ಕನ್ನಡಪ್ರಭ ವಾರ್ತೆ ಗುರುಮಠಕಲ್
ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಉತ್ಸುಕರಾಗಿ ಸರತಿ ಸಾಲಿನಲ್ಲಿ ನಿಂತು ಹುಮ್ಮಸ್ಸಿನಿಂದ ತಮ್ಮ ಹಕ್ಕು ಚಲಾಯಿಸಿದರು.
ಭಾನುವಾರ ರಾತ್ರಿ ಮಳೆ ಸುರಿದ ಪರಿಣಾಮ ಸೋಮವಾರ ತಂಪೆರೆದ ವಾತಾವರಣ ಇದ್ದದರಿಂದ ಬಿಸಿಲಿನ ತಾಪ ಮತದಾರರಿಗೆ ತಾಗಲಿಲ್ಲ. ಹಿರಿಯ ನಾಗರಿಕರಿಗೆ ನೇರವಾಗಿ ಮತಗಟ್ಟೆ ಒಳಗಡೆ ಪ್ರವೇಶಿಸಿ ಮತಚಲಾಯಿಸಲು ಚುನಾವಣಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದರು.ಒಟ್ಟು 1586 ಮತದಾರರ ಪೈಕಿ 919 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪುರುಷರು 651 ಮತ್ತು ಮಹಿಳೆಯರು 268 ಮತದಾನ ಮಾಡಿದ್ದಾರೆ.
ಮತಗಟ್ಟೆ ಸಂಖ್ಯೆ 143/A ದಲ್ಲಿ ಒಟ್ಟು 451 ಮತದಾರರು ಮತದಾನ ಮಾಡಿದ್ದಾರೆ. 296 ಪುರುಷರು ಮತ್ತು 155 ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್ ತಿಳಿಸಿದ್ದಾರೆ.