ವಿದ್ಯಾರ್ಥಿಗಳಿಗೆ ಗುರು, ಗುರಿ ಮುಖ್ಯ: ದ್ವಾರಕಾನಂದ್‌

KannadaprabhaNewsNetwork |  
Published : Nov 30, 2024, 12:47 AM IST
11 | Kannada Prabha

ಸಾರಾಂಶ

‘ಶಿಕ್ಷಕರ ಸಂಪನ್ಮೂಲ ಉನ್ನತೀಕರಣ’ ಕುರಿತು ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮನೋಜ್ ಲೂಯಿಸ್ ಹಾಗೂ ‘ಕಂಪೆನಿ ಸೆಕ್ರಟರೀಸ್‌ಯಾಗಿ ವೃತ್ತಿ ಜೀವನ ಮತ್ತು ಉದ್ಯೋಗ ಅವಕಾಶಗಳು’ ಕುರಿತು ಮಣಿಪಾಲ್ ಟೆಕ್ನಾಲಜಿಯ ಕಂಪನಿ ಸೆಕ್ರೆಟರಿ ಚಂದನಾ ಟಿಕೋಠಿ ಉಪನ್ಯಾಸ ನೀಡಿದರು.

ಮೂಡುಬಿದಿರೆ: ವಿದ್ಯಾರ್ಥಿಗಳ ಪ್ರತಿ ಹೆಜ್ಜೆಯಲ್ಲೂ ಗುರುವಿನ ಸ್ಥಾನ ಇರುತ್ತದೆ ಇನ್‌ಸ್ಟಿಟ್ಯೂಟ್‌ ಆಫ್ ಕಂಪನಿ ಸೆಕ್ರೆಟ್ರೀಸ್ ಆಫ್ ಇಂಡಿಯಾದ (ಐಸಿಎಸ್‌ಐ) ಕೇಂದ್ರ ಸಮಿತಿ ಸದಸ್ಯ ಸಿ.ಎಸ್. ದ್ವಾರಕಾನಂದ್ ಹೇಳಿದರು. ಇನ್‌ಸ್ಟಿಟ್ಯೂಟ್‌ ಆಫ್ ಕಂಪನಿ ಸೆಕ್ರೆಟ್ರೀಸ್‌ ಆಫ್‌ ಇಂಡಿಯಾದ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ‘ಶಿಕ್ಷಣ ತಜ್ಞರ ಸಶಕ್ತೀಕರಣ- ಶಿಕ್ಷಕರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.ಇಷ್ಟಪಟ್ಟು ಓದಬೇಕು. ಕಷ್ಟ ಪಟ್ಟು ಓದುವ ಹಾಗೆ ಆಗಬಾರದು. ವಿದ್ಯಾರ್ಥಿಗಳಿಗೆ ಗುರಿ ಅತಿ ಮುಖ್ಯ. ಯಾವುದಕ್ಕಾಗಿ ಓದುತ್ತಿದ್ದೇವೆ ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ನಿಮ್ಮ ಸಮಯವನ್ನು ಓದಿಗೆ ಮೀಸಲಿಡಬೇಕು. ಇಷ್ಟಪಟ್ಟು ಕೆಲಸ ಮಾಡಿದಾಗ ಅದು ಕಷ್ಟ ವೆನಿಸುವುದಿಲ್ಲ ಎಂದು ಕಿವಿಮಾತು ಹೇಳಿದರು.

ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರಜ್ವಲ್ ಆಚಾರ್ ಮಾತನಾಡಿ, ಶಿಕ್ಷಕರು ತುಂಬಾ ಸವಾಲುಗಳನ್ನು ಎದುರಿಸಬೇಕಾಗಿದೆ. ಶಿಕ್ಷಣ ನೀಡುವ ಜೊತೆಗೆ ತಂತ್ರಜ್ಞಾನಕ್ಕೆ ಸ್ಪಂದಿಸಬೇಕು. ನಾಳೆಯ ಸಮಾಜಕ್ಕೆ ನಾಯಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲೆ ಇದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಕೃತಜ್ಞರಾಗಿರಬೇಕು. ಮೊದಲು ನಿಮ್ಮ ಯೋಚನೆ ಬದಲಾಯಿಸಿಕೊಳ್ಳಿ. ಎಲ್ಲ ಶಿಕ್ಷಣ ಕ್ಷೇತ್ರಕ್ಕೂ ಅದರದೇ ಆದ ವಿಶೇಷತೆ ಇದೆ ಎಂದರು.

ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿದರು.

‘ಶಿಕ್ಷಕರ ಸಂಪನ್ಮೂಲ ಉನ್ನತೀಕರಣ’ ಕುರಿತು ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮನೋಜ್ ಲೂಯಿಸ್ ಹಾಗೂ ‘ಕಂಪೆನಿ ಸೆಕ್ರಟರೀಸ್‌ಯಾಗಿ ವೃತ್ತಿ ಜೀವನ ಮತ್ತು ಉದ್ಯೋಗ ಅವಕಾಶಗಳು’ ಕುರಿತು ಮಣಿಪಾಲ್ ಟೆಕ್ನಾಲಜಿಯ ಕಂಪನಿ ಸೆಕ್ರೆಟರಿ ಚಂದನಾ ಟಿಕೋಠಿ ಉಪನ್ಯಾಸ ನೀಡಿದರು.

ಕಂಪನಿ ಸೆಕ್ರೆಟರಿಗಳಾದ ರಾಕೇಶ್ ನಾಯಕ್, ಸಂತೋಷ್ ಪ್ರಭು, ಸಿದ್ದೇಶ್ ಭಕ್ತ ಹಾಗೂ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ. ಇದ್ದರು.

ಸಹಾಯಕ ಪ್ರಾಧ್ಯಾಪಕಿ ಸಮನ್ ಸೈಯದ್ ಕಾರ್ಯಕ್ರಮ ನಿರೂಪಿಸಿದರು. ಅಪರ್ಣಾ ಕೆ. ಸ್ವಾಗತಿಸಿದರು. ಸುಪ್ರೀತಾ ನಾಯಕ್ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ