪಂ. ಮುಖ್ಯಾಧಿಕಾರಿ ಸಬಾ ಶಿರೀನಾ ಮಂಡನೆ ಮಾಡಿ ಅನುಮೋದನೆ ಪಡೆದರು.

ನಿರೀಕ್ಷಿತ ಅಂದಾಜು ಆದಾಯ

ಎಸ್.ಎಫ್.ಸಿ ವೇತನ ಅನುದಾನ 80 ಲಕ್ಷ, ಎಸ್.ಎಫ್.ಸಿ ವಿದ್ಯುತ್ ಅನುದಾನ85 ಲಕ್ಷ, ಎಸ್.ಎಫ್.ಸಿ 30ಲಕ್ಷ, ಕಟ್ಟಡ ಪರವಾನಿಗೆ 6.5 ಲಕ್ಷ, 15ನೇ ಹಣಕಾಸು ಯೋಜನೆ 50 ಲಕ್ಷ, ಅಸ್ತಿ ತೆರಿಗೆ 25 ಲಕ್ಷ, ಪ.ಪಂ.ಅಂಗಡಿಗಳ ಬಾಡಿಗೆ 6 ಲಕ್ಷ, ನೀರು ಸರಬರಾಜು ತೆರಿಗೆ 18 ಲಕ್ಷ, ಉದ್ದಿಮೆ ಪರವಾನಿಗೆ 30 ಲಕ್ಷ, ಡೇ ನಲ್ಮ ಅನುದಾನ 40 ಲಕ್ಷ, ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ 2 ಲಕ್ಷ, ಇತರೆ ಆದಾಯ 32 ಲಕ್ಷ ಸೇರಿ ಒಟ್ಟು 4.8 ಕೋಟಿ ಅಂದಾಜು ಜಮೆ ನಿರೀಕ್ಷೆ ಮಾಡಲಾಗಿದೆ.

ಅಂದಾಜು ವೆಚ್ಚ:

ಸಿಬ್ಬಂದಿ ವೇತನ 98 ಲಕ್ಷ, ಬೀದಿ ದೀಪಗಳು ಹಾಗೂ ನೀರು ಸರಬರಾಜು ಕೇಂದ್ರಗಳು, ವಿದ್ಯುತ್ ನಿರ್ವಹಣೆಗೆ 70 ಲಕ್ಷ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ದಿನಕೂಲಿ ಸಿಬ್ಬಂದಿ ವೇತನ 12 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರ3.5 ಲಕ್ಷ, ಕಸದ ವಿಲೇವಾರಿ ವಾಹನಗಳ ರಿಪೇರಿಗಾಗಿ 2.4 ಲಕ್ಷ, ಪೌರಕಾರ್ಮಿಕರ ಸಾಧನ ಸಲಕರಣೆಗಳ ಬಾಬ್ತು 1.4 ಲಕ್ಷ, ಕಟ್ಟಡ ನಿರ್ಮಾಣ 13 ಲಕ್ಷ, ಉದ್ಯಾನವನಅಭಿವೃದ್ದಿ 14 ಲಕ್ಷ, ರಸ್ತೆ ಬದಿಯಚರಂಡಿ ಕಾಮಗಾರಿಗಳಿಗೆ 87 ಲಕ್ಷ, ಬೀದಿ ದೀಪಗಳ ರಿಪೇರಿಗಾಗಿ 5 ಲಕ್ಷ, ನೀರು ಸರಬರಾಜು ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿಸಲು 7.1 ಲಕ್ಷ, ಎಸ್.ಸಿ ಮತ್ತು ಎಸ್.ಟಿ ಜನಾಂಗದ ಪ್ರದೇಶಗಳಲ್ಲಿ ರಸ್ತೆ ಮತ್ತುಚರಂಡಿ ಕಾಮಗಾರಿಗಳಿಗೆ 8.5 ಲಕ್ಷ ಸೇರಿದಂತೆ ಇತರ ಒಟ್ಟು ಯೋಜನೆಗಳ ವೆಚ್ಚವನ್ನು ಮಂಡಿಸಲಾಯಿತು.

ಈ ವೇಳೆ ಪ.ಪಂ ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ನಗೀನ್ತಾಜ್, ರಾಜೇಶ್, ಜಿ.ರಾಜೇಶ್, ಅನುಷಾ, ಬಷೀರ್, ಇಸ್ಮಾಯಿಲ್ ಅಜಾದ್, ವೀಣಾ, ನಾಮನಿರ್ದೇಶಿತ ಸದಸ್ಯರಾದ ಆರ್.ಬಾಲಾಜಿ, ಆದಿನಾರಾಯಣಪ್ಪ, ಅಂಬರೀಶ್ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಜರಿದ್ದರು.

Share this article