ಭಾರತೀಯ ಸಂಪ್ರದಾಯದಲ್ಲಿ ಗುರುವಿಗೆ ವಿಶೇಷ ಸ್ಥಾನ

KannadaprabhaNewsNetwork |  
Published : Jul 15, 2025, 11:45 PM IST
ಪೋಟೊ-೧೫ ಎಸ್.ಎಚ್.ಟಿ.೧ಕೆ-ಗುರುಪೂರ್ಣಿಮೆ ನಿಮಿತ್ಯ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ಮಠದ ಪೂಜ್ಯರಾದ ಬಸವರಾಜ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಿ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ಕಡ್ಲಿಗಡಬ ಹುಣ್ಣಿಮೆಯೊಂದಿಗೆ ಬರುವ ಗುರುಪೂರ್ಣಿಮೆ ನಿಮಿತ್ತ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಮಹಾಸ್ವಾಮಿಗಳಿಗೆ ಶಿರಹಟ್ಟಿ ಮಂಡಲ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರಣ್ಣ ಅಂಗಡಿ ಹಾಗೂ ಸಂಗಡಿಗರು ಗೌರವ ಸಮರ್ಪಣೆ ಸಲ್ಲಿಸಿ ಆಶೀರ್ವಾದ ಪಡೆದರು.

ಶಿರಹಟ್ಟಿ: ಕಡ್ಲಿಗಡಬ ಹುಣ್ಣಿಮೆಯೊಂದಿಗೆ ಬರುವ ಗುರುಪೂರ್ಣಿಮೆ ನಿಮಿತ್ತ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಮಹಾಸ್ವಾಮಿಗಳಿಗೆ ಶಿರಹಟ್ಟಿ ಮಂಡಲ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರಣ್ಣ ಅಂಗಡಿ ಹಾಗೂ ಸಂಗಡಿಗರು ಗೌರವ ಸಮರ್ಪಣೆ ಸಲ್ಲಿಸಿ ಆಶೀರ್ವಾದ ಪಡೆದರು.ಈ ವೇಳೆ ವೀರಣ್ಣ ಅಂಗಡಿ ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಗುರುವಿಗೆ ವಿಶೇಷ ಸ್ಥಾನವಿದ್ದು, ಗುರುವಿನ ಸ್ಮರಣೆಗೆ ಮೀಸಲಾದ ಪವಿತ್ರ ದಿನವಾಗಿದೆ. ಪ್ರತಿಯೊಬ್ಬ ಸಾಧಕನಿಗೆ ಒಬ್ಬ ಗುರು ಮಾರ್ಗದರ್ಶಕನಾಗಿರುತ್ತಾನೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ಅನುಭವದ ನುಡಿಗಳನ್ನು ಎಲ್ಲರೂ ಅರ್ಥೈಸಿಕೊಂಡು ಮುನ್ನಡೆಯಬೇಕೆಂದು ಕರೆ ನೀಡಿದರು. ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸುವ ಜ್ಞಾನದ ಬೆಳಕನ್ನು ಹೊತ್ತಿಸುವ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗಲೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ನಮ್ಮ ಜೀವನಕ್ಕೆ ಬೇಕಾದ ಅರಿವನ್ನು ಕೊಡುವವನು, ಬದುಕಿನ ಕತ್ತಲೆಯನ್ನು ತೊಲಗಿಸುವವನು ಗುರು. ವ್ಯಕ್ತಿಯಾಗಲಿ ಸಮಾಜವಾಗಲಿ ದಾರಿ ತಪ್ಪಿದೆ ಎಂದರೆ ಅದಕ್ಕೆ ಕಾರಣ ಸರಿಯಾದ ಶಿಕ್ಷಣದ ಕೊರತೆ. ಶಿಕ್ಷಣ ಕೊರತೆಯಾಗಿದೆ ಎಂದರೆ ನಮಗೆ ಯೋಗ್ಯ ಗುರು ದೊರೆತಿಲ್ಲ ಎಂದೇ ಹೇಳಬಹುದು.ಗುರುಪೂರ್ಣಿಮೆಯ ಶುಭದಿನದಂದು ನಾವು ನಮ್ಮ ಹಿರಿಯರಿಗೆ, ಗುರುಗಳಿಗೆ, ಪೂಜ್ಯರಿಗೆ ಗೌರವವನ್ನು, ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಮಹರ್ಷಿ ವ್ಯಾಸರು ಜನಿಸಿದ್ದರು ಎನ್ನುವ ಕಾರಣಕ್ಕಾಗಿ ಇದನ್ನು ವ್ಯಾಸ ಪೂರ್ಣಿಮಾವೆಂದು ಕರೆಯಲಾಗುತ್ತದೆ. ವ್ಯಾಸರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು ರಚಿಸಿದವರು ಎಂದು ತಿಳಿಸಿದರು. ಬಸವರಾಜ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಗುರುವರ್ಯರನ್ನು ಸ್ಮರಿಸುತ್ತ ಅವರು ತೋರುವ ಹಾದಿಯಲ್ಲೇ ನಡೆದರೆ ಜೀವನ ಸಾರ್ಥಕತೆ ಹೊಂದುವುದಲ್ಲದೇ ಇಂದಿನ ಈ ಗುರು ಪೂರ್ಣಿಮೆಗೆ ಅರ್ಥ ಬರಲು ಸಾಧ್ಯ ಎಂದ ಅವರು, ಒಂದಕ್ಷರ ಕಲಿಸಿದಾತನೆ ಯಮಗೆ ಗುರು ತಮ್ಮ ಗುರುಭಕ್ತಿ ಹಾಗೂ ಶ್ರದ್ಧೆ ಸದಾ ಹೀಗೆ ನಡೆಯುತ್ತಿರಲಿ, ಯುವಕರಿಗೆ, ಕಿರಿಯರಿಗೆ, ಮಾರ್ಗದರ್ಶರಾಗಿ ಎಂದು ಆಶೀರ್ವದಿಸಿದರು.ರಣತೂರ ಗ್ರಾಮದ ಸ್ನೇಹ ಬಳಗದೊಂದಿಗೆ ಗುರುಗಳಿಗೆ ನಮಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಶಂಕರ ಮರಾಠೆ, ಗಂಗಾಧರ್ ಬಳಿಗಾರ್, ವಿಠೋಬ ಎನ್.ಬಿ., ಪರಶು ವಡವಿ, ದೇವೇಂದ್ರ ಶಲವಡಿ, ಅಶೋಕ ಬಳ್ಳಾರಿ, ಬಾರ್ಗವ ಗದಿಗಿನ, ಮಲ್ಲನಗೌಡ ಪಾಟೀಲ, ಯಲ್ಲಪ್ಪ ಹೂಗಾರ, ಮಲ್ಲಿಕಾರ್ಜುನ ಪ್ಯಾಟಿ ಪ್ರಶಾಂತ ಪಟ್ಟಣ ಶೆಟ್ರ ಸುರೇಶ ಗೂಪಾಳಿ ಇತರರು ಇದ್ದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ