ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
2023-24 ನೇ ಸಾಲಿನ ತಾಲೂಕಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.78.65 ರಷ್ಟು ಫಲಿತಾಂಶ ಬಂದಿದ್ದು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ.ಈ ಸಾಲಿನ ಎಸ್‌ಎಸ್‌ಎಲ್‌ಸಿಗೆ ಹಾಜರಾದ ಒಟ್ಟು 2445 ವಿದ್ಯಾರ್ಥಿಗಳಲ್ಲಿ ಬಾಲಕರು 1250 ಮಂದಿ, ಬಾಲಕಿಯರು 1195 ಮಂದಿ ಪರೀಕ್ಷೆ ಬರೆದಿದ್ದರು. ಬಾಲಕರು 873 ಮಂದಿ, ಬಾಲಕಿಯರು 1050 ಮಂದಿ ಉತ್ತೀರ್ಣರಾಗಿದ್ದು, ಒಟ್ಟು 1923 ಮಂದಿ ಉತ್ತೀರ್ಣರಾಗಿದ್ದಾರೆ. ಎಂದು ಬಿಇಒರಾಜಶೇಖರ್ ತಿಳಿಸಿದ್ದಾರೆ.26 ಸರ್ಕಾರಿ ಶಾಲೆಯಲ್ಲಿ 1056 ಮಂದಿ ಪಾಸಾಗಿದ್ದು, ಬಾಲಕರು 451, ಬಾಲಕಿಯರು 605 ಮಂದಿ ಪಾಸಾಗಿದ್ದಾರೆ. ಅನುದಾನಿತ 14 ಶಾಲೆಯಲ್ಲಿ ಒಟ್ಟು 423 ಮಂದಿ ಪಾಸಾಗಿದ್ದು, ಬಾಲಕರು 190 ಮಂದಿ, ಬಾಲಕಿಯರು 233 ಮಂದಿ ಪಾಸಾಗಿದ್ದಾರೆ.
ಅನುದಾನ ರಹಿತ 9 ಶಾಲೆಯಲ್ಲಿ ಒಟ್ಟು 444 ಪಾಸಾಗಿದ್ದು, ಬಾಲಕರು 232 ಮಂದಿ, ಬಾಲಕಿರು 212 ಮಂದಿ ಪಾಸಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಪತ್ರಿಕೆಗೆ ಮಾಹಿತಿ ಒದಗಿಸಿದ್ದಾರೆ. ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರತ್ನಮ್ಮ 625ಕ್ಕೆ 619 ಅಂಕ ಪಡೆದು ಜಿಲ್ಲೆ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಸರ್ಕಾರಿ ಆದರ್ಶ ವಿದ್ಯಾಲಯದ ನಂದಿನಿ ಎನ್.ಎಂ 625 ಕ್ಕೆ 615 ಅಂಕ ಪಡೆದರೆ, ಗುಂಡ್ಲುಪೇಟೆ ಕ್ರೈಸ್ಟ್ ಸಿಎಂಐ ಶಾಲೆಯ ಎಂ.ಎನ್.ಅಂಕಿತ 625 ಕ್ಕೆ 615 ಅಂಕ ಪಡೆದಿದ್ದಾರೆ. ಸರ್ಕಾರಿ ಆದರ್ಶ ವಿದ್ಯಾಲಯದ ಅಹಲಿಯ ಆನಂದ್ ಎ 625 ಕ್ಕೆ 613 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕಿಯರೇ ಮೇಲುಗೈ: ಗುಂಡ್ಲುಪೇಟೆ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕರು ಹಿನ್ನಡೆ ಅನುಭವಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು ಪಾಸಾದ 1923 ಮಂದಿಯಲ್ಲಿ ಬಾಲಕಿಯರು 1050 ಮಂದಿ, ಬಾಲಕರು 873 ಮಂದಿ ಮಾತ್ರ ಉತ್ತಿರ್ಣರಾಗಿದ್ದಾರೆ. ಈ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಗುಂಡ್ಲುಪೇಟೆ ತಾಲೂಕು ಪ್ರಥಮ ಸ್ಥಾನ ಗಟ್ಟಿಸಿಕೊಂಡಿದೆ. ಚಾಮರಾಜನಗರ ಜಿಲ್ಲೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ೭೧.೫೯ ಬಂದಿದೆ.ಗುಂಡ್ಲುಪೇಟೆ ತಾಲೂಕು ಶೇ.78.63 ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ.ಜಿಲ್ಲೆಗೆ ರತ್ನಮ್ಮ ಟಾಪರ್...
ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದ ಕೃಷಿಕನ ಮಗಳು ರತ್ನಮ್ಮ ಈ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ರತ್ನಮ್ಮನ ತಂದೆ ಸ್ವಾಮಿ ಕೃಷಿಕ, ತಾಯಿ ರೂಪ ಗೃಹಿಣಿಯಾಗಿದ್ದಾರೆ. ರತ್ನಮ್ಮಳ ತಾಯಿ ರೂಪ ಕನ್ನಡಪ್ರಭದೊಂದಿಗೆ ಮಾತನಾಡಿ, ನನ್ನ ಮಗಳು ಜಿಲ್ಲೆಗೆ ಟಾಪರ್ ಆಗಿರುವುದು ನಿಜಕ್ಕೂ ಖುಷಿ ತಂದಿದೆ. ಅವಳು ಏನು ಓದುತ್ತಾಳೋ ಅವಳನ್ನೇ ಕೇಳಿ ಎಂದರು. ನನ್ನ ಮಗಳು ಟ್ಯೂಶನ್ ಗೆ ಸೇರಿಸಿಲ್ಲ. ಊರಿಂದ ಬಸ್ ಹೋಗೋಳು, ಬರೋಳು ಅಷ್ಟೆ. ಮನೆಯಲ್ಲೇ ಓದಿಕೊಂಡು ಇಷ್ಟು ಅಂಕ ಪಡೆದಿದ್ದಾಳೆ ಎಂದು ಮಗ್ಧತೆಯಿಂದ ಹೇಳಿಕೊಂಡಿದ್ದಾರೆ. ರತ್ನಮ್ಮ ಕನ್ನಡಪ್ರಭದೊಂದಿಗೆ ಮಾತನಾಡಿ ನಾನು ಡಾಕ್ಟರ್ ಆಗಬೇಕು ಎಂಬ ಬಯಕೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.ಸರ್ಕಾರಿ ಆದರ್ಶ ಶಾಲೆ 3 ವಿದ್ಯಾರ್ಥಿಳಿಗೆ ಉನ್ನತ ರ್‍ಯಾಂಕ್
ಗುಂಡ್ಲುಪೇಟೆ: ಸರ್ಕಾರಿ ಆದರ್ಶ ವಿದ್ಯಾಯಲಯ ಮೂರು ಮಂದಿ ವಿದ್ಯಾರ್ಥಿಗಳು ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ. ಶಾಲೆಯ ರತ್ನಮ್ಮ 625 ಕ್ಕೆ 619 ಅಂಕ ಪಡೆದು ಜಿಲ್ಲೆಗೆ ಟಾಪರ್ ಹಾಗೂ ಶಾಲೆಗೂ ಟಾಪರ್ ಆಗಿ ಪ್ರಥಮ ಸ್ಥಾನ ಪಡೆದರೆ, ನಂದಿನಿ ಎನ್.ಎಂ 625 ಕ್ಕೆ 615 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರೆ, ಅಹಲಿಯ ಆನಂದ್ ಎ 625 ಕ್ಕೆ 613 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾಳೆ. ಸರ್ಕಾರಿ ಆದರ್ಶ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಗೆ ಟಾಪರ್ ಆಗಿದ್ದು ಸಂತಸ ತಂದಿದೆ ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷರೂ ಆದ ಪುರಸಭೆ ಸದಸ್ಯ ಎನ್.ಕುಮಾರ್, ಮುಖ್ಯ ಶಿಕ್ಷಕ ಎಂ.ಸುಕನ್ಯ ಎಂದಿದ್ದಾರೆ.ಶಾಸಕ ಗಣೇಶ್ ಪ್ರಸಾದ್ ಮೆಚ್ಚುಗೆ
ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬಂದಿದ್ದಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳವಾಗಿದೆ ಇದು ಸಂತಸ ತಂದಿದೆ. ಅಲ್ಲದೆ ತಾಲೂಕಿನ ಮಲ್ಲಮ್ಮನಹುಂಡಿ ರತ್ನಮ್ಮ ಜಿಲ್ಲೆಗೆ ಟಾಪಾರ್ ಖುಷಿ ತಂದಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಮುಂದಿನ ವರ್ಷದಲ್ಲಿ ಮತ್ತಷ್ಟು ಹೆಚ್ಚಿನ ನೀಡಿ ಮುಂದಿನ ಸಾಲಿನಲ್ಲಿ ಶೇ.100 ರಷ್ಟು ಪಡೆಯಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.