ರಾಜಯೋಗಿನಿಗೆ ಫಲತಾಂಬೂಲ ಗೌರವ । ವ್ಯಾಸ ಪೂರ್ಣಿಮೆಗೆ ಋಗ್ವೇದಿ ಯೂತ್ ಕ್ಲಬ್ ಕಾರ್ಯಕ್ರಮ
ಪೂರ್ಣತೆ, ಸಂಪನ್ನತೆ, ಸಂಪೂರ್ಣತೆಗೆ ಕೊಂಡೊಯ್ಯುವ ಗುರು ಸತ್ಯ ಜ್ಞಾನ, ಸತ್ಯಮಾರ್ಗ, ಸನ್ಮಾರ್ಗವನ್ನು ತೋರಿಸುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ವ್ಯಾಸ ಪೂರ್ಣಿಮೆಯ ಅಂಗವಾಗಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಅವರಿಂದ ಫಲ ತಾಂಬೂಲ ಗೌರವ ಸ್ವೀಕರಿಸಿ ಮಾತನಾಡಿದರು.ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಧರ್ಮದ ಮುಖ್ಯ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಗುರು ಅಗತ್ಯ. ಗುರು ಜ್ಞಾನದ ಬೆಳಕು .ಮುಕ್ತಿಯ ಮಾರ್ಗದರ್ಶಕ. ಸನ್ಮಾರ್ಗದ ಶ್ರೇಷ್ಠತೆಯ ಮೂಲಕ ಶಿಷ್ಯ ವೃಂದಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನ, ಆತ್ಮದ ಶಕ್ತಿಯನ್ನು, ಜೀವನದ ಸಂದೇಶಗಳನ್ನ ತಲುಪಿಸುವ ಗುರು ಮತ್ತು ಎಲ್ಲಾ ಸದ್ಗುರುಗಳಿಗೆ ನಮನಗಳನ್ನು ಸಲ್ಲಿಸುವ ದಿನವಾಗಿದೆ ಎಂದು ಹೇಳಿದರು.
ವ್ಯಾಸರು ಭಗವಂತನ ಅವತಾರವಾಗಿ ಭಾರತೀಯ ಸನಾತನ ಧರ್ಮದ ಸಾಹಿತ್ಯ ,ಸಂಸ್ಕೃತಿಯ, ಧರ್ಮದ ಮೌಲ್ಯಗಳಾದ ವೇದಗಳನ್ನು ವಿಭಜಿಸಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳನ್ನು ನೀಡಿ ಸಂಸ್ಕೃತಿಯ ದಿವ್ಯ ಸಂದೇಶಗಳನ್ನು ಅರ್ಥ ಮಾಡಿಸಿದ ಮಹಾನ್ ವ್ಯಕ್ತಿ ಹಾಗೂ ಶಕ್ತಿ ಎಂದು ತಿಳಿಸಿದರು.
ಗುರುಭಕ್ತಿಯನ್ನು ಸದಾ ಇಟ್ಟುಕೊಳ್ಳೋಣ. ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. ಗುರುಗಳನ್ನು ಗೌರವಿಸಿ ಸಂತೋಷ ಪಡೋಣ ಎಂದು ತಿಳಿಸಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ರವರು ಹಲವು ದಶಕಗಳಿಂದ ಚಾಮರಾಜನಗರದಲ್ಲಿ ಜನತೆಗೆ ಸನ್ಮಾರ್ಗದ ದಿವ್ಯ ಸ್ಪೂರ್ತಿಯ ಸಂದೇಶಗಳನ್ನು ನೀಡಿ, ಶಾಂತಿಯ ಜೀವನವನ್ನ ನಡೆಸಲು ಗುರುವಾಗಿ ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ ಎಂದರು.
ಚಾಮರಾಜನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ವ್ಯಾಸ ಪೂರ್ಣಿಮೆಯ ಅಂಗವಾಗಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ರಾಜಯೋಗಿನಿ ಬಿಕೆ ದಾನೇಶ್ವರಿ ರವರಿಗೆ ಫಲ ತಾಂಬೂಲಗಳನ್ನು ನೀಡಿ ಸುರೇಶ್ ಎನ್.ಋಗ್ವೇದಿ ಗೌರವಿಸಿದರು.