ಶಿರಹಟ್ಟಿ: ಗುರುವಿನ ಋಣ ಎಷ್ಟು ಜನ್ಮಗಳಾದರೂ ತೀರಿಸಲು ಸಾಧ್ಯವಿಲ್ಲ. ವಿದ್ಯೆ ಕಲಿಸಿದ ಗುರು ಹಾಗೂ ಸಂಸ್ಕಾರ ಕಲಿಸಿದ ತಾಯಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಅಮೂಲ್ಯ ಜೀವನ ರೂಪಿಸುವಲ್ಲಿ ಅವಿರತ ಶ್ರಮಿಸುವ ಗುರು ಎಂಬ ಪದಕ್ಕೆ ಮತ್ತೊಂದು ಪದವಿಲ್ಲ ಎಂದು ಬಿಜೆಪಿ ನಗರ ಶಕ್ತಿ ಕೇಂದ್ರ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಭಾನುವಾರ ಸಂಜೆ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಗುರುಪೌರ್ಣಿಮೆ ಪ್ರಯುಕ್ತ ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ ನಮ್ಮ ಭವ್ಯ ಭವಿಷ್ಯ ಹಾಗೂ ಜೀವನಕ್ಕೆ ಅಗತ್ಯವಾದ ಮೌಲ್ಯ ತಿಳಿಹೇಳಿ ನಮ್ಮ ಜೀವನದ ಭದ್ರ ಬುನಾದಿಗೆ ಅಡಿಗಲ್ಲು ಹಾಕಿದ ಹಾಗೂ ಶಿಕ್ಷಕರನ್ನು ಸನ್ಮಾನಿಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ಕಾಣದ ಗುರುವಿಗೆ ಕೈ ಮುಗಿಯುವದಕ್ಕಿಂತ ನಮ್ಮ ಹೃದಯಲ್ಲಿರುವ ಕಲ್ಮಶ ತೆಗೆದು ಜಗದ ಪ್ರೀತಿ ತೋರಿಸುವ ಹಾಗೂ ಪ್ರಪಂಚದ ಅರಿವನ್ನು ಮೂಡಿಸುವ ಅತ್ಯಂತ ಮಹತ್ಕಾರ್ಯ ಮೂಡಿಸುವ ಗುರುವಿಗೆ ಋಣ ತೀರಿಸುವ ಕೆಲಸ ಆಗಬೇಕಿದೆ.ಮೊಗದಲ್ಲಿ ಸಿಡುಕ ತೋರಿಸಿದರೂ ಹೃದಯದಲ್ಲಿ ನಿಷ್ಕಲ್ಮಷ ಪ್ರೀತಿ ತೋರುವವನು ಗುರು ಮಾತ್ರ ಎಂಬ ಸತ್ಯ ನಾವೆಲ್ಲರೂ ಅರಿಯಬೇಕಿದೆ. ಇದು ನಗ್ನ ಸತ್ಯ ಕೂಡ. ಶಿಸ್ತು ಕ್ಷಮೆ ಹಾಗೂ ಕರುಣೆ ದಯ ಪಾಲಿಸುವ ಶಕ್ತಿ ಇರುವುದು ಶಿಕ್ಷಕರಲ್ಲಿ ಮಾತ್ರ. ಆದರೆ ದುರದೃಷ್ಟಕರ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಮೌಲ್ಯಯುತ ಅಂಶಗಳನ್ನು ನಾವು ಕಾಣದಾಗಿದ್ದೇವೆ. ವಿದ್ಯಾರ್ಥಿಗಳಲ್ಲಿ ಅಂತಹ ಪ್ರವೃತ್ತಿ ತೊಲಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಗುರು ಎಚ್.ಎಂ.ದೇವಗಿರಿ, ನಿಂಗಪ್ಪ ಕರಿಗಾರ್, ಕೆ.ಎ.ಬಳೆಗೇರ, ಎಂ.ಆರ್. ಡಾಲಾಯತ್, ಸಿ.ಪಿ.ಕಾಳಗಿ, ಎನ್.ಆರ್.ಕುಲಕರ್ಣಿ, ಗುರುನಾಥ ಸರ್ಜಾಪುರ, ಐ.ಜಿ. ಬಡಿಗೇರ್, ರಾಮಪ್ಪ ಕಮತ್ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಂಡಳದ ಮಹಿಳಾ ಮೋರ್ಚಾ ಅಧ್ಯಕ್ಷೆ ನಂದಾ ಪಲ್ಲೆದ, ಮಂಡಳದ ಓಬಿಸಿ ಅಧ್ಯಕ್ಷ ರಾಮಣ್ಣ ಕಂಬಳಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ, ಅಕ್ಬರ್‌ಸಾಬ್ ಯಾದಗಿರಿ, ಬಸವರಾಜ ತುಳಿ, ಗೂಳಪ್ಪ ಕರಿಗಾರ್, ಅಶೋಕ್ ವರವಿ, ಪರಶುರಾಮ್ ಡೊಂಕಬಳ್ಳಿ, ಮಂಜುನಾಥ ಸೊಂಟನೂರ್, ರವಿ ಹಳ್ಳಿ, ನಾಗೇಶ್ ಇಂಗಳಗಿ, ರಾಜು ಮಾತಾಡಿ, ಶಿವು ಬಟ್ಟೂರ್, ಮಲ್ಲಿಕಾರ್ಜುನ ಕಬಾಡಿ, ರೂಪಾ ಪಾಶ್ಚಾಪೂರ್, ದೀಪಾ ಪಾಶ್ಚಾಪೂರ್, ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ವೀರಣ್ಣ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.