ನ್ಯಾಯಬೆಲೆ ಅಂಗಡಿ ಸ್ಥಳಾಂತರಕ್ಕೆ ಗುಡಿರೊಪ್ಪ ಗ್ರಾಮಸ್ಥರಿಂದ ಮನವಿ

KannadaprabhaNewsNetwork |  
Published : Nov 14, 2025, 01:15 AM IST
ಮಧುಗಿರಿ ಕಸಬಾ ಹರಿಹರರೊಪ್ಪ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಯನ್ನು ಗುಡಿರೊಪ್ಪ ಗ್ರಾಮಕ್ಕೆ ಶಿಫ್ಟ್‌ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿ ತಹಸೀಲ್ದಾರ್ಗೆ ಮನವಿ ಪತ್ರ ನೀಡಿದರು.  | Kannada Prabha

ಸಾರಾಂಶ

ಹರಿಹರರೊಪ್ಪದಲ್ಲಿ ಪಡಿತರ ಆಹಾರ ಧಾನ್ಯ ವಿತರಿಸುತ್ತಿದ್ದು, ಈ ನ್ಯಾಯ ಬೆಲೆ ಅಂಗಡಿಗೆ ಕಮ್ಮನಕೋಟೆ, ಮಾರಿಬೀಳು, ಗುಡಿರೊಪ್ಪ ಹಾಗೂ ಕಾಲೋನಿ ಈ 4 ಗ್ರಾಮದವರು ಪಡಿತರ ವಿತರಣೆ ಕೇಂದ್ರದಿಂದ ಸುಮಾರು 5 ರಿಂದ 6 ಕಿಮೀ ದೂರ ಕ್ರಮಿಸಬೇಕು.

ಮಧುಗಿರಿ: ತಾಲೂಕಿನ ಕಸಬಾ ಹೋಬಳಿಯ ಹರಿಹರರೊಪ್ಪ ಗ್ರಾಮದಲ್ಲಿರುವ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿಯನ್ನು ಗುಡಿರೊಪ್ಪ ಗ್ರಾಮಕ್ಕೆ ಬದಲಾಯಿಸಿ ಕೊಡುವಂತೆ ಆಗ್ರಹಿಸಿ, ಗ್ರಾಮಸ್ಥರು ಗುರುವಾರ ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಎಚ್‌.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಹರಿಹರರೊಪ್ಪದಲ್ಲಿ ಪಡಿತರ ಆಹಾರ ಧಾನ್ಯ ವಿತರಿಸುತ್ತಿದ್ದು, ಈ ನ್ಯಾಯ ಬೆಲೆ ಅಂಗಡಿಗೆ ಕಮ್ಮನಕೋಟೆ, ಮಾರಿಬೀಳು, ಗುಡಿರೊಪ್ಪ ಹಾಗೂ ಕಾಲೋನಿ ಈ 4 ಗ್ರಾಮದವರು ಪಡಿತರ ವಿತರಣೆ ಕೇಂದ್ರದಿಂದ ಸುಮಾರು 5 ರಿಂದ 6 ಕಿಮೀ ದೂರ ಕ್ರಮಿಸಬೇಕು. ಆಹಾರ ಧಾನ್ಯ ತರಲು ತುಂಬಾ ತೊಂದರೆಯಾಗಿದೆ. ಅಲ್ಲದೆ ಈ ಸೊಸೈಟಿಗೆ ಹೋಗಿ ಬರಲು ಈ ಗ್ರಾಮಗಳಿಂದ ಯಾವುದೇ ಬಸ್ಸು, ಆಟೋ ವ್ಯವಸ್ಥೆಯಿಲ್ಲ, ವೃದ್ಧರು, ಮಕ್ಕಳು ರೇಷನ್‌ ತರಲು ಕಷ್ಟವಾಗಿದೆ. ಇದಲ್ಲದೆ ಸದರಿ ನ್ಯಾಯ ಬೆಲೆ ಅಂಗಡಿ ನಡೆಸುವ ಮಾಲೀಕ ಅರುಣ್‌ ಎಂಬಾತ ಸದಾ ಮದ್ಯಪಾನ ಮಾಡಿ ತೂಗಾಡುತ್ತಿರುತ್ತಾನೆ. ಪ್ರತಿ ತಿಂಗಳು ಸುಮಾರು 20 ರೇಷನ್‌ ಕಾರ್ಡ್‌ಗಳಿಗೆ ರೇಷನ್‌ ಕಡಿಮೆ ಕೊಡುತ್ತಿದ್ದು, ಇದನ್ನು ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನ ಹರಿಸಿ ನಮಗಿರುವ ಈ ನ್ಯಾಯ ಬೆಲೆ ಅಂಗಡಿಯನ್ನು ರದ್ದುಗೊಳಿಸಿ ನಮ್ಮ 4 ಗ್ರಾಮಗಳ ಪಡಿತರ ವ್ಯವಸ್ಥೆಯನ್ನು ಗುಡಿರೊಪ್ಪ ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಶಿಫ್ಟ್ ಮಾಡಿ ಕೊಡಬೇಕೆಂದು ತಹಸೀಲ್ದಾರ್ ಶ್ರೀನಿವಾಸ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌