ಈಶ್ವರ ಭಜನಾ ಮಂಡಳಿಗೆ ಗುರು ಕಾರುಣ್ಯ ಪ್ರಶಸ್ತಿ

KannadaprabhaNewsNetwork |  
Published : Jun 12, 2024, 12:43 AM IST
ಮಹೋತ್ಸವ | Kannada Prabha

ಸಾರಾಂಶ

ಗೋಕಾಕ: ಗದಗ ತಾಲೂಕಿನ ಹೊಸಹಳ್ಳಿ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಿಂದ ನೀಡಲಾಗುವ ಶ್ರೀ ಗುರುಕಾರುಣ್ಯ ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಈಶ್ವರ ಭಜನಾ ಮಂಡಳಿಗೆ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಶ್ರೀಮಠದಲ್ಲಿ ನಡೆದ ಶರಣ ಸಂಸ್ಕೃತಿ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ಗೋಕಾಕ: ಗದಗ ತಾಲೂಕಿನ ಹೊಸಹಳ್ಳಿ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಿಂದ ನೀಡಲಾಗುವ ಶ್ರೀ ಗುರುಕಾರುಣ್ಯ ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಈಶ್ವರ ಭಜನಾ ಮಂಡಳಿಗೆ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಶ್ರೀಮಠದಲ್ಲಿ ನಡೆದ ಶರಣ ಸಂಸ್ಕೃತಿ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.ವಿಶಿಷ್ಟ ಸೇವೆಗೆ ಶ್ರೀ ಗುರುಕಾರುಣ್ಯ ಪ್ರಶಸ್ತಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶರಣ ದಿ.ಪುಂಡಲೀಕಪ್ಪ ಪಾರ್ವತೇರ ಮಹಾರಾಜರು ಸೇರಿ ಸ್ಥಳೀಯ ಹಲವು ಧಾರ್ಮಿಕ ಚಿಂತನೆಯುಳ್ಳ ಶರಣರು ನಾಡಿನ ಪರಂಪರೆ ಉಳಿಸುವ ಉದ್ಧೇಶದಿಂದ 1982 ರಲ್ಲಿ ಶ್ರೀ ಈಶ್ವರ ಭಜನಾ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ಇಲ್ಲಿವರೆಗೂ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ.

ಶಿವ ಭಜನೆಯೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ವಲಯದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಹೊಸಹಳ್ಳಿ ಶ್ರೀಮಠದ ಅಭಿನವ ಬೂದೀಶ್ವರ ಶ್ರೀಗಳು ಶ್ರೀ ಈಶ್ವರ ಭಜನಾ ಮಂಡಳಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ, ಕಮತಗಿ ಶ್ರೀಗಳು, ಅಂಕಲಗಿ ಶ್ರೀಗಳು, ಮುನವಳ್ಳಿ ಶ್ರೀಗಳು, ಚಿಕೆನಕೊಪ್ಪದ ಶರಣರು ಸೇರಿದಂತೆ ಭಜನಾ ಮಂಡಳಿ ಪದಾಧಿಕಾರಿಗಳು ಭಕ್ತರು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ