ವಿಶ್ವಗುರು ಬಸವಣ್ಣ ಸಂದೇಶ ಇಂದಿಗೂ ಲೋಕಮಾನ್ಯ

KannadaprabhaNewsNetwork |  
Published : May 08, 2024, 01:12 AM IST
ಅಅಅ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ವಿಶ್ವಗುರು ಬಸವಣ್ಣನವರು ಮಾನವೀಯತೆಯನ್ನು ಸಾರಿ ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವಗುರು ಬಸವಣ್ಣನವರು ಮಾನವೀಯತೆಯನ್ನು ಸಾರಿ ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಬೆಳಗಾವಿ ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭೆ ಜಿಲ್ಲಾ ಘಟಕ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ ಎಂದರು.ಇಂದು ನಾವೆಲ್ಲ ಒಳಪಂಗಡಗಳನ್ನು ಮಾಡಿಕೊಂಡು ಹೋರಾಡುತ್ತಿದ್ದೇವೆ ಅದನ್ನು ಬದಿಗೆ ಇಟ್ಟು ಸಾಂಘಿಕವಾಗಿ ಸಮಾಜವನ್ನು ಕಟ್ಟಬೇಕಾಗಿದೆ. ಅಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಪ್ರಗತಿಗಾಗಿ ಹೋರಾಡಿದರು. 800 ವರ್ಷಗಳಾದರೂ ಅವರ ವಿಚಾರಗಳು ಲೋಕ ಪೂಜ್ಯವೆನಿಸಿವೆಕೊಂಡಿವೆ ಎಂದು ತಿಳಿಸಿದರು.ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಣ್ಣನವರ ಮಾನವೀಯತೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮೊದಲು ನಡೆಯಬೇಕಾಗಿದೆ. ನೈತಿಕ ಬದುಕು ನಮ್ಮದಾದರೆ ಸಮಾಜ ಸುಧಾರಣೆ ಸಾಧ್ಯ. ನಡೆನುಡಿ ಒಂದಾಗಿ ಜೀವನವನ್ನು ರೂಪಿಸಿಕೊಳ್ಳುವ ಮಹತ್ತರ ಕಾರ್ಯ ಎಲ್ಲರಿಂದ ನಡೆಯಬೇಕಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ವಕೀಲ ಎಂ.ಬಿ.ಜೀರಲಿ, ಡಾ.ಎಚ್.ಬಿ.ರಾಜಶೇಖರ, ಡಾ.ಎಸ್.ಎಮ್.ದೊಡ್ಡಮನಿ, ರಾಜು ಹತ್ತರಕಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ ಪಾಟೀಲ. ಉಪಾಧ್ಯಕ್ಷ ಸುಜೀತ ಮುಳಗುಂದ, ಪ್ರಸಾದ ಹಿರೇಮಠ, ರಾಜು ಟೋಪಣ್ಣನವರ, ಬಾಲಚಂದ್ರ ಬಾಗಿ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ ಮೊದಲಾದವರು ಉಪಸ್ಥಿತರಿದ್ದರು.ಬಾಕ್ಸ್‌....

ಬೈಕ್ ರ‍್ಯಾಲಿನೂರಾರು ಸಂಖ್ಯೆಯಲ್ಲಿ ಭಕ್ತರು ಬಸವಣ್ಣನವರ ಪ್ರತಿಮೆ ಹಾಗೂ ಬಾವುಟವನ್ನು ಹಿಡಿದುಕೊಂಡು ಬೈಕ್ ರ‍್ಯಾಲಿಯನ್ನು ಯಶಸ್ಸುಗೊಳಿಸಿದರು. ರ‍್ಯಾಲಿಯು ಲಿಂಗಾಯತ ಭವನ, ಶಿವಬಸವನಗರ ಮಾರ್ಗದಿಂದ ಪ್ರಾರಂಭವಾಗಿ ನಾಗನೂರ ಮಠ, ರಾಮದೇವ ಹೊಟೇಲ್, ಚನ್ನಮ್ಮ ವೃತ್ತ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬೋಗಾರ್‌ವೆಸ್‌, ಟಿಳಕಚೌಕ, ಕಪಿಲೇಶ್ವರ ಮೇಲ್ಸೇತುವೆ, ಶಿವಾಜಿ ಉದ್ಯಾನ, ಶಹಾಪೂರ ಮೂಲಕ ಬಸವೇಶ್ವರ ಸರ್ಕಲ್ (ಖಾಸಬಾಗ) ನಾಥಪೈ ಸರ್ಕಲ್, ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದಿಕ ಕಾಲೇಜ ಮಾರ್ಗವಾಗಿ ಬಸವವೃತ್ತ(ಗೋವಾ ವೇಸ್)ವರೆಗೆ ಜರುಗಿತು.

ಕೋಟ್‌...ಇಂದು ದೇಶ ವಿದೇಶದಲ್ಲಿ ಬಸವಣ್ಣನವರ ವಚನಗಳು ಕುರಿತು ಅಧ್ಯಯನಗಳು ನಡೆಯುತ್ತಿವೆ. ಅವರು ಕನ್ನಡ ನಾಡಿನಲ್ಲಿ ಅವತರಿಸಿರುವುದು ನಮ್ಮ ಸೌಭಾಗ್ಯ ನಾಡಿನುದ್ದಗಲಕ್ಕೂ ನಮ್ಮ ಯುವಜನರು ಅವರ ಸಂದೇಶಗಳನ್ನು ಅರಿಯುವಂತಾಗಬೇಕು. ಬಸವ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು. ಈ ನಿಮಿತ್ತ ಆಯೋಜಿಸಿರುವ ಬೈಕ್ ರ‍್ಯಾಲಿ ಬಸವ ಜಾಗೃತಿಯನ್ನುಂಟು ಮಾಡಲಿ.-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?