ಭಾರತೀಯ ಅಧ್ಯಾತ್ಮ ನೈಜ ಜಾತ್ಯತೀತವಾದ: ಪೇಜಾವರ ಶ್ರೀ

KannadaprabhaNewsNetwork |  
Published : Sep 09, 2026, 02:45 AM IST
07ಪೇಜಾವರ | Kannada Prabha

ಸಾರಾಂಶ

ಭಾರತೀಯ ಅಧ್ಯಾತ್ಮಕ್ಕಿಂತ ಉತ್ತಮವಾದ ಮತ್ತೊಂದು ಸೆಕ್ಯುಲರಿಸಮ್ ಇಡೀ ಪ್ರಪಂಚದಲ್ಲೇ ಇರಲು ಸಾಧ್ಯವಿಲ್ಲ. ಸನಾತನ ಪರಂಪರೆಯ ಪ್ರತಿಯೊಂದರಲ್ಲೂ ಶ್ರೇಷ್ಠವಾದ ಸೆಕ್ಯುಲರಿಸಂ ತತ್ವಗಳು ತುಂಬಿವೆ ಹಾಗೂ ಅದೇ ನಿಜವಾದ ಜಾತ್ಯತೀತತೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ : ಭಾರತೀಯ ಅಧ್ಯಾತ್ಮಕ್ಕಿಂತ ಉತ್ತಮವಾದ ಮತ್ತೊಂದು ಸೆಕ್ಯುಲರಿಸಮ್ ಇಡೀ ಪ್ರಪಂಚದಲ್ಲೇ ಇರಲು ಸಾಧ್ಯವಿಲ್ಲ. ಸನಾತನ ಪರಂಪರೆಯ ಪ್ರತಿಯೊಂದರಲ್ಲೂ ಶ್ರೇಷ್ಠವಾದ ಸೆಕ್ಯುಲರಿಸಂ ತತ್ವಗಳು ತುಂಬಿವೆ ಹಾಗೂ ಅದೇ ನಿಜವಾದ ಜಾತ್ಯತೀತತೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ನವದೆಹಲಿಯಲ್ಲಿ ಚಾತುರ್ಮಾಸ ವ್ರತ ನಿರತರಾಗಿರುವ ಶ್ರೀಗಳು, ಅಲ್ಲಿನ ದೀನದಯಾಳು ಉಪಾಧ್ಯಾಯ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ ವಿದ್ಯಾರ್ಥಿ ಸಂವಾದದಲ್ಲಿ ಮಾತನಾಡಿದರು.ಆದರೆ ಪ್ರಸ್ತುತ, ರಾಜಕೀಯವಾಗಿ ರೂಪಿತವಾದ ಜಾತ್ಯತೀತವಾದವೇ ಶುದ್ಧ ತಪ್ಪು, ಅದರ ವ್ಯಾಖ್ಯಾನ ಬದಲಾಗಬೇಕು. ಎಲ್ಲರನ್ನೂ ಸ್ವೀಕರಿಸಿ, ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದ್ದೇವೇನೋ ಸರಿ. ಎಲ್ಲೆಡೆಯ ತಂಗಾಳಿ ಮನೆಯೊಳಗೆ ಬರಬೇಕು ನಿಜ, ಆದರೆ ಅದೇ ಗಾಳಿ ಬಿರುಗಾಳಿಯಾಗಿ ನಮ್ಮ ಮನೆಯನ್ನೇ ಅಲುಗಾಡಿಸಿದರೆ ಎಂದು ಪ್ರಶ್ನಿಸಿದ ಶ್ರೀಗಳು ಅವರು ಈ ಭಾರತೀಯರಲ್ಲದವರಿಗೆ ಮತದಾನ ಹಕ್ಕು ಕೊಡಲೇಬಾರದು ಎಂದರು.ಕಾಲೇಜಿನ ಪ್ರಾಚಾರ್ಯ ಪ್ರೊ ಹೇಮಚಂದ್ ಜೈನ್ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿಯವರು ಸ್ವಾಮೀಜಿಯವರನ್ನು ಸತ್ಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋದಿಂದ ಹೊಸ ಅವಕಾಶ ಸೃಷ್ಟಿ: ಸೊರಕೆ
ವೀರಯೋಧರ ಸಾಹಸ ಯುವ ಸಮೂಹಕ್ಕೆ ಪ್ರೇರಣೆ: ನಂದಾ ಕಾರ್ಯಪ್ಪ