ಗಲ್ಫ್‌ ವೈದ್ಯಕೀಯ ವಿಶ್ವವಿದ್ಯಾಲಯ ಶೈಕ್ಷಣಿಕ ವರ್ಷಾರಂಭ

KannadaprabhaNewsNetwork |  
Published : Sep 09, 2026, 03:00 AM IST
2026–2027 ಶೈಕ್ಷಣಿಕ ವರ್ಷದ ಆರಂಭದಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳ ಮುಖ್ಯಸ್ಥರೊಂದಿಗೆ ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ | Kannada Prabha

ಸಾರಾಂಶ

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ (ಜಿಎಂಯು) ಸೋಮವಾರ 2026-2027ರ ಹೊಸ ಶೈಕ್ಷಣಿಕ ವರ್ಷವನ್ನು ಅಧಿಕೃತವಾಗಿ ಪ್ರಾರಂಭಿಸಿತು. ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.

ಮಂಗಳೂರು: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ (ಜಿಎಂಯು) ಸೋಮವಾರ 2026-2027ರ ಹೊಸ ಶೈಕ್ಷಣಿಕ ವರ್ಷವನ್ನು ಅಧಿಕೃತವಾಗಿ ಪ್ರಾರಂಭಿಸಿತು. ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.

ನಾವು ಶೈಕ್ಷಣಿಕ ಶ್ರೇಷ್ಠತೆಯನ್ನು ಹೆಚ್ಚಿಸುವುದು, ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುವುದಕ್ಕೆ ಒತ್ತು ನೀಡುತ್ತದೆ ಎಂದರು.

ವಿಶ್ವವಿದ್ಯಾನಿಲಯದ ನಾಯಕತ್ವ, ಡೀನ್‌ಗಳು ಮತ್ತು ಅದರ ಘಟಕ ಕಾಲೇಜುಗಳ ಮುಖ್ಯಸ್ಥರ ನಡುವೆ ಸಭೆ ನಡೆಸಲಾಯಿತು. ಶೈಕ್ಷಣಿಕ ವರ್ಷದ ನಿರ್ದೇಶನ ಮತ್ತು ಆದ್ಯತೆಗಳ ಬಗ್ಗೆ ಚರ್ಚಿಸಲಾಯಿತು. ಶೈಕ್ಷಣಿಕ ವರ್ಷದ ಆರಂಭದ ಭಾಗವಾಗಿ ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಕಾಲೇಜುಗಳ ಡೀನ್‌ಗಳನ್ನು ಭೇಟಿಯಾದರು, ಉಪಕುಲಪತಿಗಳು ಮತ್ತು ಕಾಲೇಜು ಮುಖ್ಯಸ್ಥರು ಮುಂಬರುವ ವರ್ಷದ ಶೈಕ್ಷಣಿಕ ಆದ್ಯತೆಗಳು ಮತ್ತು ಯೋಜನೆಗಳನ್ನು ಪರಿಶೀಲಿಸಿದರು.

ಪ್ರಸ್ತುತ ಜಿಎಂಯು ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಹೆಲ್ತ್ ಸೈನ್ಸ್, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಹಾಗೂ ನೂತನವಾಗಿ ಆರಂಭಿಸಲಾದ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಹೆಲ್ತ್‌ಕೇರ್’ ಸೇರಿದಂತೆ ಒಟ್ಟು 7 ಕಾಲೇಜುಗಳನ್ನು ನಿರ್ವಹಿಸುತ್ತಿದೆ. 111ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಹಾಗೂ 56 ದೇಶಗಳ ಬೋಧಕ ಸಿಬ್ಬಂದಿಯನ್ನು ಹೊಂದಿರುವ ಈ ಸಂಸ್ಥೆ 45ಕ್ಕೂ ಹೆಚ್ಚು ಮಾನ್ಯತೆ ಪಡೆದ ಕೋರ್ಸ್‌ಗಳನ್ನು ನೀಡುತ್ತಿದ್ದು, ಇದುವರೆಗೆ 5,000ಕ್ಕೂ ಅಧಿಕ ಪದವೀಧರರನ್ನು ಹೊರತಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಗೆ ಐಟಿ ಕಂಪನಿ ತರಲು ಪ್ರಯತ್ನ
ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ