ಕನ್ನಡಪ್ರಭ ವಾರ್ತೆ ವಿಜಯಪುರ
ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮುಷ್ಕರ ಮುಂದುವರಿದಿದೆ. ಕಳೆದ 20 ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳ ಮತ್ತು ಯಾವುದೇ ಸೌಲಭ್ಯ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ ಕೂಡ ನಡೆಸಲಾಗಿದೆ. ಮುಷ್ಕರದಲ್ಲಿ ನೂರಾರು ಉಪನ್ಯಾಸಕರು ಹಾಗೂ ಉಪನ್ಯಾಸಕಿಯರು ತಮ್ಮ ಚಿಕ್ಕ ಮಕ್ಕಳೊಂದಿಗೆ ಧರಣಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ ಯಾವುದೇ ನಿರ್ಣಯಕ್ಕೆ ಬರುತ್ತಿಲ್ಲ. ಇಷ್ಟು ದಿನಗಳಿಂದ ತರಗತಿಗಳು ನಡೆಯುತ್ತಿಲ್ಲ. ಇದರ ಬಗ್ಗೆ ಸರ್ಕಾರ, ಆಡಳಿತ ಕಾಳಜಿ ವಹಿಸಬೇಕಿತ್ತು ಎಂದು ವಿದ್ಯಾರ್ಥಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.ಮುಷ್ಕರದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಅದ್ಯಕ್ಷ ಸುರೇಶ ಡಬ್ಬಿ, ಕಾರ್ಯದರ್ಶಿ ಆರ್.ಎಲ್. ಕಡೆಮನಿ, ಡಾ.ಆನಂದ ಕುಲಕರ್ಣಿ, ಡಾ. ರಾಜು ಚವ್ಹಾಣ, ಡಾ. ಎಸ್.ಐ ಎಂಬತ್ತನಾಳ, ಡಾ.ರಮೇಶ ತೇಲಿ, ಡಾ.ಆರ್.ಸಿ. ದಾಯಗೊಂಡ, ಡಾ.ರೇಣುಕಾ ಹೆಬ್ಬಾಳ, ಡಾ.ಅಶೋಕ ಬಿರಾದಾರ, ಡಾ.ಡಿ.ಬಿ. ಕುಲಕಣಿ, ಡಾ.ಎಸ್.ಎ. ಪಾಟೀಲ, ಡಾ.ಎಸ್.ಡಿ. ಬಿರಾದಾರ, ಡಾ.ಎಸ್.ಬಿ. ಗಂಗಮಾಲಿ, ಡಾ.ಎಸ್.ಎಸ್. ಗಡಿಗೆಪ್ಪಗೌಡರ, ಡಾ.ಎಸ್.ಪಿ. ತಳವಾರ, ಡಾ.ಆರ್.ಬಿ. ನಾಗರಡ್ಡಿ, ಡಾ.ಎಂ.ಎಸ್. ಶಿವಶರಣ, ಡಾ.ಆರ್.ಗಿ. ಕಳ್ಳಿ, ಡಾ.ರಾಜೇಶ್ವರಿ ಅವಟಿ, ಡಾ.ರೇಣುಕಾ ಹೆಬ್ಬಾಳ, ಡಾ.ಎಚ್. ಕುಮಾರಸ್ವಾಮಿ, ಶಿವಾನಂದ ಸಿಂಹಾಸನಮಠ, ಗಜ್ಜು ರಾಠೋಡ, ಗೀತಾ ರಜಪೂತ, ಡಾ.ವಿಜಯಲಲಕ್ಷ್ಮಿ ಪಾಟೀಲ, ಡಾ.ವಿಕ್ರಮ ಬಿರಾದಾರ, ಡಾ.ಬೌರಮ್ಮ ಗಂಜಾರ. ಡಾ.ವಿಜಯಲಕ್ಷ್ಮಿ ಪಾಟೀಲ, ಮಹೇಶ ಕಲ್ಲೂರ, ಜಿ.ಕೆ. ಚಕ್ರಸಾಲಿ, ಸವಿತಾ ಪಾಟೀಲ, ಜ್ಯೋತಿ ಹೂಗಾರ, ಶಿವಾನಂದ ಸಿಂಹಾಸಮಠ, ಎ.ಎಂ. ರಾಠೋಡ, ಜಿ.ಕೆ. ಹತ್ತೆನವರ, ವೈ.ಎ. ಇನಾಮದಾರ, ಶಿವಕುಮಾರ ಹಿರೇಮಠ, ಬಿ.ಐ. ಪಾಟೀಲ, ಯಾಸ್ಮೀನ ನದಾಫ್, ವೈ.ಎಚ್. ಗಿರಗಾಂವ, ಜಿ.ಐ. ಬೆಳ್ಳುಂಡಗಿ, ಸಾಜಿದ ಹುಸೇನ್ ರಿಸಾಲದಾರ, ಆರ್.ಎಸ್. ಗಾಯಕವಾಡ, ಎಸ್.ಬಿ. ಜೋಶಿ, ಆರ್.ಸಿ. ಬಿರಾದಾರ, ಸಿದ್ದಪ್ಪ ಬೊಮ್ಮಹಳ್ಳಿ ಮತ್ತಿತರರು ಭಾಗವಹಿಸಿದ್ದರು.